2009 ಮತ್ತು 2014ರ ವಿಧಾನಸಭಾ ಚುನಾವಣೆಗೂ ಮುನ್ನ ಭಾರಿ ಪ್ರಮಾಣದಲ್ಲಿ ಭದ್ರತೆ ಇಲ್ಲದ ಸಾಲ ವಿತರಣೆ!
43 ಸಾವಿರ ಜನರಿಂದ 158 ಕೋಟಿ ರೂಪಾಯಿ ಬಾಕಿ, ವಸೂಲಾತಿ ಕೇವಲ 12.78 ಶೇಕಡಾ ಮಾತ್ರ!
ಶ್ರೀ. ಪ್ರೀತಮ ನಾಚಣಕರ, ಸನಾತನ ಪ್ರಭಾತ ಪ್ರತಿನಿಧಿ, ಮುಂಬಯಿ

ಮುಂಬಯಿ, ಏಪ್ರಿಲ್ 18 – ಹಿಂದುಳಿದ ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ಧಿಗಾಗಿ ಸ್ಥಾಪಿಸಲಾದ ‘ಮೌಲಾನಾ ಆಜಾದ್ ಅಲ್ಪಸಂಖ್ಯಾತ ಆರ್ಥಿಕ ಅಭಿವೃದ್ಧಿ ನಿಗಮ’ವನ್ನು ಕಾಂಗ್ರೆಸ್ ಚುನಾವಣೆ ಗೆಲ್ಲಲು ಬಳಸಿಕೊಂಡಿದೆ. 2009 ಮತ್ತು 2014ರ ವಿಧಾನಸಭಾ ಚುನಾವಣೆಗಳ ಮೊದಲು, ನಿಗಮದ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಮುಸ್ಲಿಮರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಸಾಲ ಹಂಚಿಕೆ ಮಾಡಿದೆ. 2001 ರಿಂದ ನೀಡಲಾದ ಈ ಸಾಲದ ವಸೂಲಾತಿ ಇದುವರೆಗೆ ಕೇವಲ 12.78% ಮಾತ್ರ ಆಗಿದೆ. ಕಳೆದ 25 ವರ್ಷಗಳಲ್ಲಿ ಬರೋಬ್ಬರಿ 43,412 ಫಲಾನುಭವಿಗಳಿಂದ 158 ಕೋಟಿ 53 ಲಕ್ಷ 45 ಸಾವಿರ ರೂಪಾಯಿ ವಸೂಲಿ ಮಾಡುವುದು ಬಾಕಿಯಿದೆ. ‘ಸನಾತನ ಪ್ರಭಾತ’ ಪ್ರತಿನಿಧಿ ಶ್ರೀ. ಪ್ರೀತಮ ನಾಚಣಕರ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿ ಲಭ್ಯವಾಗಿದೆ.
೨೦೦೦ನೇ ಇಸವಿಯಲ್ಲಿ ‘ಮೌಲಾನಾ ಆಜಾದ್ ಅಲ್ಪಸಂಖ್ಯಾತ ಆರ್ಥಿಕ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಲಾಯಿತು. ೨೦೦೧-೦೨ರಲ್ಲಿ ೨೦೧ ಜನರಿಗೆ ೭೪ ಲಕ್ಷ ರೂಪಾಯಿಗಳ ಸಾಲ ನೀಡಲಾಗಿತ್ತು. ೨೦೦೨-೦೩ ರಿಂದ ೨೦೦೬-೦೭ ರ ಅವಧಿಯಲ್ಲಿ ಯಾವುದೇ ಸಾಲ ನೀಡಲಾಗಿಲ್ಲ. ೨೦೦೭-೦೮ರಲ್ಲಿ ೨೦೫ ಜನರಿಗೆ ೯೦ ಲಕ್ಷ ರೂಪಾಯಿ ಹಾಗೂ ೨೦೦೮-೦೯ರಲ್ಲಿ ೧೪೭ ಜನರಿಗೆ ೬೫ ಲಕ್ಷ ೮ ಸಾವಿರ ರೂಪಾಯಿಗಳ ಸಾಲ ನೀಡಲಾಗಿತ್ತು. ಆದರೆ, ೨೦೦೯ರ ವಿಧಾನಸಭಾ ಚುನಾವಣೆಯ ಮೊದಲು ಸಾಲ ನೀಡುವ ಪ್ರಮಾಣವನ್ನು ೬೮ ಪಟ್ಟು ಹೆಚ್ಚಿಸಿ, ೧೩ ಸಾವಿರದ ೬೯೬ ಜನರಿಗೆ ೪೬ ಕೋಟಿ ೬೯ ಲಕ್ಷ ೫೬ ಸಾವಿರ ರೂಪಾಯಿಗಳ ಸಾಲದ ಉಡುಗೊರೆಯನ್ನು (ಖೈರಾತು) ನೀಡಲಾಯಿತು. ತದನಂತರ ೨೦೧೩-೧೪ರ ವರೆಗೆ ಸಾಲ ವಿತರಣೆಯನ್ನು ಕಡಿಮೆ ಮಾಡಲಾಯಿತು ಮತ್ತು ೨೦೧೪ರ ವಿಧಾನಸಭಾ ಚುನಾವಣೆಗೆ ಮೊದಲು ೧೧ ಸಾವಿರದ ೩೬ ಜನರಿಗೆ ೪೪ ಕೋಟಿ ೧೪ ಲಕ್ಷ ೪೦ ಸಾವಿರ ರೂಪಾಯಿಗಳ ಸಾಲವನ್ನು ನೀಡಲಾಯಿತು.
೨೦೦೯ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ!
ಅಕ್ಟೋಬರ್ ೨೦೦೯ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ರಾಷ್ಟ್ರವಾದಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ತದನಂತರ ತಕ್ಷಣವೇ ೧೭ ನವೆಂಬರ್ ೨೦೦೯ರಂದು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯು ಸರಕಾರದ ನಿರ್ಣಯವನ್ನು ಹೊರಡಿಸಿ, ೩೧ ಮಾರ್ಚ್ ೨೦೦೭ರ ವರೆಗೆ ನೀಡಲಾದ ಎಲ್ಲಾ ಸಾಲಗಳನ್ನು ಬಡ್ಡಿ ಸಮೇತ ಮನ್ನಾ ಮಾಡಿತು. ಈ ಸಾಲ ಮನ್ನಾಕ್ಕಾಗಿ ಸರಕಾರದ ಖಜಾನೆಯಿಂದ ೧೭ ಕೋಟಿ ೨೨ ಲಕ್ಷ ರೂಪಾಯಿಗಳನ್ನು ನೀಡಬೇಕಾಯಿತು. ೨೦೧೪ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಪರಾಭವಗೊಂಡು ಶಿವಸೇನೆ-ಭಾಜಪ ಮಹಾಮೈತ್ರಿ ಅಧಿಕಾರಕ್ಕೆ ಬಂದಿತು. ಒಂದು ವೇಳೆ ಮೈತ್ರಿಕೂಟ ಸರಕಾರ ಮತ್ತೆ ಅಧಿಕಾರಕ್ಕೆ ಬಂದಿದ್ದರೆ, ಬಾಕಿ ಇರುವ ಉಳಿದ ಸಾಲಗಳನ್ನೂ ಮನ್ನಾ ಮಾಡಲಾಗುತ್ತಿತ್ತು!
ವಸೂಲಾತಿ ಆಗದಿದ್ದರೂ ಸಾಲ ವಿತರಣೆ!
ಮಹಾರಾಷ್ಟ್ರ ರಾಜ್ಯದಲ್ಲಿ ಮಹಾಯುತಿ ಸರಕಾರ ಬಂದ ನಂತರ ೨೦೧೫-೧೬ರಲ್ಲಿ ೨ ಸಾವಿರದ ೮೩೭ ಜನರಿಗೆ ೧೧ ಕೋಟಿ ೩೪ ಲಕ್ಷ ೪೦ ಸಾವಿರ ರೂಪಾಯಿಗಳ ಮತ್ತು ೨೦೧೬-೧೭ರಲ್ಲಿ ೪೨ ಜನರಿಗೆ ೧೮ ಲಕ್ಷ ೯೭ ಸಾವಿರ ರೂಪಾಯಿಗಳ ಸಾಲವನ್ನು ವಿತರಿಸಲಾಯಿತು; ಆದರೆ ಒಟ್ಟಾರೆಯಾಗಿ ಸಾಲ ವಸೂಲಾತಿ ಆಗದಿರುವುದನ್ನು ಗಮನಿಸಿ ೨೦೧೭ರಿಂದ ಈ ಸಾಲ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು. ಮೂಲತಃ ನಿಗಮದ ಮೂಲಕ ಶೈಕ್ಷಣಿಕ ಸಾಲ ವಿತರಣೆಯ ಯೋಜನೆ ಪ್ರಾರಂಭವಾದಾಗಿನಿಂದಲೇ ಅದರ ವಸೂಲಾತಿ ಆಗದಿದ್ದರೂ ಕಾಂಗ್ರೆಸ್ ಮೈತ್ರಿಕೂಟವು ಚುನಾವಣೆಯ ಸಮಯದಲ್ಲಿ ಈ ಸಾಲಗಳನ್ನು ದೊಡ್ಡ ಪ್ರಮಾಣದಲ್ಲಿ ವಿತರಿಸಿತು. ಅಲ್ಲದೆ, ವಸೂಲಾತಿಯ ಸ್ಥಿತಿ ಗಂಭೀರವಾಗಿದ್ದರೂ ಅಧಿಕಾರಕ್ಕೆ ಬಂದ ನಂತರ ಮಹಾಯುತಿ ಸರಕಾರವೂ ಒಂದು ವರ್ಷದ ಕಾಲ ದೊಡ್ಡ ಪ್ರಮಾಣದಲ್ಲಿ ಸಾಲ ವಿತರಿಸಿತು.
ಸಾಲ ಪಡೆದವರ ಖಾತೆಯಲ್ಲಿ ಹಣವೇ ಇಲ್ಲ! – ಮೌಲಾನಾ ಆಜಾದ್ ಆರ್ಥಿಕ ಅಭಿವೃದ್ಧಿ ನಿಗಮಸಾಲ ವಸೂಲಾತಿಗಾಗಿ ನಿಗಮದ ವತಿಯಿಂದ ವಸೂಲಾತಿ ತಂಡಗಳನ್ನು ನೇಮಿಸಲಾಗಿದೆ; ಆದರೆ ಸಾಲ ಪಡೆದವರು ‘ಖಾತೆಯಲ್ಲಿ ಹಣವಿಲ್ಲ, ಆದ್ದರಿಂದ ಸಾಲ ಮರುಪಾವತಿ ಮಾಡಲು ಮಿತಿಗಳಿವೆ’ ಎಂಬ ಕಾರಣಗಳನ್ನು ನೀಡಿದ್ದಾರೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. |
ಒಟ್ಟಾರೆಯಾಗಿ ಸಾವಿರಾರು ಫಲಾನುಭವಿಗಳಿಂದ ಸಾಲ ವಸೂಲಿ ಮಾಡುವುದು ನಿಗಮಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಆಡಳಿತ ಮಂಡಳಿಯು ಸರಕಾರಕ್ಕೆ ಸಾಲ ಮನ್ನಾದ ಪ್ರಸ್ತಾವನೆಯನ್ನು ಕಳುಹಿಸುವ ಸಿದ್ಧತೆಯಲ್ಲಿದೆ. ಇದರಿಂದಾಗಿ ಮುಸ್ಲಿಮರ ಮತಗಳನ್ನು ಪಡೆಯಲು ಕಾಂಗ್ರೆಸ್ ಶೈಕ್ಷಣಿಕ ಸಾಲದ ಮೂಲಕ ಹಂಚಿದ ಈ ಉಡುಗೊರೆಯ ಹೊರೆ ಮತ್ತೆ ಸಾರ್ವಜನಿಕರ ತಲೆಗೆ ಬೀಳುವ ಸಾಧ್ಯತೆಯಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!