
ನಾಗಪುರ – ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಆದರ್ಶಪ್ರಾಯರು. ಅವರಿಂದಲೇ ಇಂದು ದೇಶದಲ್ಲಿ ಹಿಂದುತ್ವ ಜೀವಂತವಾಗಿದೆ. ಅಂತಹ ಶ್ರೇಷ್ಠ ಮಹಾಪುರುಷರ ಅವಮಾನ ಮಾಡುವ ವಿಚಾರವನ್ನು ನಾನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ. ಆದರೂ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅಂತಃಕರಣದಿಂದ ಕ್ಷಮೆ ಯಾಚಿಸುತ್ತೇನೆ ಎಂದು ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದ್ದಾರೆ. ಪ್ರವಚನವೊಂದರಲ್ಲಿ ಛತ್ರಪತಿ ಶಿವರಾಯರು ಮತ್ತು ಸಮರ್ಥ ರಾಮದಾಸ ಸ್ವಾಮಿಗಳ ಕುರಿತಾದ ಹೇಳಿಕೆಯಿಂದ ಉಂಟಾದ ವಿವಾದದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಪಂಡಿತ ಶಾಸ್ತ್ರಿ ಅವರು ಮುಂದೆ ಮಾತನಾಡುತ್ತಾ, ನಾನು ನನ್ನ ಮಾತುಗಳ ಮೂಲಕ ಮಹಾರಾಜರ ಬಗ್ಗೆ ನನಗಿರುವ ಗೌರವವನ್ನೇ ವ್ಯಕ್ತಪಡಿಸಿದೆ; ಆದರೆ ಕೆಲವು ಜನರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಯಾರ ಸ್ವರಾಜ್ಯದಿಂದ ಪ್ರೇರಣೆ ಪಡೆದು ನಾವು ‘ಹಿಂದೂ ರಾಷ್ಟ್ರ’ ಸ್ಥಾಪಿಸುವ ಸಂಕಲ್ಪ ಮಾಡಿದ್ದೇವೆಯೋ, ಅವರ ನಿಂದನೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಯಾರು ಶಿವರಾಯರನ್ನು ಗೌರವಿಸುತ್ತಾರೋ ಅವರೆಲ್ಲರೂ ನಮ್ಮವರೇ. ಇಂತಹ ವಿಷಯಗಳಿಗಾಗಿ ನಾವು ನಮ್ಮಲ್ಲೇ ಕಿತ್ತಾಡಿದರೆ ಅದರ ಲಾಭ ಕೇವಲ ಧರ್ಮದ್ರೋಹಿಗಳಿಗೆ ಮಾತ್ರ ಆಗುತ್ತದೆ. ‘ಪ್ರತಿಯೊಬ್ಬರೂ ಒಬ್ಬ ಮಗನನ್ನು ಸಂಘಕ್ಕೆ ನೀಡಬೇಕು’ ಎಂಬ ಹೇಳಿಕೆಯ ಅರ್ಥವೇನು? ಅಂದರೆ ಆ ಮಗನು ಕಟ್ಟಾ ರಾಷ್ಟ್ರಭಕ್ತ ಮತ್ತು ಸನಾತನ ವಿಚಾರಧಾರೆಯವನಾಗಬೇಕು ಎಂಬುದೇ ನನ್ನ ಉದ್ದೇಶವಾಗಿತ್ತು. ಅವನು ಜಿಲ್ಲಾಧಿಕಾರಿಯಾಗಲಿ, ಶಿಕ್ಷಕನಾಗಲಿ ಅಥವಾ ಇನ್ನಾವುದೇ ವೃತ್ತಿಯಲ್ಲಿರಲಿ; ಅವನ ವಿಚಾರಗಳು ಮಾತ್ರ ಕಟ್ಟಾ ಸನಾತನವಾಗಿರಬೇಕು, ಎಂದರು.
ಏನಿದು ವಿವಾದ?
ನಾಗಪುರದ ಕಾರ್ಯಕ್ರಮವೊಂದರಲ್ಲಿ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ‘ಯುದ್ಧದಿಂದ ದಣಿದ ನಂತರ ಛತ್ರಪತಿ ಶಿವರಾಯರು ತಮ್ಮ ಮುಕುಟವನ್ನು ಸಮರ್ಥರ ಪಾದಗಳಿಗೆ ಅರ್ಪಿಸಿದ್ದರು’, ಎಂದು ಉಲ್ಲೇಖಿಸಿದ್ದರು. ಈ ಕಾರಣದಿಂದ ಕೆಲವು ಸಂಘಟನೆಗಳು ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಅವರ ಮೇಲೆ ಟೀಕೆ ಮಾಡಿದ್ದವು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !