
ಲಂಡನ್ (ಬ್ರಿಟನ್) – ಇಲ್ಲಿ ಬಾಡಿಗೆ ಮನೆಗಳಿಗೆ ಸಂಬಂಧಿಸಿದಂತೆ ಒಂದು ಗಂಭೀರ ವಿಷಯ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಪತ್ರಿಕೆಯೊಂದು ನಡೆಸಿದ ತನಿಖೆಯಲ್ಲಿ, ಕೆಲವು ಮನೆಮಾಲೀಕರು ಧರ್ಮ, ಜಾತಿ ಮತ್ತು ಭಾಷೆಯ ಆಧಾರದ ಮೇಲೆ ಬಹಿರಂಗವಾಗಿ ತಾರತಮ್ಯ ಮಾಡುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಜಾಹೀರಾತುಗಳು
ಫೇಸ್‌ಬುಕ್ ಮತ್ತು ಟೆಲಿಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ‘ಕೇವಲ ಮುಸ್ಲಿಮರಿಗಾಗಿ’, ‘ಮುಸ್ಲಿಂ ಹುಡುಗಿಯರಿಗಾಗಿ’ ಅಥವಾ ‘ಮುಸ್ಲಿಮರಿಗೆ ಆದ್ಯತೆ’ ಎಂಬರ್ಥದ ಸಾವಿರಾರು ಜಾಹೀರಾತುಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಇದು ಬ್ರಿಟನ್‌ನ ತಾರತಮ್ಯ ವಿರೋಧಿ ಕಾಯಿದೆಯಾದ ‘ಸಮಾನತೆಯ ಕಾಯಿದೆ 2010’ ರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಧರ್ಮ, ಭಾಷೆ ಮತ್ತು ಪ್ರದೇಶ ಆಧಾರಿತ ಷರತ್ತುಗಳು
ಕೆಲವು ಜಾಹೀರಾತುಗಳಲ್ಲಿ ‘ಕೇವಲ ಹಿಂದೂ’, ‘ಗುಜರಾತಿ ಮಾತನಾಡುವವರು’, ‘ಕೇವಲ ಪಂಜಾಬಿ ಯುವಕರು’ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಕೆಲವು ಕಡೆ ಹರಿಯಾಣ ಅಥವಾ ಕೇರಳ ರಾಜ್ಯದವರಿಗಾಗಿಯೇ ಕೊಠಡಿಗಳನ್ನು ಮೀಸಲಿಟ್ಟಿರುವುದು ಕಂಡುಬಂದಿದೆ.
ನಿರಾಕರಣೆ ಮತ್ತು ಅಸಭ್ಯ ವರ್ತನೆಯ ಉದಾಹರಣೆಗಳು
ಬಾರ್ಕಿಂಗ್ ಪ್ರದೇಶದಲ್ಲಿ ಮುಸ್ಲಿಮೇತರ ವ್ಯಕ್ತಿಯೊಬ್ಬರು ‘ಕೇವಲ ಮುಸ್ಲಿಮರಿಗಾಗಿ’ ಎಂದು ಹಾಕಲಾಗಿದ್ದ ಕೊಠಡಿಯ ಬಗ್ಗೆ ವಿಚಾರಿಸಿದಾಗ, ಮನೆಮಾಲೀಕರು ಅವರಿಗೆ ನೇರವಾಗಿ ನಿರಾಕರಿಸಿ ‘ಇಲ್ಲಿಂದ ಹೊರಟು ಹೋಗಿ’ ಎಂದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನೂನು ಕ್ರಮದ ಸಾಧ್ಯತೆ
ಧರ್ಮ, ಜನಾಂಗ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದು ಕಾನೂನುಬಾಹಿರ ಎಂದು ಸಮಾನತೆ ಮತ್ತು ಮಾನವ ಹಕ್ಕುಗಳ ಆಯೋಗ ಸ್ಪಷ್ಟಪಡಿಸಿದೆ. ಇಂತಹ ಜಾಹೀರಾತು ನೀಡುವ ಮನೆಮಾಲೀಕರು ದಂಡ ಮತ್ತು ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದು.
ದೂರುಗಳ ನಂತರ ಫೇಸ್‌ಬುಕ್ ಇಂತಹ ಅನೇಕ ಜಾಹೀರಾತುಗಳು ಮತ್ತು ಪುಟಗಳನ್ನು ತೆಗೆದುಹಾಕಿದೆ.
ಸರಕಾರದ ನಿಲುವು
ಧರ್ಮ ಅಥವಾ ಸಮುದಾಯದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ಸಹಿಸುವುದಿಲ್ಲ ಮತ್ತು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯುಕೆ ಸರಕಾರ ಸ್ಪಷ್ಟಪಡಿಸಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers