ಆಕ್ರೋಶಿತ ತಾಲಿಬಾನ್ ನಿಂದ ಪಾಕಿಸ್ತಾನದ ೬ ಸೈನಿಕರ ಹತ್ಯೆ

ಕಾಬೂಲ್ (ಅಫ್ಘಾನಿಸ್ತಾನ) – ಪಾಕಿಸ್ತಾನಿ ಸೈನ್ಯವು ಅಫ್ಘಾನಿಸ್ತಾನದ ಮಗುವಿನ ಮೇಲೆ ಗುಂಡು ಹಾರಿಸಿ ಅದನ್ನು ಹತ್ಯೆಗೈದಿದೆ. ಈ ಘಟನೆಯಿಂದ ಕೆರಳಿದ ತಾಲಿಬಾನ್ ಭದ್ರತಾ ಪಡೆಯು ೬ ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ. ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯ ಅಂಗೂರ್ ಅಡ್ಡಾ ಕ್ಷೇತ್ರದ ಜಲೋಲ್ ಖೇಲ್ ಭಾಗದ ಗಡಿಯಲ್ಲಿ ಈ ಘರ್ಷಣೆ ನಡೆದಿದೆ. ಒಬ್ಬ ಪಾಕಿಸ್ತಾನಿ ಸೈನಿಕನನ್ನು ಸೆರೆಹಿಡಿಯಲಾಗಿದೆ. ಈ ಘರ್ಷಣೆಯ ನಂತರ ತಾಲಿಬಾನ್ ಭದ್ರತಾ ಪಡೆಗಳು ಪಾಕಿಸ್ತಾನಿ ಸೈನಿಕರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
ಇನ್ನೊಂದೆಡೆ ಪಾಕಿಸ್ತಾನದ ‘ಜಿಯೋ ಟಿವಿ’ ಈ ಸುದ್ದಿಯನ್ನು ಪ್ರಸಾರ ಮಾಡುತ್ತಾ, ‘ದಕ್ಷಿಣ ವಜಿರಿಸ್ತಾನದಲ್ಲಿ ಅಫ್ಘಾನ್ ತಾಲಿಬಾನ್ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾಮಾನ್ಯ ನಾಗರಿಕರು ಗಾಯಗೊಂಡಿದ್ದಾರೆ’ ಎಂದು ಹೇಳಿದೆ. ಪಾಕಿಸ್ತಾನದ ಭದ್ರತಾ ಪಡೆಯು ಈ ಘಟನೆಯನ್ನು ‘ಫಿತ್ನಾ ಅಲ್-ಖವಾರಿಜ್’ (ಭಯೋತ್ಪಾದಕರ ನುಸುಳುವಿಕೆಯ ವಿಫಲ ಪ್ರಯತ್ನ) ಎಂದು ಕರೆದಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim