ಕೊಲಕಾತಾದ ‘ಮಿನಿ ಬಾಂಗ್ಲಾದೇಶ’ ಆಗಿರುವ ‘ಗುಲ್ಷನ್ ಕಾಲೋನಿ’ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ ದಾಳಿ!

  • ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಅಡ್ಡೆ!

  • ೨ ಲಕ್ಷ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಅಧಿಕೃತ ಭಾರತೀಯ ಮತದಾರರು ತೀರಾ ವಿರಳ!

  • ೨೦೧೧ರಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ನೂರಾರು ಕಟ್ಟಡಗಳ ನಿರ್ಮಾಣ!

ರಾಷ್ಟ್ರೀಯ ತನಿಖಾ ಸಂಸ್ಥೆ

ಕೊಲಕಾತಾ (ಬಂಗಾಳ) – ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರು ಹಾಗೂ ಹಿಂಸಾತ್ಮಕ ಘಟನೆಗಳ ಕ್ರಿಮಿನಲ್ ಚಟುವಟಿಕೆಗಳ ಕೇಂದ್ರವಾಗಿರುವ ನಗರದ ಕುಖ್ಯಾತ ಗುಲ್ಷನ್ ಕಾಲೋನಿ ಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಇತ್ತೀಚೆಗೆ ಹಲವು ದಾಳಿಗಳನ್ನು ನಡೆಸಿದೆ. ೨೦೧೧ರಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಕಾಲೋನಿಯ ನಿರ್ಮಾಣ ಮತ್ತು ವಿಸ್ತರಣೆಯಾಯಿತು. ಕೇವಲ ಕೆಲವು ತಿಂಗಳುಗಳಲ್ಲಿ ಇಲ್ಲಿ ನೂರಾರು ಕಟ್ಟಡಗಳನ್ನು ನಿರ್ಮಿಸಲಾಯಿತು. ಕೊಲಕಾತಾ ಮಹಾನಗರ ಪಾಲಿಕೆಯ ಬಳಿ ಈ ಪ್ರದೇಶದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ತೃಣಮೂಲ ನಾಯಕರ ಬೆಂಬಲದಿಂದ ಈ ಭಾಗದಲ್ಲಿ ಬಾಂಗ್ಲಾದೇಶಿ ಪ್ರಜೆಗಳನ್ನು ನೆಲೆಸುವಂತೆ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಸಮಗ್ರ ಮರುಪರಿಶೀಲನಾ ಪ್ರಕ್ರಿಯೆಯಿಂದ ಬಯಲಾದ ಭಯಾನಕ ವಾಸ್ತವ!

ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಗುಲ್ಷನ್ ಕಾಲೋನಿಯಲ್ಲಿ ೨ ಲಕ್ಷ ಜನರು ವಾಸಿಸುತ್ತಿದ್ದು, ಇಲ್ಲಿನ ಶೇ. ೯೦ ರಷ್ಟು ಜನರು ಅನಧಿಕೃತವಾಗಿ ನೆಲೆಸಿದ್ದಾರೆ ಎಂಬ ಪುರಾವೆಗಳು ಕಳೆದ ನವೆಂಬರ್‌ನಲ್ಲಿ ನಡೆದ ಮತದಾರರ ಪಟ್ಟಿಯ ಸಮಗ್ರ ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ಬೆಳಕಿಗೆ ಬಂದಿವೆ. ಈ ಜನರು ಅಧಿಕೃತವಾಗಿ ನೋಂದಾಯಿತ ಮತದಾರರಾಗಿರಲಿಲ್ಲ ಮತ್ತು ಮೂಲತಃ ಬಾಂಗ್ಲಾದೇಶದ ನಿವಾಸಿಗಳಾಗಿದ್ದರು; ಆದರೂ ತಮ್ಮ ಬಳಿ ಮತದಾರರ ಗುರುತಿನ ಚೀಟಿಗಳಿವೆ ಎಂದು ಅವರು ಹೇಳಿಕೊಳ್ಳುತ್ತಿದ್ದರು.

ಗುಲ್ಷನ್ ಕಾಲೋನಿಯಲ್ಲಿ ಬೃಹತ್ ಪ್ರಮಾಣದ ಸೈನಿಕರ ನಿಯೋಜನೆ!

ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯಲು ಮತ್ತು ಯಾವುದೇ ಸಂಭಾವ್ಯ ಸವಾಲುಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಎರಡನೇ ಹಂತದ ಮತದಾನದ ಮುನ್ನವೇ ಗುಲ್ಷನ್ ಕಾಲೋನಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿತ್ತು. ಈ ತಂಡಗಳನ್ನು ಪೂರ್ವ ವರ್ಧಮಾನ್, ದಕ್ಷಿಣ ೨೪ ಪರಗಣ, ಹೂಗ್ಲಿ, ನಾಡಿಯಾ ಮತ್ತು ಹೌರಾ ಜಿಲ್ಲೆಗಳಲ್ಲೂ ನಿಯೋಜಿಸಲಾಯಿತು. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕಚ್ಚಾ ಬಾಂಬ್‌ಗಳ ಸಂಗ್ರಹ, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವ ಪ್ರಕರಣಗಳ ಬಗ್ಗೆ ಈ ತಂಡಗಳು ಗಂಭೀರವಾಗಿ ತನಿಖೆ ನಡೆಸುತ್ತಿವೆ.

ಕೇಂದ್ರೀಯ ರಕ್ಷಣಾ ವ್ಯವಸ್ಥೆಯಿದ್ದರೂ ಗುಲ್ಷನ್ ಕಾಲೋನಿಗೆ ಸಂಬಂಧಿಸಿದಂತೆ ನಡೆದ ಘಟನೆಗಳು!

೧. ಕೊಲಕಾತಾ ಪೊಲೀಸರು ಗುಲ್ಷನ್ ಕಾಲೋನಿ ಸಮೀಪವಿರುವ ಉತ್ತರ ಕಾಶಿಪುರ ಭಾಗದ ಭಾಂಗರ್ ಪ್ರದೇಶದಿಂದ ೭೯ ಸ್ಥಳೀಯ ನಿರ್ಮಿತ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

೨. ಇಲ್ಲಿಗೆ ಸಮೀಪವಿರುವ ಮಾಜೆರ್ಹಾಟ್ (ಪೊಯಿಲೆಪಾರಾ) ವಸತಿಯ ಸ್ಮಶಾನವೊಂದರ ಬಳಿಯಿರುವ ಪಾಳುಬಿದ್ದ ಮನೆಯಲ್ಲಿ ಅಪರಿಚಿತ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರು. ಈ ಸಂಪೂರ್ಣ ಪ್ರದೇಶವು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಭದ್ರಕೋಟೆ ಎಂದು ಗುರುತಿಸಲ್ಪಟ್ಟಿದೆ.

೩. ಈ ಎರಡೂ ಘಟನೆಗಳಿಂದಾಗಿ ಗುಲ್ಷನ್ ಕಾಲೋನಿ ಎಲ್ಲರ ಗಮನ ಸೆಳೆಯಿತು. ವರದಿಗಳ ಪ್ರಕಾರ, ಈ ವಸತಿಯ ಸುಮಾರು ಶೇ. ೯೦ ರಷ್ಟು ನಿವಾಸಿಗಳು ಹೊರಗಿನವರಾಗಿದ್ದು, ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಭಾಜಪ ನಾಯಕರು ಹಾಗೂ ಬಂಗಾಳ ಪೊಲೀಸರು ತಿಳಿಸಿದ ಗುಲ್ಷನ್ ಕಾಲೋನಿಯ ವಾಸ್ತವ!

೧. ಭಾಜಪದ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರು, ನುಸುಳುಕೋರರು ದೀರ್ಘಕಾಲದಿಂದ ಗುಲ್ಷನ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ.

೨. ಕೇಂದ್ರ ಸಚಿವ ಡಾ. ಸುಕಾಂತ ಮಜುಂದಾರ್ ಅವರು ೨೦೨೪ ರಲ್ಲಿ ೧೩ ವರ್ಷಗಳಲ್ಲಿನ ಗಮನಾರ್ಹ ಜನಸಂಖ್ಯಾ ಬದಲಾವಣೆಯ ಬಗ್ಗೆ ಗಮನ ಸೆಳೆದಿದ್ದರು. ಈ ಪ್ರದೇಶವು ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾಗಳಿಗೆ ಕೇಂದ್ರವಾಗಿದೆ, ಇದರಿಂದಾಗಿ ಅಪರಾಧ ಮತ್ತು ಅರಾಜಕತೆಗೆ ಪ್ರಚೋದನೆ ಸಿಗುತ್ತಿದೆ. ಈ ಮೂಲಕ ಮಿನಿ-ಬಾಂಗ್ಲಾದೇಶ ಉದಯಿಸಿದೆ ಎಂದು ಅವರು ಹೇಳಿದ್ದರು.

೩. ಕೊಲಕಾತಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದಂತೆ, ಕಳೆದ ಕೆಲವು ವರ್ಷಗಳಲ್ಲಿ ಗುಲ್ಷನ್ ಕಾಲೋನಿಯು ಕ್ರಿಮಿನಲ್ ಚಟುವಟಿಕೆಗಳ ಅಡ್ಡೆ ಮತ್ತು ಅಪರಾಧಿಗಳಿಗೆ ಸುರಕ್ಷಿತ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಅನೇಕ ಅಪರಾಧಿಗಳು ರಾಜ್ಯದ ಹೊರಗಿನಿಂದ ಹಾಗೂ ದೇಶದ ಹೊರಗಿನಿಂದ ಬರುತ್ತಾರೆ. ಇಲ್ಲಿನ ಕಿರಿದಾದ ಗಲ್ಲಿಗಳು ಮತ್ತು ಒಂದಕ್ಕೊಂದು ಹೊಂದಿಕೊಂಡಿರುವ ಕಟ್ಟಡಗಳಿಂದಾಗಿ ಅಪರಾಧಿಗಳ ಮೇಲೆ ತಕ್ಷಣದ ದಾಳಿ ನಡೆದಾಗ ಅವರಿಗೆ ತಪ್ಪಿಸಿಕೊಳ್ಳಲು ಅಥವಾ ಅಡಗಿಕೊಳ್ಳಲು ಸುಲಭವಾಗುತ್ತದೆ.

ಸ್ಥಳೀಯ ಹಿಂದೂ ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆ!

೧. ಸುಮಾರು ಪ್ರತಿ ವಾರ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಸುತ್ತಮುತ್ತಲಿನ ಜನರು ಸಹ ಇದೇ ರೀತಿಯ ಭಯವನ್ನು ಎದುರಿಸುತ್ತಿದ್ದಾರೆ. ಅವರು ತಮ್ಮ ವಾಹನಗಳನ್ನು ಮನೆಯ ಹೊರಗೆ ನಿಲ್ಲಿಸಲು ಮತ್ತು ತಡರಾತ್ರಿ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ.

೨. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಬಂದೂಕುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತಿರುವುದರಿಂದ ಹಾಗೂ ಗುಂಡಿನ ಚಕಮಕಿ ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಭೀತಿಯಲ್ಲಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ನೀಡುತ್ತಿರುವ ತೃಣಮೂಲ ಕಾಂಗ್ರೆಸ್‌ಗೆ ಬಂಗಾಳದ ಹಿಂದೂಗಳು ಈ ಚುನಾವಣೆಯಲ್ಲಾದರೂ ಪ್ರಜಾಪ್ರಭುತ್ವದ ಮೂಲಕ ತಾವು ನೀಡಿದ ಆಶ್ರಯವನ್ನು ಹಿಂಪಡೆಯುತ್ತಾರೆ ಎಂಬ ಆಶಯವಿದೆ. ಚುನಾವಣೆಯ ಫಲಿತಾಂಶ ಏನೇ ಬಂದರೂ, ತೃಣಮೂಲ ಕಾಂಗ್ರೆಸ್ ಮೇಲೆ ಈಗ ನಿಷೇಧ ಹೇರಲೇಬೇಕು!