ಗ್ರಾಮ ಬಿಟ್ಟು ತೊಲಗುವಂತೆ ಎಚ್ಚರಿಕೆ!

ಬಸ್ತಾರ (ಛತ್ತೀಸಗಢ) – ಜಿಲ್ಲೆಯ ರೇಟಾವಂದ ಗ್ರಾಮದ ಮುಗ್ಧ ಬಡ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ ಕಾರಣಕ್ಕೆ ಗ್ರಾಮಸ್ಥರು ಪಾದ್ರಿಯೊಬ್ಬನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಈ ಘಟನೆಯ ವಿಡಿಯೋವೊಂದು ಹೊರಬಂದಿದ್ದು, ಅದರಲ್ಲಿ ಗ್ರಾಮಸ್ಥರ ಆಕ್ರೋಶಕ್ಕೆ ಸಿಲುಕಿದ ಪಾದ್ರಿಯ ಅಂಗಿ ಹರಿದಿರುವುದು ಕಂಡುಬಂದಿದೆ. ಪುರುಷರು ಮತ್ತು ಮಹಿಳೆಯರ ಗುಂಪು ಈ ಪಾದ್ರಿಗೆ ಒದೆ, ಏಟು ಹಾಗೂ ಚಪ್ಪಲಿಗಳಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಘಟನಾವಳಿಯ ಪ್ರಕಾರ ಮೂಲತಃ ಒಡಿಶಾದವನಾದ ಈ ಪಾದ್ರಿ ದೀರ್ಘಕಾಲದಿಂದ ರೇಟಾವಂದ ಗ್ರಾಮದಲ್ಲಿ ವಾಸವಾಗಿದ್ದನು. ಅವನು ಸ್ಥಳೀಯ ಹಿಂದೂಗಳನ್ನು ಮತಾಂತರಗೊಳ್ಳಲು ಪ್ರಚೋದಿಸುತ್ತಿದ್ದನು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಏಪ್ರಿಲ್ 26 ರಂದು ಗ್ರಾಮದಲ್ಲಿ ಸಭೆ ನಡೆಸಿ, ಪಾದ್ರಿಯು ತನ್ನ ಕುಟುಂಬದೊಂದಿಗೆ ಕೂಡಲೇ ಗ್ರಾಮ ಬಿಟ್ಟು ಹೋಗುವಂತೆ ಸೂಚಿಸಿದ್ದರು. ಆದರೆ ಪಾದ್ರಿಯು ಇದನ್ನು ನಿರ್ಲಕ್ಷಿಸಿದ ಕಾರಣ, ಕೊನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಆತನಿಗೆ ಹೊಡೆದಿದ್ದಾರೆ.
ಪಾದ್ರಿ ಶೀಘ್ರದಲ್ಲೇ ಗ್ರಾಮ ಬಿಡಲಿದ್ದಾನೆ! – ಪೊಲೀಸರ ಭರವಸೆಪೊಲೀಸರು ಸಮಯಕ್ಕೆ ಸರಿಯಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪಾದ್ರಿಯು ಶೀಘ್ರವಾಗಿ ಗ್ರಾಮವನ್ನು ತೊರೆಯಬೇಕೆಂದು ಗ್ರಾಮಸ್ಥರು ಸತತವಾಗಿ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪಾದ್ರಿ ಖಂಡಿತವಾಗಿಯೂ ಗ್ರಾಮ ಬಿಟ್ಟು ಹೋಗಲಿದ್ದಾನೆ ಎಂದು ಪೊಲೀಸರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಸಂಪಾದಕೀಯ ನಿಲುವುವಾಸ್ತವವಾಗಿ ಪೊಲೀಸರು ಪಾದ್ರಿಯನ್ನು ಬಂಧಿಸಿ ಅವನ ವಿರುದ್ಧ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಮಾಡದ ಛತ್ತೀಸಗಢದ ಭಾಜಪ ಸರಕಾರವು ಸಂಬಂಧಿತ ಪೊಲೀಸರ ಮೇಲೆಯೇ ಈಗ ಕ್ರಮ ಕೈಗೊಳ್ಳಬೇಕು! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!