
ಲಾಹೋರ್ (ಪಾಕಿಸ್ತಾನ) – ‘ಲಷ್ಕರ್-ಎ-ತೊಯ್ಬಾ’ ಭಯೋತ್ಪಾದನಾ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಅಮೀರ್ ಹಮ್ಜಾ ಎಂಬ ಉಗ್ರನ ಮೇಲೆ ಇಲ್ಲಿನ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹಮ್ಜಾ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲೂ ಆತನ ಮನೆಯ ಹೊರಗೆ ಅಪರಿಚಿತರು ಗುಂಡು ಹಾರಿಸಿದ್ದರು.
ಅಮೀರ್ ಹಮ್ಜಾನನ್ನು ಅಮೆರಿಕಾ ಈಗಾಗಲೇ ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿದೆ. ಭಾರತದಲ್ಲಿ ನಡೆದ ಹಲವು ಭಯೋತ್ಪಾದನಾ ದಾಳಿಗಳಲ್ಲಿ ಈತನ ಕೈವಾಡವಿದೆ. ವಿಶೇಷವಾಗಿ ಜಮ್ಮುವಿನ ಸುಂಜ್ವಾನ್‌ನಲ್ಲಿರುವ ಭಾರತೀಯ ಸೇನೆಯ ಬ್ರಿಗೇಡ್ ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯ ಮಾಸ್ಟರ್‌ಮೈಂಡ್ ಈತನೇ ಎಂದು ನಂಬಲಾಗಿದೆ.
🚨 Terrorist Amir Hamza, founding member of Lashkar-e-Taiba (LeT), was shot by unknown gunmen in Lahore, Pakistan and is said to be in critical condition.
🇺🇸 The US had designated him a global terrorist in 2012.
🇮🇳 He was linked to major terror plots, including the 2005 IISc… pic.twitter.com/iIktypBTrI
— Sanatan Prabhat (@SanatanPrabhat) April 16, 2026
ಅಮೀರ್ ಹಮ್ಜಾ ಅಫ್ಘಾನ್ ಮುಜಾಹಿದ್ದೀನ್‌ನ ಹಿರಿಯ ಕಮಾಂಡರ್‌ಗಳಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ಭಯೋತ್ಪಾದನಾ ಚಟುವಟಿಕೆಗಳ ಜೊತೆಗೆ ಆತ ವಿವಿಧ ಪುಸ್ತಕಗಳನ್ನು ಬರೆಯುವ ಮೂಲಕವೂ ಗುರುತಿಸಿಕೊಂಡಿದ್ದನು. ಬಹಳ ಕಾಲದಿಂದ ಈತ ಭಯೋತ್ಪಾದಕ ಹಫೀಜ್ ಸಯೀದ್‌ನ ಅತ್ಯಂತ ಆಪ್ತನಾಗಿದ್ದನು. ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಹಣ ಸಂಗ್ರಹಿಸುವುದು, ಹೊಸ ಉಗ್ರರನ್ನು ನೇಮಕ ಮಾಡಿಕೊಳ್ಳುವುದು ಮತ್ತು ಇತರ ಘಟಕಗಳೊಂದಿಗೆ ಸಂಪರ್ಕ ಸಾಧಿಸುವುದು ಈತನ ಪ್ರಮುಖ ಜವಾಬ್ದಾರಿಯಾಗಿತ್ತು. ೧೯೮೦ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ನಡೆದ ಯುದ್ಧದಲ್ಲಿ ಈತ ಭಾಗವಹಿಸಿದ್ದನು, ಆನಂತರ ಹಫೀಜ್ ಸಯೀದ್ ಮತ್ತು ಇತರ ಉಗ್ರರೊಂದಿಗೆ ಕೈಜೋಡಿಸಿದ್ದನು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara