ಹಿಂದೂ ಪ್ರಯಾಣಿಕರಿಗೆ ‘ಹಲಾಲ್’ ಬದಲು ‘ಝಟ್ಕಾ’ ಮಾಂಸ ನೀಡುವ ಬೇಡಿಕೆಗೆ ರೇಲ್ವೆ ಮಂಡಳಿಯ ಹಾರಿಕೆಯ ಉತ್ತರ!

ನವದೆಹಲಿ – ಕಾಮಾಖ್ಯಾ-ಕೋಲಕಾತಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ರೇಲ್ವೆಯ ಇತರ ಉಪಾಹಾರ ಗೃಹಗಳಲ್ಲಿ ಹಿಂದೂ ಪ್ರಯಾಣಿಕರಿಗೆ ಅವರ ಸಮ್ಮತಿಯಿಲ್ಲದೆ ಹಲಾಲ್ ಮಾಂಸವನ್ನು ತಿನ್ನಲು ನೀಡಲಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿರುದ್ಧ ಪ್ರಯಾಣಿಕರಾದ ಡಾ. ಸಚಿನ್ ಬೋಧನಿ ಅವರು ರೇಲ್ವೆ ಸಚಿವರಿಗೆ ಪತ್ರ ಬರೆದು ಹಿಂದೂಗಳಿಗಾಗಿ ‘ಝಟ್ಕಾ’ ಮಾಂಸದ ಆಯ್ಕೆಯನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ‘ಭಾರತೀಯ ರೆಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ’ (ಐ.ಆರ್.ಸಿ.ಟಿ.ಸಿ.) ನೀಡಿರುವ ಉತ್ತರವು ಅತ್ಯಂತ ಅಸ್ಪಷ್ಟವಾಗಿದ್ದು, ಹಿಂದೂಗಳ ಬೇಡಿಕೆಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತಿದೆ.
❓ Why is Halal meat being imposed on Hindus in Railways? – Dr. Sachin Bodhani
Railway Administration Gives Evasive Reply to Demand for Jhatka Meat Instead of Halal for Hindu Passengers!
⚖️ Since Halal is linked to a specific religious process, forcing it on Hindu passengers… pic.twitter.com/WtGSpc3nMy
— Sanatan Prabhat (@SanatanPrabhat) April 26, 2026
ಡಾ. ಬೋಧನಿ ಅವರ ಪತ್ರದಲ್ಲೇನಿತ್ತು?
ಹಲಾಲ್ ಪದ್ಧತಿಯು ಕೇವಲ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಾಗಿದ್ದು, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಹೇರುವುದು ಸಂವಿಧಾನದ ಉಲ್ಲಂಘನೆಯಾಗಿದೆ, ಅಲ್ಲದೆ ಇದು ಹಿಂದೂಗಳ ಧಾರ್ಮಿಕ ಹಕ್ಕುಗಳ ಮೇಲೆ ಗದಾ ಪ್ರಹಾರವಾಗಿದೆ ಎಂದು ಡಾ. ಬೋಧನಿ ಅವರು ಪತ್ರದಲ್ಲಿ ಹೇಳಿದ್ದರು. ‘ವಂದೇ ಭಾರತ್’ನಂತಹ ರೈಲುಗಳಲ್ಲಿ ಹಿಂದೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಝಟ್ಕಾ ಮಾಂಸದ ಆಯ್ಕೆ ನೀಡುವುದು ಅವರ ಅಧಿಕಾರವಾಗಿದೆ ಎಂದು ಅವರು ತಿಳಿಸಿದ್ದರು.
ಐ.ಆರ್.ಸಿ.ಟಿ.ಸಿ. ನೀಡಿದ ಉತ್ತರ ಮತ್ತು ದೋಷ
ಡಾ. ಬೋಧನಿ ಅವರ ಪತ್ರಕ್ಕೆ ಉತ್ತರಿಸುತ್ತಾ ಐ.ಆರ್.ಸಿ.ಟಿ.ಸಿ.ಯ ಸಮೂಹ ಮಹಾಪ್ರಬಂಧಕರು ಹೀಗೆ ಹೇಳಿದ್ದಾರೆ, ‘ನಮ್ಮಿಂದ ಪ್ರಯಾಣಿಕರಿಗೆ ಒದಗಿಸಲಾಗುವ ಆಹಾರವು ಸರಕಾರದ ಆಹಾರ ಸುರಕ್ಷತಾ ಕಾಯ್ದೆ’ಯ (‘ಎಫ್.ಎಸ್.ಎಸ್.ಎ.ಐ.’) ನಿಯಮಗಳ ಪ್ರಕಾರ ಇರುತ್ತದೆ.’ ಝಟ್ಕಾ ಅಥವಾ ಹಲಾಲ್ ಮಾಂಸದ ಪ್ರಶ್ನೆಗೆ ನೇರ ಉತ್ತರ ನೀಡದೆ ಅವರು ಕೇವಲ ‘ನಾವು ಸರಕಾರಿ ನಿಯಮಗಳನ್ನು ಪಾಲಿಸುತ್ತೇವೆ’ ಎಂಬ ತಾಂತ್ರಿಕ ಉತ್ತರವನ್ನು ನೀಡಿದ್ದಾರೆ.
ರೇಲ್ವೆ ಆಡಳಿತವು ಆಹಾರದ ಸುರಕ್ಷತೆಯ ಬಗ್ಗೆ ಮಾತನಾಡುತ್ತಿದ್ದರೂ, ಹಿಂದೂಗಳ ಧಾರ್ಮಿಕ ಭಾವನೆಗಳು ಮತ್ತು ಹಲಾಲ್ ಹೇರಿಕೆಯ ಬಗ್ಗೆ ಮೌನ ತಾಳಿದೆ. ಕೇವಲ ಸರಕಾರಿ ನಿಯಮಗಳ ಉಲ್ಲೇಖ ನೀಡಿ ಹಿಂದೂಗಳ ಅಸ್ಮಿತೆಯ ಬಗ್ಗೆ ರೇಲ್ವೆ ಇಲಾಖೆಯು ಮೇಲ್ನೋಟದ ಉತ್ತರ ನೀಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”