ಆಸ್ತಿಯ ಮೂಲಗಳ ಬಗ್ಗೆ ತನಿಖೆಗೆ ಒತ್ತಾಯ

ಕಾಠ್ಮಂಡು (ನೇಪಾಳ) – ನೇಪಾಳದ ನೂತನ ಪ್ರಧಾನ ಮಂತ್ರಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ನೇಪಾಳದ ಕಾನೂನಿನ ಪ್ರಕಾರ, ಮಂತ್ರಿ ಪದವಿ ಸ್ವೀಕರಿಸಿದ 60 ದಿನಗಳ ಒಳಗಾಗಿ ಆಸ್ತಿ ಘೋಷಿಸುವುದು ಕಡ್ಡಾಯವಾಗಿದೆ. ಪ್ರಧಾನ ಮಂತ್ರಿ ಬಾಲೆನ್ ಶಾಹ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ 1 ಕೋಟಿ 46 ಲಕ್ಷ ರೂಪಾಯಿ ನಗದು ಮತ್ತು 190 ತೊಲ ಚಿನ್ನ ಇರುವುದಾಗಿ ಘೋಷಿಸಿದ್ದಾರೆ. ಈ ಹಣವನ್ನು ತಾವು ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೂಲಕ ಗಳಿಸಿದ್ದಾಗಿ ಹಾಗೂ ಉಳಿದ ಆಸ್ತಿಯು ಪೂರ್ವಜರಿಂದ ಬಂದಿದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರ ಜೊತೆಗೆ ಸಚಿವ ಸಂಪುಟದ ಇತರೆ ಸಚಿವರೂ ಸಹ ಭಾರಿ ಶ್ರೀಮಂತರಾಗಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ನೇಪಾಳದಲ್ಲಿ ಅವರ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.
ಭ್ರಷ್ಟಾಚಾರದ ವಿರುದ್ಧ ನಡೆದ ಜನತಾ ಆಂದೋಲನದ ನಂತರ ಬಾಲೆನ್ ಶಾಹ ಅಧಿಕಾರಕ್ಕೆ ಬಂದಿದ್ದರು. ಆದರೆ ಈಗ ಬಹಿರಂಗವಾಗಿರುವ ಅಪಾರ ಆಸ್ತಿಯಿಂದಾಗಿ ಜನರಲ್ಲಿ ಗೊಂದಲ ನಿರ್ಮಾಣವಾಗಿದೆ. ಏಪ್ರಿಲ್ 13 ರಂದು ಕಾಠ್ಮಂಡುವಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಈ ಆಸ್ತಿಯ ಮೂಲಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ‘ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?’ ಎಂಬ ಪ್ರಶ್ನೆಯನ್ನು ಈಗ ಸಾಮಾನ್ಯ ನೇಪಾಳಿ ನಾಗರಿಕರು ಕೇಳುತ್ತಿದ್ದಾರೆ. ರಾಜಕೀಯ ತಜ್ಞರ ಅಭಿಪ್ರಾಯದಂತೆ, ಆಸ್ತಿ ಘೋಷಿಸುವುದು ಪಾರದರ್ಶಕತೆಯ ಒಂದು ಭಾಗವಾಗಿದ್ದರೂ ಸಹ, ಆದಾಯದ ಬಗ್ಗೆ ಸ್ಪಷ್ಟ ಪುರಾವೆಗಳನ್ನು ನೀಡದ ಹೊರತು ಬಾಲೆನ್ ಶಾಹ ಅವರಿಗೆ ಈ ವಿವಾದದಿಂದ ಹೊರಬರುವುದು ಕಷ್ಟವಾಗಲಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation