೫ ನಿರ್ವಾಹಕರ ಅಮಾನತು!

ಬೆಂಗಳೂರು – ರಾಜ್ಯದ ಚಿಕ್ಕಮಗಳೂರಿನಲ್ಲಿ ನಿರ್ವಾಹಕರೊಬ್ಬರು ಪುರುಷ ಪ್ರಯಾಣಿಕರಿಗೆ ಮಹಿಳೆಯರ ಉಚಿತ ಪ್ರಯಾಣದ, ಅಂದರೆ ‘ಶಕ್ತಿ ಯೋಜನೆ’ಯ ಟಿಕೆಟ್ ನೀಡಿ ಅವರಿಂದ ಹಣ ಸುಲಿಗೆ ಮಾಡಿರುವ ಘಟನೆ ಈ ಹಿಂದೆ ಬೆಳಕಿಗೆ ಬಂದಿತ್ತು. ಇದೀಗ ಬೆಂಗಳೂರಿನಲ್ಲೂ ಪುರುಷರಿಗೆ ಈ ರೀತಿ ಟಿಕೆಟ್ ನೀಡಿ ಅವರಿಂದ ಹಣ ಪಡೆದು ‘ಬಿಎಂಟಿಸಿ’ಗೆ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ವಂಚನೆ ಮಾಡಿರುವ ೫ ಬಸ್ ನಿರ್ವಾಹಕರನ್ನು ಅಮಾನತು ಮಾಡಲಾಗಿದೆ. ಸೂರ್ಯನಾರಾಯಣ, ಬೊಮ್ಮಲಿಂಗೇಶ್, ಬ್ರಿಜೇಶ್ ಬಾಬು, ಮೋಹನ್ ಮತ್ತು ಎನ್. ಪ್ರಕಾಶ್ ಅಮಾನತಾದವರಾಗಿದ್ದಾರೆ.
ತನಿಖೆಯ ವೇಳೆ, ಬಸ್ ನಿರ್ವಾಹಕರು ಕನ್ನಡ ಓದಲು ಬಾರದ ಪುರುಷ ಪ್ರಯಾಣಿಕರಿಗೆ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ ‘ಕ್ಯೂಆರ್ ಕೋಡ್’ (QR Code) ನೀಡಿ, ಅದಕ್ಕೆ ಪ್ರಯಾಣ ದರದ ಹಣವನ್ನು ಕಳುಹಿಸುವಂತೆ ಹೇಳುತ್ತಿದ್ದರು ಹಾಗೂ ಅದಕ್ಕೆ ಪ್ರತಿಯಾಗಿ ಪ್ರಯಾಣಿಕರಿಗೆ ‘ಶಕ್ತಿ ಯೋಜನೆ’ಯ ಶೂನ್ಯ ದರದ ಟಿಕೆಟ್ ನೀಡುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಮೂಲಕ ನಿರ್ವಾಹಕರು ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆ.
‘ಶಕ್ತಿ ಯೋಜನೆ’ ಎಂದರೇನು?
ರಾಜ್ಯ ಸರಕಾರದ ‘ಶಕ್ತಿ ಯೋಜನೆ’ಯು ರಾಜ್ಯದ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವ ೫ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿದೆ. ಜೂನ್ ೧೧, ೨೦೨೩ ರಿಂದ ಜಾರಿಗೆ ಬಂದಿರುವ ಈ ಯೋಜನೆಯು, ಎಲ್ಲಾ ರಾಜ್ಯಮಟ್ಟದ ಸಾರಿಗೆ ಸಂಸ್ಥೆಗಳ ಸಾಮಾನ್ಯ ಬಸ್‌ಗಳಲ್ಲಿ (ವೇಗದೂತ ಸೇರಿದಂತೆ) ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ನೀಡುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!