ಮೇಲಾಧಿಕಾರಿಗಳ ಕಿರುಕುಳದಿಂದ ವಿವಾಹಿತೆ ಮನೋರೋಗಿಯಾದ ಪ್ರಕರಣ

ನಾಗಪುರ – ಕಚೇರಿಯ ಮೇಲಾಧಿಕಾರಿಗಳು ನೀಡಿದ ಲೈಂಗಿಕ ಕಿರುಕುಳದಿಂದಾಗಿ ವಿವಾಹಿತ ಮಹಿಳೆಯೊಬ್ಬರು ಮನೋರೋಗಿಯಾದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧಿತ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತನ್ನ ಧ್ವಂಸಗೊಂಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಕೆಯ ಪತಿ ಕಾನೂನು ಹೋರಾಟ ನಡೆಸುತ್ತಿದ್ದಾರೆ; ಆದರೆ ಸಂಬಂಧಪಟ್ಟ ವ್ಯವಸ್ಥೆಗಳು ಅವರಿಗೂ ವಿಪರೀತ ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ, ಆ ಯುವಕನೂ ಹುಚ್ಚನಾಗುವ ಸಾಧ್ಯತೆಯಿದೆ. ಈ ಕುರಿತು ಅವರು ಸುದ್ದಿವಾಹಿನಿಯೊಂದರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
೧. ಪತ್ನಿಯ ಕಚೇರಿಯ ಸಹೋದ್ಯೋಗಿಗಳು ಆಕೆಗೆ ಕಿರುಕುಳ ನೀಡುತ್ತಿದ್ದರು. ಅಸಹನೀಯ ತೊಂದರೆಯಿಂದಾಗಿ ಆಕೆ ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದಾಗ, ಆಕೆ ತನ್ನ ಕೆಲಸವನ್ನೇ ಕಳೆದುಕೊಳ್ಳಬೇಕಾಯಿತು. ಈ ಘಟನೆಯು ಆಕೆಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದರಿಂದ ಆಕೆ ಮನೋರೋಗಿಯಾದಳು. ಇದರಿಂದಾಗಿ ಮನೆಯ ಎಲ್ಲಾ ಕೆಲಸಗಳು, ಅಡುಗೆ ಮತ್ತು ತನ್ನ ಉದ್ಯೋಗವನ್ನೂ ನಿಭಾಯಿಸುತ್ತಾ ಪತಿಯು ಪತ್ನಿಗೆ ಚಿಕಿತ್ಸೆ ಕೊಡಿಸಿದರು. ಆಕೆಗೆ ನ್ಯಾಯ ಕೊಡಿಸಲು ಪೊಲೀಸರನ್ನು ಹತ್ತಾರು ಬಾರಿ ಭೇಟಿ ಮಾಡಿದರು.
೨. ಫೆಬ್ರವರಿ ತಿಂಗಳ ಒಂದು ರಾತ್ರಿ ಇಬ್ಬರು ಯುವಕರು ಮನೆಗೆ ಬಂದರು. ಅವರು ಮಹಿಳೆಯ ಕೂದಲನ್ನು ಕತ್ತರಿಸಿ ಆಕೆಯನ್ನು ಮತ್ತಷ್ಟು ವಿರೂಪಗೊಳಿಸಿದರು. ಈ ಸಮಯದಲ್ಲಿ ಆಕೆಯ ಪತಿ ಪೊಲೀಸರ ಬಳಿ ಧಾವಿಸಿದರು. ಹಲವು ಬಾರಿ ಅಲೆದಾಡಿದ ನಂತರ, ಪೊಲೀಸರು ಇದೊಂದು ಅರಿಯಲಾಗದ ಅಪರಾಧ (Non-cognizable) ಪ್ರಕರಣವೆಂದು ಹೇಳಿ ಕೈತೊಳೆದುಕೊಂಡರು.
೩. ಇದರ ನಂತರ ಅವರು ಪರಿಶಿಷ್ಟ ಜಾತಿ-ಪಂಗಡಗಳ ಆಯೋಗ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದರು. ಎರಡೂ ಕಡೆಯಿಂದ ಅವರಿಗೆ ಸ್ವೀಕೃತಿ ಪತ್ರ ಲಭಿಸಿತು. ಮಾರ್ಚ್ ೧೦, ೨೦೨೬ ರಂದು ರಾಜ್ಯ ಮಹಿಳಾ ಆಯೋಗವು ನಾಗಪುರ ಪೊಲೀಸ್ ಕಮಿಷನರ್ ಕಚೇರಿಗೆ ಪತ್ರ ಬರೆದು, ತಕ್ಷಣ ಕ್ರಮ ಕೈಗೊಂಡು ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತು.
೪. ಪೊಲೀಸರು ಈಗ ಮನೋರೋಗಿ ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ; ಆದರೆ ಆಕೆ ಮನೋರೋಗಿಯಾಗಿರುವುದರಿಂದ ಪೊಲೀಸರ ಮುಂದೆ ಏನು ಹೇಳಬಲ್ಲಳು? ಎಂಬುದು ಪ್ರಶ್ನೆಯಾಗಿದೆ. ಆದರೂ ಪೊಲೀಸರು ಆಕೆಯನ್ನು ಕರೆತರಲು ೫ ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಬಗ್ಗೆ ಪತಿ ಅಸಹಾಯಕತೆಯಿಂದ, ಈಗ ನಾನು ತಲೆ ಚಚ್ಚಿಕೊಳ್ಳಬೇಕೇ? ನ್ಯಾಯ ಸಿಗುವ ಬದಲಿಗೆ ಸತತವಾಗಿ ಮಾನಸಿಕ ಕಿರುಕುಳವೇ ಸಿಗುತ್ತಿದೆ. ಇದರಿಂದಾಗಿ ನಾನೇ ಹುಚ್ಚನಾಗುತ್ತಿದ್ದೇನೆ ಎಂದು ನನಗನ್ನಿಸುತ್ತಿದೆ. ನನ್ನ ತಲೆಯನ್ನು ನಾನೇ ಹೊಡೆದುಕೊಳ್ಳಬೇಕು ಎನಿಸುತ್ತಿದೆ, ಎಂದು ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!