‘ಇನ್‌ಸ್ಟಾಗ್ರಾಮ್’ನಲ್ಲಿ ‘ಹಿಂದೂ’ ಹೆಸರಿನ ನಕಲಿ ಖಾತೆಯ ಮೂಲಕ ಹಿಂದೂ ಮಹಿಳೆಯ ಲೈಂಗಿಕ ಶೋಷಣೆ; ಮುಸ್ಲಿಂ ವ್ಯಕ್ತಿಯ ಬಂಧನ!

ಪಾಲ್ಘರ್‌ನಲ್ಲಿ 'ಲವ್ ಜಿಹಾದ್'

ಮುಂಬಯಿ – ‘ಅಜಯ್ ಮ್ಹಾಸ್ಕೆ’ ಎಂಬ ನಕಲಿ ಹೆಸರನ್ನು ಬಳಸಿ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದು, ರಾಜು ಸಿಕಂದರ್ ಶೇಖ್ ಎಂಬ ಮುಸ್ಲಿಂ ವ್ಯಕ್ತಿಯು 32 ವರ್ಷದ ಹಿಂದೂ ಮಹಿಳೆಯ ಲೈಂಗಿಕ ಶೋಷಣೆ ನಡೆಸಿದ್ದಾನೆ. ಪೊಲೀಸರು ಶೇಖ್‌ನನ್ನು ಪುಣೆಯಿಂದ ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಪಾಲ್ಘರ್ ಜಿಲ್ಲೆಯವರಾಗಿದ್ದು, ಅಲ್ಲಿನ ಕೇಳವೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಶೇಖ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಈತನನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

1. ರಾಜು ಸಿಕಂದರ್ ಶೇಖ್ ಮೂಲತಃ ಬೀಡ್ ಪ್ರದೇಶದ ನಿವಾಸಿಯಾಗಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಹೆಸರಿನ ನಕಲಿ ಖಾತೆಯನ್ನು ಸೃಷ್ಟಿಸಿ ಆತ ಸಂತ್ರಸ್ತ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದನು. 2025ರಲ್ಲಿ ಪಾಲ್ಘರ್‌ಗೆ ಬಂದು ಆಕೆಯೊಂದಿಗೆ ದೇವಸ್ಥಾನಕ್ಕೆ ಹೋಗಿ, ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯ ನಾಟಕವಾಡಿದ್ದನು.

2. ಈತ ಮಹಿಳೆಯೊಂದಿಗೆ 6 ತಿಂಗಳುಗಳ ಕಾಲ ದೈಹಿಕ ಸಂಬಂಧ ಹೊಂದಿದ್ದನು. 2026ರಲ್ಲಿ ವಿವಾಹವಾಗುವ ಭರವಸೆ ನೀಡಿ ಅಹಿಲ್ಯಾನಗರಕ್ಕೆ ತೆರಳಿದ್ದನು. ಆನಂತರ, ಈತನಿಗೆ ಮೊದಲೇ ಮದುವೆಯಾಗಿರುವ ವಿಷಯ ಸಂತ್ರಸ್ತ ಮಹಿಳೆಗೆ ತಿಳಿಯಿತು.

3. ಈ ವಿಷಯ ತಿಳಿದ ಮೇಲೆ ಸಂತ್ರಸ್ತ ಮಹಿಳೆಯು ಶೇಖ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆಗ ಶೇಖ್‌ನ ಮುಸ್ಲಿಂ ಪತ್ನಿಯು ಸಂತ್ರಸ್ತ ಹಿಂದೂ ಮಹಿಳೆಯ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಆಕೆಯಿಂದ ಎರಡು ಲಕ್ಷ ರೂಪಾಯಿ ಹಣ ಬೇಡಿಕೆಯಿಟ್ಟಿದ್ದಾಳೆ.

4. ತನಗೆ ವಂಚನೆಯಾಗಿರುವ ವಿಷಯ ಅರಿವಿಗೆ ಬಂದ ತಕ್ಷಣ ಸಂತ್ರಸ್ತ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

5. ಈ ಬಗ್ಗೆ ಪಾಲ್ಘರ್ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕ ವಿಕಾಸ್ ನಾಯ್ಕ್ ಮಾತನಾಡಿ, “ಪೊಲೀಸರು ಬಲೆ ಬೀಸಿ ರಾಜು ಸಿಕಂದರ್ ಶೇಖ್‌ನನ್ನು ಬಂಧಿಸಿದ್ದಾರೆ. ಈ ಘಟನೆಯ ತನಿಖೆಯು ಪ್ರಾಥಮಿಕ ಹಂತದಲ್ಲಿದೆ. ಇದರಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಯುವತಿಯರೇ-ಮಹಿಳೆಯರೇ, ಸಾಮಾಜಿಕ ಮಾಧ್ಯಮಗಳಲ್ಲಿ ಸ್ನೇಹ ಬೆಳೆಸುವ ಮುನ್ನ ಎಚ್ಚರ!