
ಭೋಪಾಲ್ – ಮಧ್ಯಪ್ರದೇಶ ಸರಕಾರವು ದೇವಸ್ಥಾನ ನಿರ್ವಹಣೆ (ಟೆಂಪಲ್ ಮ್ಯಾನೇಜ್‌ಮೆಂಟ್) ಕುರಿತ ಪಠ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಆ ವಿಷಯದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಪಠ್ಯಕ್ರಮವನ್ನು ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗುವುದು. ಸರಕಾರವು ಈ ಪಠ್ಯಕ್ರಮವನ್ನು ಧಾರ್ಮಿಕ ಪ್ರವಾಸೋದ್ಯಮ ಮತ್ತು ಉದ್ಯೋಗದೊಂದಿಗೆ ಜೋಡಿಸುತ್ತಿದೆ; ಆದರೆ ವಿರೋಧ ಪಕ್ಷದವರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪಿ.ಸಿ. ಶರ್ಮಾ ಅವರು, ಸರಕಾರವು ಧಾರ್ಮಿಕ ಉದ್ದೇಶಗಳನ್ನು ಸಾಧಿಸುತ್ತಿದೆ ಎಂದು ಆರೋಪಿಸಿದ್ದಾರೆ. (ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳಿದ್ದು, ಅಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರುತ್ತದೆ. ಈ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವುದು ಆಡಳಿತಗಾರರ ಕರ್ತವ್ಯವೇ ಆಗಿದೆ. ಇದನ್ನು ಧಾರ್ಮಿಕತೆಗೆ ಜೋಡಿಸಿ ಕಾಂಗ್ರೆಸ್ ‘ಮುಸ್ಲಿಮರನ್ನು ಓಲೈಸುವ’ ತನ್ನ ನಿಜವಾದ ಅಜೆಂಡಾವನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು! – ಸಂಪಾದಕರು)
Congress Opposes MP government plans to launch a Temple Management course for MBA students at Samrat Vikramaditya University.
Strangely, whenever education or employment is connected to Hindu institutions, Congress objects.
With lakhs of temples handling major economic… pic.twitter.com/aYcd0Rde66
— Sanatan Prabhat (@SanatanPrabhat) April 14, 2026
೧. ಈ ಪಠ್ಯಕ್ರಮದಿಂದ ದೇವಸ್ಥಾನಗಳ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಲಿದೆ ಮತ್ತು ಯುವಕರಿಗೆ ಉದ್ಯೋಗದ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ತಿಳಿಸಿದ್ದಾರೆ.
೨. ಉಜ್ಜಯಿನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿರುವುದರಿಂದ ಇದೇ ಸ್ಥಳದಿಂದ ಈ ಪಠ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪ್ರಕಾರ, ಇದುವರೆಗೆ ದೇವಸ್ಥಾನಗಳ ನಿರ್ವಹಣೆಯು ಸಾಂಪ್ರದಾಯಿಕ ರೀತಿಯಲ್ಲಿ ನಡೆಯುತ್ತಿತ್ತು; ಆದರೆ ಈಗ ವೈಜ್ಞಾನಿಕ ಮತ್ತು ವೃತ್ತಿಪರ ರೀತಿಯಲ್ಲಿ ದೇವಸ್ಥಾನ ನಿರ್ವಹಣೆಯನ್ನು ಕಲಿಸಲಾಗುವುದು.
೩. ಜುಲೈನಿಂದ ಆರಂಭವಾಗಲಿರುವ ಈ ಪಠ್ಯಕ್ರಮಕ್ಕಾಗಿ ಅರ್ಜಿಗಳನ್ನು ಸ್ವೀಕರಿಸುವುದು ಪ್ರಾರಂಭವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅರ್ಪಣ್ ಭಾರದ್ವಾಜ್ ತಿಳಿಸಿದ್ದಾರೆ.
೪. ಮಧ್ಯಪ್ರದೇಶದಲ್ಲಿ ‘ಎಂ.ಬಿ.ಎ. ಟೆಂಪಲ್ ಮ್ಯಾನೇಜ್‌ಮೆಂಟ್’ ಪಠ್ಯಕ್ರಮವನ್ನು ಪ್ರಾರಂಭಿಸುವ ಮೊದಲ ವಿಶ್ವವಿದ್ಯಾಲಯ ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯವಾಗಲಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ