ದೂರು ದಾಖಲಿಸಲು ಮತ್ತು ಟ್ರಸ್ಟ್‌ನ ಪುನಾರಚನೆ ಮಾಡಲು ಶಿಫಾರಸು

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡವು (SIT) ಮೊದಲ ಹಂತದ ತನಿಖಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ ಪ್ರಸಾದ್ ಅವರಿಗೆ ಸಲ್ಲಿಸಲಾಯಿತು. ಇದು 150 ಪುಟಗಳ ಪ್ರಾಥಮಿಕ ವರದಿಯಾಗಿದ್ದು, ಇದರಲ್ಲಿ 150 ಜನರ ವಿಚಾರಣೆಯ ವಿವರಗಳಿವೆ ಎಂದು ತಂಡ ತಿಳಿಸಿದೆ. ವಿಸ್ತೃತ ವರದಿಗಾಗಿ ತಂಡವು ಹೆಚ್ಚಿನ ಸಮಯವನ್ನು ಕೋರಿದೆ.
ಈ ವರದಿಯ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಇದರಲ್ಲಿ ಪ್ರಕರಣ ದಾಖಲಿಸುವುದರ ಜೊತೆಗೆ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಪುನಾರಚಿಸುವುದು, ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಿರಿಯ ಅಧಿಕಾರಿಯನ್ನು ನೇಮಿಸುವುದು ಮತ್ತು ಕಳೆದ 5 ವರ್ಷಗಳ ದೇಣಿಗೆಯ ಲೆಕ್ಕಪರಿಶೋಧನೆ (Audit) ನಡೆಸುವ ಶಿಫಾರಸುಗಳನ್ನು ಮಾಡಲಾಗಿದೆ. ದೇಣಿಗೆಯಲ್ಲಿನ ಅವ್ಯವಹಾರಗಳನ್ನು ತಡೆಯಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
200 ಕೋಟಿ ರೂಪಾಯಿಗಳ ಕಳ್ಳತನ ನಡೆದಿರುವ ಶಂಕೆ!
ಕಳ್ಳತನ ಪ್ರಕರಣದಲ್ಲಿ ಲವಕುಶ್, ಅವನೀಶ್, ಅನುಕಲ್ಪ್, ಕರುಣೆ ಮತ್ತು ರಾಮ್‌ಶಂಕರ್ ಅಲಿಯಾಸ್ ಟಿನ್ನು ಎಂಬ 5 ಶಂಕಿತರ ಮಾಹಿತಿಯ ಮೇರೆಗೆ 2 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಚಂಪತ್ ರಾಯ್ ಅವರ ಆಪ್ತರಾಗಿರುವ ಟಿನ್ನುನ ಮನೆಯಲ್ಲಿ ಚಿನ್ನ ಪತ್ತೆಯಾಗಿತ್ತು. ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಕಳ್ಳತನವು 200 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ್ದಾಗಿರಬಹುದು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ