ರಾಜನಾಥ ಸಿಂಗ್ ಅವರಿಂದ ಚೀನಾ ಮತ್ತು ರಷ್ಯಾ ರಕ್ಷಣಾ ಸಚಿವರ ಭೇಟಿ!
(ಎಸ್.ಸಿ.ಒ. – ಶಾಂಘಾಯ್ ಕೋಆಪರೇಷನ್ ಆರ್ಗನೈಸೇಶನ್)

ನವ ದೆಹಲಿ – ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್ ನಲ್ಲಿ ಆಯೋಜಿಸಲಾದ ‘ಶಾಂಘಾಯ್ ಕೋಆಪರೇಷನ್ ಆರ್ಗನೈಸೇಶನ್’ (ಎಸ್.ಸಿ.ಒ.) ಸಭೆಗಾಗಿ ಕಿರ್ಗಿಸ್ತಾನ್ ಪ್ರವಾಸದಲ್ಲಿದ್ದಾರೆ. ಈ ಸಭೆಯ ಹಿನ್ನೆಲೆಯಲ್ಲಿ ಅವರು ಚೀನಾ, ರಷ್ಯಾ ಮತ್ತು ಬೆಲಾರಸ್ ದೇಶಗಳ ರಕ್ಷಣಾ ಸಚಿವರನ್ನು ಭೇಟಿ ಮಾಡಿದರು.
ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜೂನ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ‘ವಾಸ್ತವ ನಿಯಂತ್ರಣ ರೇಖೆಯಲ್ಲಿ’ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದು, ಹಾಗೆಯೇ ವ್ಯಾಪಕ ಪ್ರಾದೇಶಿಕ ಭದ್ರತೆಯ ವಿಷಯಗಳ ಕುರಿತು ಚರ್ಚಿಸಿದರು. ರಾಜನಾಥ ಸಿಂಗ್ ಅವರು ರಷ್ಯಾದ ರಕ್ಷಣಾ ಸಚಿವ ಆಂಡ್ರೇ ಬೆಲೌಸೊವ್ ಅವರನ್ನೂ ಭೇಟಿ ಮಾಡಿದರು. ಈ ಇಬ್ಬರೂ ನಾಯಕರು ವಿವಿಧ ರಕ್ಷಣಾ ಖರೀದಿ ಯೋಜನೆಗಳ ಕುರಿತು, ವಿಶೇಷವಾಗಿ ಭಾರತಕ್ಕೆ ‘ಎಸ್-400’ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಪೂರೈಕೆಯ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜನಾಥ ಸಿಂಗ್ ಅವರು ಬೆಲಾರಸ್ ರಕ್ಷಣಾ ಸಚಿವ ಲೆಫ್ಟಿನೆಂಟ್ ಜನರಲ್ ವಿಕ್ಟರ್ ಅವರನ್ನೂ ಭೇಟಿಯಾದರು. ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಈ ಚರ್ಚೆಯ ಮುಖ್ಯ ಉದ್ದೇಶವಾಗಿತ್ತು.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!