
ನಾಗ್ಪುರ – ಗಡಿಯಾಚೆಯಿಂದ ಭಾರತದಲ್ಲಿ ನಡೆಯುತ್ತಿರುವ ಅಕ್ರಮ ಕೃತ್ಯಗಳ ಸರಣಿ ಈಗ ನೇರವಾಗಿ ಮಾರುಕಟ್ಟೆಗಳನ್ನು ತಲುಪಿದೆ. ನಾಗ್ಪುರದಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ವ್ಯಾಪಾರ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿ, ಪಾಕಿಸ್ತಾನದಿಂದ ಅನಧಿಕೃತವಾಗಿ ಆಮದು ಮಾಡಿಕೊಳ್ಳಲಾದ ಸೌಂದರ್ಯವರ್ಧಕಗಳ ಸಂಗ್ರಹವನ್ನು ವಶಪಡಿಸಿಕೊಂಡಿದೆ. ಮೇಡ್ ಇನ್ ಪಾಕಿಸ್ತಾನ್ ಎಂದು ಬರೆಯಲಾದ ಈ ಉತ್ಪನ್ನಗಳನ್ನು ಮುಂಬಯಿ ಮೂಲಕ ನಾಗ್ಪುರಕ್ಕೆ ತರಲಾಗಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಇತ್ವಾರಿ ಪ್ರದೇಶದ ಕಾಸರಪುರ ಗಲ್ಲಿಯ ಮೆ. ಸಾಯಿಬಾಬಾ ಟ್ರೇಡರ್ಸ್ ಎಂಬ ಅಂಗಡಿಯ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವಶಪಡಿಸಿಕೊಂಡ ದಾಸ್ತಾನಿನಲ್ಲಿ ಗೋರಿ ಬ್ಯೂಟಿ ಕ್ರೀಮ್, ಫೇಸ್ ಫ್ರೆಶ್ ಗೋಲ್ಡ್ ಪ್ಲಸ್, ಗೋಲ್ಡನ್ ಸ್ಟಾರ್ ಬ್ಯೂಟಿ ಕ್ರೀಮ್, ಗೋರಿ ವೈಟ್ನಿಂಗ್ ಬಾಡಿ ಲೋಷನ್ ಮತ್ತು ಗೋರಿ ವೈಟ್ನಿಂಗ್ ಸೋಪ್ ನಂತಹ ಪಾಕಿಸ್ತಾನಿ ನಿರ್ಮಿತ ಉತ್ಪನ್ನಗಳು ಸೇರಿವೆ. ಈ ಸರಕುಗಳ ಮೌಲ್ಯ ಸುಮಾರು ೧೫,೧೮೬ ರೂಪಾಯಿಗಳಾಗಿವೆ. ಈ ಉತ್ಪನ್ನಗಳ ಮೇಲೆ ಆಮದು ನೋಂದಣಿ ಸಂಖ್ಯೆ, ಉತ್ಪಾದನಾ ಪರವಾನಗಿ, ಘಟಕಗಳ ಮಾಹಿತಿ, ತಯಾರಿಕೆಯ ದಿನಾಂಕ ಅಥವಾ ಮುಕ್ತಾಯದ ದಿನಾಂಕದಂತಹ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ.
ಈ ಉತ್ಪನ್ನಗಳ ಖರೀದಿಯ ಯಾವುದೇ ಅಧಿಕೃತ ಬಿಲ್‌ಗಳು ಮಾರಾಟಗಾರನ ಬಳಿ ಪತ್ತೆಯಾಗಿಲ್ಲ. ಈ ಸೌಂದರ್ಯವರ್ಧಕಗಳಲ್ಲಿ ಪಾದರಸ ಮತ್ತು ಸ್ಟೀರಾಯ್ಡ್‌ಗಳಂತಹ ಮಾನವನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಅಂಶಗಳಿರುವ ಸಾಧ್ಯತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗಾಗಿ ಮುಂಬಯಿನಲ್ಲಿರುವ ಸರಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದ ಹಿಂದೆ ಅಂತರರಾಜ್ಯ ಅಥವಾ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಈ ಸಂಬಂಧ ತಹಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪೂರೈಕೆ ಜಾಲದ ಬಗ್ಗೆ ಆಳವಾದ ತನಿಖೆ ನಡೆಸಲಾಗುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!