
ಜೆರುಸಲೆಮ್ – ಗಾಜಾ ಪಟ್ಟಿಯ ಜನರ ಮೇಲೆ ದಾಳಿ ಮಾಡಲು ಇಸ್ರೇಲ್ ಇಲಿ ಮತ್ತು ಹೆಗ್ಗಣಗಳಿಗೆ ತರಬೇತಿ ನೀಡಿದೆ ಎಂದು ಪ್ಯಾಲೇಸ್ಟಿನಿಯನ್ ನಾಯಕರು ವಿಚಿತ್ರ ಆರೋಪ ಮಾಡಿದ್ದಾರೆ. ಪ್ರಸ್ತುತ ಗಾಜಾದಲ್ಲಿ ಇಲಿಗಳ ಕಾಟ ವಿಪರೀತವಾಗಿ ಹೆಚ್ಚಾಗಿದೆ.
ಗಾಜಾದ ಫತಾಹ್ ಪಕ್ಷದ ಉನ್ನತ ನಾಯಕತ್ವ ಮಂಡಳಿಯ ಸದಸ್ಯ ಜಮಾಲ್ ಒಬೈದ್ ಅವರು ಏಪ್ರಿಲ್ 18 ರಂದು ಫತಾಹ್ ಪಕ್ಷದ ಔದಾ ಟಿವಿಯಲ್ಲಿ ಮಾತನಾಡಿ, ಇತ್ತೀಚೆಗೆ ಗಾಜಾ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲಿ ಮತ್ತು ಹೆಗ್ಗಣಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದೆ ಈ ಪ್ರಾಣಿಗಳು ಈ ಭಾಗದಲ್ಲಿ ಎಂದೂ ಕಾಣಿಸಿಕೊಂಡಿರಲಿಲ್ಲ. ಇಸ್ರೇಲ್ ಉದ್ದೇಶಪೂರ್ವಕವಾಗಿಯೇ ಈ ಇಲಿ ಮತ್ತು ಹೆಗ್ಗಣಗಳನ್ನು ಗಾಜಾ ಪಟ್ಟಿಗೆ ಬಿಟ್ಟಿದೆ ಎಂಬುದು ವಾಸ್ತವ ಎಂದು ಹೇಳಿದರು. ಔದಾ ಟಿವಿಯಲ್ಲಿ ಏಪ್ರಿಲ್ 15 ರಂದು ಪ್ರಸಾರವಾದ ಸಂದರ್ಶನವೊಂದರಲ್ಲಿ ಗಾಜಾದ ಪ್ಯಾಲೇಸ್ಟಿನಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ನಿರ್ದೇಶಕ ರಫತ್ ಅಲ್-ಕುದ್ರಾ ಮಾತನಾಡಿ, ದೊಡ್ಡ ಗಾತ್ರದ ಇಲಿ ಮತ್ತು ಹೆಗ್ಗಣಗಳು ಗಾಜಾ ಪಟ್ಟಿಯ ಜನರ ಮೇಲೆ, ವಿಶೇಷವಾಗಿ ಸಣ್ಣ ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಈ ಇಲಿ ಮತ್ತು ಹೆಗ್ಗಣಗಳಿಗೆ ಇಸ್ರೇಲ್ ತರಬೇತಿ ನೀಡಿದೆ ಎಂಬುದು ಇದರಿಂದ ಕಂಡುಬರುತ್ತಿದೆ ಎಂದು ತಿಳಿಸಿದರು.
ಆದರೆ, ಇಸ್ರೇಲ್ ಮಾತ್ರ ಈ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ಶತ್ರುಗಳಿಗೆ ಪಾಠ ಕಲಿಸಲು ಈ ಹಿಂದೆ ಮೀನುಗಳನ್ನೂ ಬಳಸಿದೆ!
ಇಸ್ರೇಲ್ 2010 ರಲ್ಲಿ ಈಜಿಪ್ಟ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಲು ಮೊಸಾದ್-ತರಬೇತಿ ಪಡೆದ ಶಾರ್ಕ್ ಮೀನುಗಳನ್ನು ಮತ್ತು 2015 ರಲ್ಲಿ ಹಮಾಸ್‌ನಲ್ಲಿ ಗೂಢಚರ್ಯೆ ನಡೆಸಲು ಕ್ಯಾಮೆರಾ ಅಳವಡಿಸಿದ ಡಾಲ್ಫಿನ್ ಮೀನುಗಳನ್ನು ಬಳಸಿತ್ತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation