ಗೌರವಾನ್ವಿತ ಪಶು ಕಲ್ಯಾಣ ಅಧಿಕಾರಿ ಶಿವಶಂಕರ್ ಸ್ವಾಮಿ ಅವರ ಗಂಭೀರ ಆರೋಪ
ವಕ್ಫ್ ಮಂಡಳಿಯ ಅಡಿಯಲ್ಲಿ ಭೂಮಿ ನೋಂದಣಿ ಆರೋಪ!

ಪುಣೆ – ಶಿವಾಜಿನಗರ ಪೊಲೀಸ್ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಪೊಲೀಸರಿಗೆ ನಮಾಜ್‌ಗಾಗಿ ಒಂದು ಸಣ್ಣ ಜಾಗವನ್ನು ನೀಡಲಾಗಿತ್ತು; ಆದರೆ ಆ ಜಾಗದ ಸುತ್ತ-ಮುತ್ತಲಿನ 10 ಗುಂಟೆ ಸರಕಾರಿ ಭೂಮಿಯನ್ನು ಅತಿಕ್ರಮಿಸಿ ಒಂದು ದೊಡ್ಡ ಪಂಚತಾರಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಸೂಕ್ಷ್ಮ ಪ್ರದೇಶದಿಂದ ದೇಶವಿರೋಧಿ ಕೃತ್ಯಗಳು ನಡೆಯುವ ಸಾಧ್ಯತೆಯಿದೆ ಮತ್ತು ಭದ್ರತೆಗೆ ಅಪಾಯವಿದೆ ಎಂದು ಗೌರವಾನ್ವಿತ ಪಶು ಕಲ್ಯಾಣ ಅಧಿಕಾರಿ ಶಿವಶಂಕರ್ ಸ್ವಾಮಿ ಅವರು ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಈ ಅನಧಿಕೃತ ಮಸೀದಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶಿವಶಂಕರ್ ಸ್ವಾಮಿ ಅವರು ಮಂಡಿಸಿರುವ ಗಂಭೀರ ಅಂಶಗಳು
೧. ೪೦೦ ರಿಂದ ೫೦೦ ಜನರ ಓಡಾಟ ಮತ್ತು ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ!
ಈ ಮಸೀದಿಯಲ್ಲಿ ಕೇವಲ ಪೊಲೀಸ್ ಇಲಾಖೆಯ ಮುಸ್ಲಿಂ ಸಿಬ್ಬಂದಿಗಳಿಗೆ ಮಾತ್ರ ನಮಾಜ್ ಮಾಡಲು ಅನುಮತಿ ಇತ್ತು. ಆದರೆ ವಾಸ್ತವದಲ್ಲಿ ಪುಣೆ ಕ್ಯಾಂಪ್, ಕೊಂಡ್ವಾ, ಖಡ್ಕಿ, ದಾಪೋಡಿ ಮುಂತಾದ ಭಾಗಗಳಿಂದ ಪ್ರತಿದಿನ 400 ರಿಂದ 500 ಜನರು ನಮಾಜ್‌ಗಾಗಿ ಬರುತ್ತಾರೆ. ಇದರಿಂದಾಗಿ ಡಿಸಿಪಿ ಬಂಗಲೆ ಪರಿಸರದಲ್ಲಿ ಅನಧಿಕೃತ ವಾಹನಗಳ ನಿಲುಗಡೆ ಹೆಚ್ಚಾಗಿದ್ದು, ಮಸೀದಿಯ ಮುಂಭಾಗದ ಮಾಡರ್ನ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಘಟನೆಗಳು ನಡೆಯುತ್ತಿವೆ. ಇದು ಸ್ಥಳೀಯ ಪೊಲೀಸ್ ಕುಟುಂಬಗಳ ಭದ್ರತೆಯ ಪ್ರಶ್ನೆಯನ್ನು ಉಂಟುಮಾಡಿದೆ. (ಒಬ್ಬ ಪಶು ಕಲ್ಯಾಣ ಅಧಿಕಾರಿಗೆ ಅರ್ಥವಾಗುವ ವಿಷಯ ಪೊಲೀಸರಿಗೆ ಯಾಕೆ ತಿಳಿಯುತ್ತಿಲ್ಲ? – ಸಂಪಾದಕರು)
೨. ಭಯೋತ್ಪಾದನಾ ನಿರೋಧಕ ದಳದ (ATS) ಕಚೇರಿಯ ಮೇಲೆ ಸಿಸಿಟಿವಿ ಮೂಲಕ ಕಣ್ಗಾವಲು?
ಹೊರ ರಾಜ್ಯದ ಇಬ್ಬರು ವಿವಾದಿತ ಮೌಲ್ವಿಗಳು ಇಲ್ಲಿ ಕಾನೂನುಬಾಹಿರವಾಗಿ ವಾಸವಿದ್ದು, ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ ಮತ್ತು ರಾತ್ರಿಯ ಸಮಯದಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಸಭೆಗಳು ಇಲ್ಲಿ ನಡೆಯುತ್ತಿವೆ ಎಂದು ಆರೋಪಿಸಲಾಗಿದೆ. (ಯಾವ ಸಭೆಗಳು ನಡೆಯುತ್ತವೆ? ಅದರಲ್ಲಿ ಯಾರ್ಯಾರು ಭಾಗವಹಿಸುತ್ತಾರೆ? ಎಂಬ ಬಗ್ಗೆ ಆಳವಾದ ತನಿಖೆಯಾಗುವುದು ಅಗತ್ಯವಾಗಿದೆ! – ಸಂಪಾದಕರು). ಕೊತ್ರೂಡ್ ಪ್ರದೇಶದಲ್ಲಿ ಭಯೋತ್ಪಾದಕರು ಸಿಕ್ಕಿಬಿದ್ದಾಗ, ಮಸೀದಿಯಿಂದ ಕೇವಲ 20 ಮೀಟರ್ ದೂರದಲ್ಲಿರುವ ಎಟಿಎಸ್ ಕಚೇರಿಯ ಮೇಲೆ ನಿಗಾ ಇಡಲು ಈ ಮತಾಂಧ ಪೊಲೀಸರು ಮತ್ತು ಮೌಲ್ವಿಗಳು ಮಸೀದಿಯ ಹಿಂಭಾಗದಿಂದ ಕಚೇರಿಯ ಕಡೆಗೆ ಸಿಸಿಟಿವಿ ಕ್ಯಾಮೆರಾವನ್ನು ತಿರುಗಿಸಿದ್ದರು. ಪೊಲೀಸರು ಆಕ್ಷೇಪಿಸಿದ ನಂತರ ಅದನ್ನು ಸರಿಪಡಿಸಲಾಯಿತು.
೩. ಸರಕಾರಿ ಜಾಗ ವಕ್ಫ್ ಮಂಡಳಿಯ ವಶಕ್ಕೆ!
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಮತಾಂಧ ಪೊಲೀಸ್ ಸಿಬ್ಬಂದಿಗಳು ಹೊರಗಿನ ಸಂಘಟನೆಗಳೊಂದಿಗೆ ಕೈಜೋಡಿಸಿ ಈ ಸರಕಾರಿ ಭೂಮಿಯನ್ನು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಿದ್ದಾರೆಂದು ಆರೋಪಿಸಲಾಗಿದೆ. ಈ ಗಂಭೀರ ವಿಷಯದ ಬಗ್ಗೆ ಸ್ಥಳೀಯ ಆಡಳಿತಕ್ಕೂ ಮಾಹಿತಿ ಇರಲಿಲ್ಲ. ಈ ಹಿಂದೆ ಈ ಪೊಲೀಸ್ ಪ್ರಧಾನ ಕಚೇರಿಯನ್ನು ಸ್ಫೋಟಿಸುವ ಬೆದರಿಕೆಗಳು ಬಂದಿದ್ದರಿಂದ, ಈ ಕುರಿತು ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
೪. ದೋಷಿ ಪೊಲೀಸರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಒತ್ತಾಯ!
ಶಿವಾಜಿನಗರ ಪೊಲೀಸ್ ಲೈನ್‌ನಲ್ಲಿ ಮದ್ದುಗುಂಡುಗಳ ಉಗ್ರಾಣ, ಪೊಲೀಸ್ ಪ್ರಧಾನ ಕಚೇರಿ, ಎಟಿಎಸ್ ಕಚೇರಿ ಮತ್ತು ಬಾಂಬ್ ಪತ್ತೆ ದಳದ ಕಚೇರಿಗಳಂತಹ ಪ್ರಮುಖ ಕಚೇರಿಗಳಿರುವುದರಿಂದ ಈ ಸ್ಥಳವು ಭದ್ರತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿದೆ. ಆದ್ದರಿಂದ ಅನಧಿಕೃತವಾಗಿ ನಿರ್ಮಿಸಲಾದ ಈ ಮಸೀದಿಯನ್ನು ತೆರವುಗೊಳಿಸಬೇಕು ಮತ್ತು ಈ ಸಂಚಿನಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಪೆನ್ಷನ್ ಅನ್ನು ನಿಲ್ಲಿಸಬೇಕೆಂದು ಮಹಾರಾಷ್ಟ್ರ ಪೊಲೀಸರಿಗೆ ಒತ್ತಾಯಿಸಲಾಗಿದೆ.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ