ಕಚೇರಿಯಲ್ಲಿ ಯುವತಿಯರ ಮೇಲೆ ಮತಾಂತರಕ್ಕೆ ಒತ್ತಡ ಹೇರುತ್ತಿದ್ದ ಮುಸಲ್ಮಾನನ ಬಂಧನ !

ನಾಗ್ಪುರದಲ್ಲಿ ನಡೆದ ಘಟನೆ !

ನಾಗ್ಪುರ – ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವಂತೆ ರಿಯಾಜ್ ಖಾಜಿ ಎಂಬಾತ ಅಲ್ಲಿನ ಯುವತಿಯರ ಮೇಲೆ ಒತ್ತಡ ಹೇರಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪೊಲೀಸರು ರಿಯಾಜ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಆತನನ್ನು ಏಪ್ರಿಲ್ 23 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ರಿಯಾಜ್ ಜೊತೆ ಬೇರೆ ಯಾರಾದರೂ ಶಾಮೀಲಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆತ ‘ಫಿಕರ್ ಫೌಂಡೇಶನ್’ ಮತ್ತು ‘ಪಢೇ ಹಮ್ ಪಢಾಯೇ ಹಮ್’ ಹೆಸರಿನ ಸ್ವಯಂಸೇವಾ ಸಂಸ್ಥೆಗಳನ್ನು (NGO) ನಡೆಸುತ್ತಿದ್ದಾನೆ.

ಆತ 2 ವರ್ಷಗಳ ಹಿಂದೆ ಕಚೇರಿಯಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದನು. ರಿಯಾಜ್ ಯಾವಾಗಲೂ ‘ತನ್ನ ಧರ್ಮ ಎಷ್ಟು ಒಳ್ಳೆಯದು’ ಎಂದು ಹೇಳುತ್ತಿದ್ದನು. ಆತನ ವರ್ತನೆಯಿಂದ ಬೇಸತ್ತು ಕೆಲ ಯುವತಿಯರು ಕೆಲಸವನ್ನೂ ಬಿಟ್ಟಿದ್ದರು. ಕೆಲವು ದಿನಗಳ ಹಿಂದೆ ಆತ, ಕೆಲಸ ಬಿಟ್ಟು ಹೋಗಿದ್ದ ಯುವತಿಯೊಬ್ಬಳ ತಾಯಿಯನ್ನು ಸಂಪರ್ಕಿಸಿದ್ದನು. ಆತ ಇತರ ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದನು. ಈ ವಿಚಾರ ತಿಳಿದ ನಂತರ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಎಲ್ಲೆಡೆ ಇರುವ ಸಂತ್ರಸ್ತ ಯುವತಿಯರು ಇಂತಹ ಧೈರ್ಯ ತೋರಬೇಕು ! ಹಾಗೆ ಮಾಡಿದರೆ ಮಾತ್ರ ಮತಾಂಧರ ಬಣ್ಣ ಬಯಲಾಗುತ್ತದೆ !
  • ಮತಾಂತರಕ್ಕೆ ಒತ್ತಡ ಹೇರುವ ಘಟನೆಗಳು ಎಲ್ಲೆಡೆ ಬಹಿರಂಗವಾಗಿ ನಡೆಯುತ್ತಿರುವಾಗ ಪೊಲೀಸ್‌ ಇಲಾಖೆ ಅದನ್ನು ಹೇಗೆ ನಿಯಂತ್ರಿಸುತ್ತದೆ ? ಇದಕ್ಕಾಗಿ ಆದಷ್ಟು ಬೇಗ ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವುದು ಅನಿವಾರ್ಯವಾಗಿದೆ !
  • ಹಿಂದೂಗಳು ತಮ್ಮ ಧರ್ಮದ ಹಿರಿಮೆಯನ್ನು ಹೇಳಿದರೆ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ, ಆದರೆ ಮುಸಲ್ಮಾನರು ಇಸ್ಲಾಂ ಧರ್ಮವನ್ನು ಹೊಗಳುವುದು ಮಾತ್ರ ನಡೆಯುತ್ತದೆ. ಇದು ಜಾತ್ಯತೀತ ಭಾರತದಲ್ಲಿ ಹಿಂದೂಗಳ ವಿಷಯದಲ್ಲಿ ಅನುಸರಿಸುತ್ತಿರುವ ದ್ವಂದ್ವ ನೀತಿಯಲ್ಲವೇ ?