
ನವ ದೆಹಲಿ – ಭಾರತೀಯ ಮೂಲದ ೬೫೭ ಅಪರೂಪದ ಮತ್ತು ಪ್ರಾಚೀನ ಮೂರ್ತಿಗಳನ್ನು ಅಮೆರಿಕಾ ಭಾರತಕ್ಕೆ ಮರಳಿ ನೀಡಿದೆ. ಈ ಮೂರ್ತಿಗಳ ಮೌಲ್ಯವು ಅಂದಾಜು ೧೨೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಕಳೆದ ಅನೇಕ ವರ್ಷಗಳಲ್ಲಿ ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆದಾರರ ತಂಡಗಳು ಈ ಮೂರ್ತಿಗಳನ್ನು ಕಳ್ಳಸಾಗಣೆ ಮಾಡಿ ಅಮೆರಿಕಾಕ್ಕೆ ಸಾಗಿಸಿದ್ದವು. ಮ್ಯಾನ್ ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯು ಕಳ್ಳಸಾಗಣೆಯ ತನಿಖೆಯ ನಂತರ ಈ ಕಲಾಕೃತಿಗಳನ್ನು ಭಾರತಕ್ಕೆ ಮರಳಿ ನೀಡುವ ಘೋಷಣೆ ಮಾಡಿದೆ. ಈ ಮೂರ್ತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದರಿಂದ ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆ ಜಾಲಕ್ಕೆ ಸಂಬಂಧಿಸಿದ ಒಂದು ದೊಡ್ಡ ‘ಸಾಂಸ್ಕೃತಿಕ ಕಳ್ಳತನ’ದ ರಹಸ್ಯ ಬಯಲಾಗಿದೆ. ಕಳ್ಳಸಾಗಾಣಿಕೆ ಮಾಡುವ ಸುಭಾಷ ಕಪೂರ್ ಮತ್ತು ನ್ಯಾನ್ಸಿ ವಿನರ್ ಅವರ ಕ್ರಿಮಿನಲ್ ತಂಡಗಳ ಕುರಿತು ನಡೆದ ತನಿಖೆಯ ವೇಳೆ ಅಮೆರಿಕಾದ ಅಧಿಕಾರಿಗಳು ಈ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದರು. ಕಳ್ಳತನವಾಗಿದ್ದ ಕಲಾಕೃತಿಗಳನ್ನು ಭಾರತಕ್ಕೆ ಮರಳಿ ತರಲು ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ ಎಂದು ಮಹಾವಾಣಿಜ್ಯ ಆಯುಕ್ತರು ಹೇಳಿದ್ದಾರೆ. ಅಮೆರಿಕಾದಿಂದ ಭಾರತಕ್ಕೆ ಮರಳಿ ದೊರೆತ ಈ ಕಲಾಕೃತಿಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಪೋಸ್ಟ್ ಮಾಡಿದ್ದಾರೆ.
The United States has returned 657 stolen ancient idols to India – a major step in reclaiming our civilisational heritage 🙏
Among the most notable pieces:
🔸 Bronze Statue of Avalokiteshvara
🔸 Sandstone Dancing Ganesha
🔸 Red Sandstone Buddha (Abhaya Mudra)PC: School of… pic.twitter.com/ZKipGom9K7
— Sanatan Prabhat (@SanatanPrabhat) May 1, 2026
ಕಳುವಾದ ಮೂರ್ತಿಗಳು ಯಾವವು?
೧. ಅವಲೋಕಿತೇಶ್ವರನ ಒಂದು ಕಂಚಿನ ಪ್ರತಿಮೆ: ಈ ಪ್ರತಿಮೆಯನ್ನು ರಾಯಪುರದ ಮಹಂತ ಘಾಸಿದಾಸ ಸ್ಮಾರಕ ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ೧೯೮೨ ರಲ್ಲಿ ಇದನ್ನು ಕದ್ದು ಅಮೆರಿಕಾಕ್ಕೆ ಸಾಗಿಸಲಾಗಿತ್ತು. ೨೦೨೫ ರಲ್ಲಿ ನ್ಯೂಯಾರ್ಕ್‌ನ ಒಂದು ಖಾಸಗಿ ಸಂಗ್ರಹದಿಂದ ಇದನ್ನು ವಶಪಡಿಸಿಕೊಳ್ಳಲಾಗಿದೆ.
೨. ಕೆಂಪು ಮರಳುಗಲ್ಲಿನ ಬುದ್ಧನ ಮೂರ್ತಿ: ಕಳ್ಳಸಾಗಾಣಿಕೆದಾರ ಸುಭಾಷ ಕಪೂರ್ ನ ಕಳ್ಳಸಾಗಾಣಿಕೆ ಜಾಲದ ಮೂಲಕ ಈ ಮೂರ್ತಿಯನ್ನು ನ್ಯೂಯಾರ್ಕ್‌ಗೆ ಸಾಗಿಸಲಾಗಿತ್ತು.
೩. ಮಧ್ಯಪ್ರದೇಶದ ಒಂದು ದೇವಸ್ಥಾನದಿಂದ ೨೦೦೦ ರಲ್ಲಿ ಲೂಟಿ ಮಾಡಲಾಗಿದ್ದ ಮರಳುಗಲ್ಲಿನ ನೃತ್ಯ ಗಣೇಶನ ಮೂರ್ತಿಯನ್ನು ಸಹ ಮರಳಿ ಪಡೆಯಲಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
‘ನೌಕಾ ಮರುಬಳಕೆ’ ವಲಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ! : Ship Recycling
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಸಂಯುಕ್ತ ಅರಬ್ ಅಮೀರತ್ (UAE) ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿ ಖರೀದಿಸಲು ಮಾತುಕತೆ ನಡೆಸುತ್ತಿದೆ! : India UAE BrahMos Deal