ಟ್ರಸ್ಟ್‌ನ ಅಂದಿನ ಅಧ್ಯಕ್ಷರು, ವಿಶ್ವಸ್ತರು ಮತ್ತು ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು!

ನಾಸಿಕ್ – ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಇಲ್ಲಿನ ಸಪ್ತಶೃಂಗಿ ಕೋಟೆಯ ಮೇಲಿನ ದೇವಸ್ಥಾನದ ಕೆತ್ತನೆಯಲ್ಲಿದ್ದ ಸುಮಾರು 22.5 ಕೆಜಿ ಬೆಳ್ಳಿ ನಾಪತ್ತೆಯಾಗಿದೆ. ದೇವಸ್ಥಾನದ ವ್ಯವಸ್ಥಾಪಕ ಸುದರ್ಶನ ದಹಾತೊಂಡೆ ಅವರು ರಜೆಯಲ್ಲಿದ್ದಾಗ, ರಾತ್ರೋರಾತ್ರಿ ವಿಶ್ವಸ್ತರು ಗರ್ಭಗುಡಿಯಲ್ಲಿದ್ದ ಬೆಳ್ಳಿಯನ್ನು ತೆಗೆದಿರುವುದು ವಿಭಾಗೀಯ ಆಯುಕ್ತರ ಕಚೇರಿಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಟ್ರಸ್ಟ್‌ನ ಅಂದಿನ ಅಧ್ಯಕ್ಷರು, ವಿಶ್ವಸ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ನಾಪತ್ತೆಯಾದ ಬೆಳ್ಳಿಯ ಮೊತ್ತವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಠೋಬಾ ದ್ಯಾನದ್ಯಾನ್ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ವಿಭಾಗೀಯ ಆಯುಕ್ತರಿಗೆ ದೂರು ನೀಡಿದ್ದಾರೆ.
🚨 22.5 kg Silver Missing from Saptashrungi Gad Mandir
Criminal cases have been registered against the then-chairman, trustees, and other officials of the Trust. ⚖️
This is the direct consequence of government control over temples. Those responsible for this shocking theft… pic.twitter.com/EG4QIOSuh7
— Sanatan Prabhat (@SanatanPrabhat) April 23, 2026
1. ಗರ್ಭಗುಡಿಯ ಕೆತ್ತನೆಗಾಗಿ ಹಳೆಯ ದಾಖಲೆಗಳ ಪ್ರಕಾರ ಸುಮಾರು 406 ಕೆಜಿ ಬೆಳ್ಳಿ ಬಳಸಲಾಗಿತ್ತು. ಆದರೆ ಪ್ರತ್ಯೇಕವಾಗಿ ಅಳತೆ ಮಾಡಿದಾಗ ಅದು ಕೇವಲ 383 ಕೆಜಿ 703 ಗ್ರಾಂ ಮಾತ್ರ ಕಂಡುಬಂದಿದೆ.
2. ಅಪರ ಆಯುಕ್ತ (ಕಂದಾಯ) ಜಿತೇಂದ್ರ ವಾಘ ಅವರು ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಕಲ್ವಣ್‌ನ ಸಹಾಯಕ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕಚೇರಿ ಸೂಚಿಸಿದೆ. ‘ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ನೊಂದಾಯಿಸಿ’ ಎಂದು ವಿಠೋಬಾ ದ್ಯಾನದ್ಯಾನ್ ಇವರು ಆಗ್ರಹಿಸಿದ್ದರು.
3. ಶ್ರೀ ಕ್ಷೇತ್ರ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ವಿಶ್ವಸ್ತರು ನಡೆಸಿದ್ದ ಅವ್ಯವಹಾರಗಳು ಈ ಹಿಂದೆ ಬಯಲಾಗಿದ್ದವು. ಅದೇ ಮಾದರಿಯಲ್ಲಿ ಇಲ್ಲಿಯೂ ತನಿಖೆ ನಡೆಸಿದರೆ ಅಂದಿನ ವಿಶ್ವಸ್ತರ ದೊಡ್ಡ ಮಟ್ಟದ ಭ್ರಷ್ಟಾಚಾರ ಹೊರಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಾಜಿ ವಿಶ್ವಸ್ಥರಿಂದ ಅನೇಕ ತಪ್ಪದ ಘಟನೆಗಳು ನಡೆದಿರುವುದು ವಿಚಾರಣೆಯಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.
4. ಸಪ್ತಶೃಂಗಿ ಟ್ರಸ್ಟ್ ಸೆಪ್ಟೆಂಬರ್ 15, 2021 ರಂದು ನಿರ್ಣಯ ಕೈಗೊಂಡು ಹಗಲಿನ ವೇಳೆಯಲ್ಲಿ ಬೆಳ್ಳಿ ತೆಗೆಯಲು ಯೋಜಿಸಿತ್ತು; ಆದರೆ ಮರುದಿನವೇ ರಾತ್ರಿ ಸಮಯದಲ್ಲಿ, ಮೌಲ್ಯಮಾಪಕರ ಅನುಪಸ್ಥಿತಿಯಲ್ಲಿ ಗರ್ಭಗುಡಿಯ ಬೆಳ್ಳಿಯನ್ನು ತೆಗೆಯಲಾಯಿತು. ಈ ಕುರಿತು ವ್ಯವಸ್ಥಾಪಕ ದಹಾತೊಂಡೆ ಅವರು ಅಧ್ಯಕ್ಷರಿಗೆ ಮತ್ತು ಧರ್ಮಾಧಾಯ ಆಯುಕ್ತರಿಗೆ ಬರೆದ ಪತ್ರವೇ ಪ್ರಬಲ ಪುರಾವೆಯಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸಿದ ವಿಶ್ವಸ್ತರು, ದಹಾತೊಂಡೆ ವಿರುದ್ಧ ಪಿತೂರಿ ನಡೆಸಿ ಅವರನ್ನು ಅಮಾನತುಗೊಳಿಸಿದ್ದರು.
ಸತ್ಯ ಹೊರಬರಲಿ ಎಂದು ಆಗ್ರಹ!ದೇವಸ್ಥಾನದಲ್ಲಿರುವ ಬೆಳ್ಳಿಯು ಭಕ್ತರ ಶ್ರದ್ಧೆಯ ಆಸ್ತಿಯಾಗಿದೆ. ಅದರ ರಕ್ಷಣೆಯ ಜವಾಬ್ದಾರಿ ಹೊತ್ತವರೇ ಇಂತಹ ಅಕೃತ್ಯ ಎಸಗುತ್ತಿದ್ದರೆ ಅದು ಸಮಾಜಕ್ಕೆ ಅಪಾಯಕಾರಿ. ಈ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕು. — ವಿಠೋಬಾ ದ್ಯಾನದ್ಯಾನ್, ಸಾಮಾಜಿಕ ಕಾರ್ಯಕರ್ತ |
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ