ಕಳೆದ ೧೧ ವರ್ಷಗಳಿಂದ ‘ಸತ್ಯನಿಷ್ಠ ಆರ್ಯ’ ಎಂಬ ಹೆಸರಿನಲ್ಲಿ ಉತ್ತರಾಖಂಡದಲ್ಲಿ ವಾಸಿಸುತ್ತಿದ್ದ ಸನಿಯುರ್ ರೆಹಮಾನ್!
ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಆರೋಪಿ

ಋಷಿಕೇಶ (ಉತ್ತರಾಖಂಡ) – ಹಣೆಯ ಮೇಲೆ ತಿಲಕ ಇಟ್ಟುಕೊಂಡು, ತನ್ನ ಹೆಸರು ‘ಸತ್ಯನಿಷ್ಠ ಆರ್ಯ’ ಎಂದು ಹೇಳಿಕೊಳ್ಳುತ್ತಾ ಮದರ್ ಮೇರಿ ಮತ್ತು ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದ ವ್ಯಕ್ತಿ ಬಾಂಗ್ಲಾದೇಶಿ ನುಸುಳುಕೋರ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸನಿಯುರ್ ರೆಹಮಾನ್ ಎಂಬುದು ಈತನ ನಿಜವಾದ ಹೆಸರಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ‘ದಿ ಲಲ್ಲನ್ ಟಾಪ್’ ಜಾಲತಾಣದಲ್ಲಿ ಈ ವರದಿ ಪ್ರಕಟವಾಗಿದೆ.
ವರದಿಯ ಪ್ರಕಾರ, ೨೦೨೫ ರ ಕ್ರಿಸ್ಮಸ್ ಸಂದರ್ಭದಲ್ಲಿ ರೆಹಮಾನ್ ಚರ್ಚ್ ಪಾದ್ರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ರೆಹಮಾನ್ ಬಾಂಗ್ಲಾದೇಶದ ಬೈಸಡಿ ಮಧುಖಾಲಿ ಫರೀದಪುರದ ನಿವಾಸಿಯಾಗಿದ್ದು, ಆತ ೨೦೧೬ ರಿಂದ ಋಷಿಕೇಶದಲ್ಲಿ ‘ಸತ್ಯನಿಷ್ಠ ಆರ್ಯ’ ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದನು ಎಂಬುದು ಬಯಲಾಗಿದೆ. ಏಪ್ರಿಲ್ ೧೮ ರಂದು ಋಷಿಕೇಶ ಪೊಲೀಸರು ‘ಆಪರೇಷನ್ ಪ್ರಹಾರ’ ಅಡಿಯಲ್ಲಿ ಪರಿಶೀಲನಾ ಅಭಿಯಾನ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ರೆಹಮಾನ್ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.
ವಿಚಾರಣೆಯ ವೇಳೆ, ಸನಿಯುರ್ ರೆಹಮಾನ್ ಬಂಧನಕ್ಕೆ ಒಂದು ದಿನ ಮೊದಲು ಲಕ್ಷ್ಮಣ್ ಜೂಲಾ ಪ್ರದೇಶಕ್ಕೆ ಬಂದಿದ್ದನು ಎಂದು ತಿಳಿದುಬಂದಿದೆ. ಅದಕ್ಕೂ ಮೊದಲು ಆತ ದೆಹಲಿ, ಗಾಜಿಯಾಬಾದ್ ಮತ್ತು ಬಂಗಾಳ ಸೇರಿದಂತೆ ಹಲವು ಸ್ಥಳಗಳಲ್ಲಿ ನೆಲೆಸಿದ್ದನು. ಆತ ನೇಪಾಳದ ಮೂಲಕ ಭಾರತಕ್ಕೆ ನುಸುಳಿದ್ದನು. ಆತನ ಬಳಿ ಬಾಂಗ್ಲಾದೇಶದ ಪಾಸ್‌ಪೋರ್ಟ್ ಪತ್ತೆಯಾಗಿದ್ದು, ಅದರ ಸಿಂಧುತ್ವವು ೨೦೧೮ ರಲ್ಲೇ ಮುಕ್ತಾಯಗೊಂಡಿದೆ. ಆತ ಜನರಿಂದ ದೇಣಿಗೆಯನ್ನೂ ಸಂಗ್ರಹಿಸುತ್ತಿದ್ದನು. ಆತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದು, ‘ಸತ್ಯನಿಷ್ಠ ಆರ್ಯ’ ಎಂಬ ಹೆಸರಿನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದನು. ಆ ವಿಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೋಡುತ್ತಿದ್ದರು. ನಂತರ ಆತ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದನು. ಕಳೆದ ವರ್ಷ ಕ್ರಿಸ್ಮಸ್ ಸಮಯದಲ್ಲಿ ಗಾಜಿಯಾಬಾದನ ಚರ್ಚ್‌ವೊಂದಕ್ಕೆ ನುಗ್ಗಿ ಅಲ್ಲಿನ ಪಾದ್ರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಕೂಡ ಮುನ್ನೆಲೆಗೆ ಬಂದಿತ್ತು. ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ರೆಹಮಾನ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿವೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ