Hubli Love Jihad Case : ಹಿಂದೂ ಯುವತಿ ಮತ್ತು ಪೋಷಕರಿಂದ ಮತಾಂಧ ಮುಸ್ಲಿಂ ಯುವಕನಿಗೆ ತಪರಾಕಿ!

ಹುಬ್ಬಳ್ಳಿ (ಕರ್ನಾಟಕ): ಇಲ್ಲಿನ ವಿದ್ಯಾನಗರ ಪ್ರದೇಶದಲ್ಲಿ ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಯುವಕನಿಗೆ ಸಂತ್ರಸ್ತ ಯುವತಿ ಮತ್ತು ಆಕೆಯ ಪೋಷಕರು ಧರ್ಮದೇಟು ನೀಡಿದ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾನಗರ ಭಾಗದ ‘ಬಿಗ್ ಬಾಸ್’ ಹೆಸರಿನ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನು ಹಿಂದೂ ಯುವತಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದನು. ‘ನನ್ನನ್ನು ಪ್ರೀತಿಸು’ ಎಂದು ಆಕೆಗೆ ಪೀಡಿಸುತ್ತಿದ್ದನು. ಅಲ್ಲದೆ ಆಕೆಯನ್ನು ಹಿಂಬಾಲಿಸಿ ಸತಾಯಿಸುತ್ತಿದ್ದನು. ಯುವಕನ ಈ ಅತಿರೇಕದ ವರ್ತನೆಯಿಂದ ಬೇಸತ್ತ ಸಂತ್ರಸ್ತೆ ಈ ವಿಷಯವನ್ನು ತನ್ನ ಪೋಷಕರ ಗಮನಕ್ಕೆ ತಂದಳು.

ಸಂತ್ರಸ್ತ ಯುವತಿಯು ತನ್ನ ಪೋಷಕರೊಂದಿಗೆ ಆರೋಪಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮಾನಸಿಕ ಕಿರುಕುಳದ ಬಗ್ಗೆ ಪ್ರಶ್ನಿಸಿದಳು. ಈ ವೇಳೆ ಆರೋಪಿ ಯುವಕನು ಉದ್ಧಟತನದಿಂದ ವರ್ತಿಸಿ ಅವರೊಂದಿಗೆ ಜಗಳವಾಡಿದನು. ಇದರಿಂದ ಆಕ್ರೋಶಗೊಂಡ ಯುವತಿ ಮತ್ತು ಪೋಷಕರು ಆರೋಪಿಯನ್ನು ಥಳಿಸಿದರು.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದರು. ಸದ್ಯ ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಯುವತಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದ ಕಾಮುಕ!
  • ದೇಶಾದ್ಯಂತ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳು ಮತ್ತು ಅವುಗಳನ್ನು ತಡೆಯುವಲ್ಲಿ ವಿವಿಧ ರಾಜ್ಯ ಸರಕಾರಗಳು, ಪೊಲೀಸ್ ಮತ್ತು ಆಡಳಿತದ ನಿಷ್ಕ್ರಿಯತೆಯನ್ನು ಗಮನಿಸಿದರೆ, ಹಿಂದೂಗಳು ಈಗ ತಾವೇ ನೇರ ಕ್ರಮಕ್ಕೆ ಮುಂದಾಗುತ್ತಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ!