ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಪ್ರಕರಣ; ಸುಪ್ರೀಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಅವರಿಗೆ ತಪರಾಕಿ
ಶ್ರದ್ಧೆ ಮತ್ತು ವಿವೇಚನೆಯ ಕುರಿತು ವಾದ-ವಿವಾದ ನಡೆಸಲು ಸಾಧ್ಯವಿಲ್ಲ: ನ್ಯಾಯಾಲಯ

ನವದೆಹಲಿ – ಕೇರಳದ ಶಬರಿಮಲೈ ದೇವಾಲಯ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಏಪ್ರಿಲ್ 29 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ನಿಷೇಧದ ವಿರುದ್ಧ ಹೋರಾಡುತ್ತಿರುವ ವಕೀಲೆ ಇಂದಿರಾ ಜೈಸಿಂಗ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅವಲೋಕನವನ್ನು ಮಾಡಿದೆ.
Supreme Court of India: Hindu religion cannot be hollowed out in the name of reform.
In the Sabarimala temple entry case, the Court rebuked Indira Jaising, stressing that matters of faith & belief are not for courtroom debates.
The Court also observed that matters of faith and… pic.twitter.com/EkNPfrn747
— Sanatan Prabhat (@SanatanPrabhat) May 1, 2026
ಸಾಮಾಜಿಕ ಸುಧಾರಣೆಯ ಹೆಸರಿನಲ್ಲಿ ಧರ್ಮವನ್ನು ಟೊಳ್ಳು ಮಾಡಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಹೇಳಿದೆ. ಶ್ರದ್ಧೆ ಮತ್ತು ವಿವೇಚನೆಯ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಧರ್ಮದ ಪ್ರಕಾರ ಯಾವುದು ಅಗತ್ಯ ಮತ್ತು ಯಾವುದು ಅಲ್ಲ ಎಂಬುದನ್ನು ನ್ಯಾಯಾಲಯ ಎಂದಿಗೂ ನಿರ್ಧರಿಸುವುದಿಲ್ಲ, ಅದನ್ನು ಧರ್ಮವೇ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಕೀಲೆ ಜೈಸಿಂಗ್ ಅವರ ಹಿಂದೂ ವಿರೋಧಿ ವಾದ ಮತ್ತು ನ್ಯಾಯಮೂರ್ತಿ ನಾಗರತ್ನ ಅವರ ಉತ್ತರ!
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಮಾತನಾಡಿ, “ನಾವು ಈ ಭೂಮಿಯ ನಾಗರಿಕತೆಯ ವಿಕಾಸ ಮತ್ತು ಧಾರ್ಮಿಕ ಇತಿಹಾಸವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಂತಿಮವಾಗಿ ಇದೇ ಐತಿಹಾಸಿಕ ಹಿನ್ನೆಲೆಯಲ್ಲಿ ಸಂವಿಧಾನದ 25 ಮತ್ತು 26 ನೇ ವಿಧಿಗಳನ್ನು ರೂಪಿಸಲಾಗಿದೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲೆ ಜೈಸಿಂಗ್, “ಈ ಬಗ್ಗೆ ವಾದ-ವಿವಾದಗಳು ನಡೆಯಬಹುದು. ಇದೊಂದು ಬಿಳಿ ಕಾಗದದಂತೆ (Blank Slate). ಭಾರತದಲ್ಲಿ ಧಾರ್ಮಿಕ ವಿವಾದಗಳನ್ನು ಬಗೆಹರಿಸಲು ಯಾವುದೇ ಸ್ವತಂತ್ರ ನ್ಯಾಯಾಲಯಗಳಿಲ್ಲ. ಇತರ ರಾಷ್ಟ್ರಗಳಲ್ಲಿ, ವಿಶೇಷವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಇಂತಹ ವ್ಯವಸ್ಥೆಗಳಿವೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ನಮ್ಮಲ್ಲಿ ಶರಿಯತ್ ನ್ಯಾಯಾಲಯಗಳಾಗಲಿ ಅಥವಾ ಇನ್ನಾವುದೇ ರೀತಿಯ ಧಾರ್ಮಿಕ ನ್ಯಾಯಾಲಯಗಳಾಗಲಿ ಇಲ್ಲ. ಪರಿಣಾಮವಾಗಿ, ಯಾರಾದರೂ ನಿಜವಾದ ವಿವಾದದೊಂದಿಗೆ ನಿಮ್ಮ ಬಳಿ (ಸುಪ್ರೀಂ ಕೋರ್ಟ್) ಬಂದರೆ, ನೀವು ಅವರ ಸವಾಲನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಸಾಂವಿಧಾನಿಕ ಮಾನದಂಡಗಳಿಗಿಂತ ಮಿಗಿಲಾದ ಬೇರೆ ಯಾವುದೇ ಮಾನದಂಡಗಳಿಲ್ಲ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸುವಾಗ ಈ ಸತ್ಯವನ್ನು ಯಾವಾಗಲೂ ನೆನಪಿನಲ್ಲಿಡಬೇಕು” ಎಂದರು.
ನ್ಯಾಯಾಲಯದ ಅವಲೋಕನ: ನಾವು ಧಾರ್ಮಿಕ ಇತಿಹಾಸವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ!
ಇದಕ್ಕೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, “ಸಂವಿಧಾನ ಮತ್ತು ಇತರ ಎಲ್ಲಾ ಕಾನೂನು ಚೌಕಟ್ಟುಗಳು ಸರ್ವೋಚ್ಚವಾಗಿದ್ದರೂ, ನಾವು ಇತಿಹಾಸವನ್ನು ಮರೆಯಬಾರದು; ಏಕೆಂದರೆ ಇತಿಹಾಸವೇ ವರ್ತಮಾನವನ್ನು ರೂಪಿಸುತ್ತದೆ. ನಾವು ಕೇವಲ ಭೂತಕಾಲವನ್ನು ನಿರ್ಲಕ್ಷಿಸಿ ವರ್ತಮಾನವು ಒಂದು ‘ ಬಿಳಿ ಕಾಗದ’ ಎಂದು ಹೇಳಲು ಸಾಧ್ಯವಿಲ್ಲ” ಎಂದು ಉತ್ತರಿಸಿದರು.
ಉತ್ತರ ಭಾರತದ ಜನರು ಶಬರಿಮಲೈ ದೇವಾಲಯಕ್ಕೆ ಪ್ರವೇಶಿಸಲು ಬಯಸುತ್ತಾರೆಯೇ?
ಶಬರಿಮಲೈ ದೇವಾಲಯಕ್ಕೆ ಯಾರು ಪ್ರವೇಶ ಪಡೆಯಲು ಬಯಸುತ್ತಿದ್ದಾರೆ ಎಂಬುದನ್ನು ನ್ಯಾಯಾಲಯವು ನಿರ್ಧರಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಟಿಪ್ಪಣಿ ಮಾಡಿದರು. “ಉತ್ತರ ಭಾರತದ ವ್ಯಕ್ತಿಯೊಬ್ಬರು ದಕ್ಷಿಣದ ದೇವಾಲಯಕ್ಕೆ ಪ್ರವೇಶ ಪಡೆಯಲು ಹೇಗೆ ಹಕ್ಕು ಸಾಧಿಸಬಹುದು? ಆ ವ್ಯಕ್ತಿ ನಿಜವಾಗಿಯೂ ಭಕ್ತನೇ? ಎಂಬುದು ಕೂಡ ನಾವು ಕೂಲಂಕಷವಾಗಿ ಪರಿಶೀಲಿಸಬೇಕಾದ ವಿಷಯವಾಗಿದೆ” ಎಂದರು.
ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧದ ಬಗ್ಗೆ ವಿಚಾರಣೆ ಮುಂದುವರಿಕೆ!
ಶಬರಿಮಲೈ ಪ್ರಕರಣದ ವಿಚಾರಣೆ ಏಪ್ರಿಲ್ 7 ರಿಂದ ನಡೆಯುತ್ತಿದೆ. ಕೇಂದ್ರ ಸರಕಾರವು ಮಹಿಳೆಯರ ಪ್ರವೇಶದ ವಿರುದ್ಧ ವಾದ ಮಂಡಿಸಿದೆ. ದೇಶದ ಹಲವು ದೇವಿಯ ದೇವಾಲಯಗಳಲ್ಲಿ ಪುರುಷರ ಪ್ರವೇಶಕ್ಕೂ ನಿಷೇಧವಿದೆ ಎಂದು ಸರಕಾರ ಹೇಳಿದೆ. ಆದ್ದರಿಂದ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸಬೇಕೆಂದು ಸರ್ಕಾರ ಪರ ವಕೀಲರು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !