ರಾಷ್ಟ್ರೀಯ ವಾರಕರಿ ಪರಿಷತ್ತಿನ ಅಧ್ಯಕ್ಷರಾದ ಹ.ಭ.ಪ. ಮಾರುತಿ ಮಹಾರಾಜ್ ತುಂತುನೆ-ಶಾಸ್ತ್ರಿ ಅವರ ಹೇಳಿಕೆ

ಪಂಢರಪುರ – ಶರದ್ ಪವಾರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀ ವಿಠ್ಠಲನ ಸರಕಾರಿ ಪೂಜೆ ಮಾಡಿರಲಿಲ್ಲ. ಆಗ ಪತ್ರಕರ್ತರು, “ನಿಮಗೆ ವಿಠ್ಠಲನ ಪೂಜೆ ಮಾಡುವ ಇಚ್ಛೆ ಇರಲಿಲ್ಲವೆಂದ ಮೇಲೆ ನೀವು ಪಂಢರಪುರಕ್ಕೆ ಏಕೆ ಬಂದಿದ್ದೀರಿ?” ಎಂದು ಪವಾರ್ ಅವರನ್ನು ಪ್ರಶ್ನಿಸಿದಾಗ, ನಾಸ್ತಿಕವಾದಿ ಶರದ್ ಪವಾರ್ ಅವರು “ನಾನು ಕಾರ್ಯಕರ್ತರನ್ನು ಭೇಟಿ ಮಾಡಲು ಬಂದಿದ್ದೇನೆ” ಎಂದು ಉತ್ತರಿಸಿದ್ದರು. ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ವಿಠ್ಠಲನ ಪೂಜೆಯನ್ನು ನಿರಾಕರಿಸುವ ಮೂಲಕ ಅವರು ಶ್ರೀ ವಿಠ್ಠಲ ಮತ್ತು ವಾರಕರಿಗಳಿಗೆ ಅವಮಾನ ಮಾಡಿದ್ದಾರೆ. ಇಂತಹ ನಾಸ್ತಿಕವಾದಿ ಶರದ್ ಪವಾರ್ ಅವರು ವಾರಕರಿ ಸಂಪ್ರದಾಯದ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ‘ರಾಷ್ಟ್ರೀಯ ವಾರಕರಿ ಪರಿಷತ್’ ಅಧ್ಯಕ್ಷ ಹ.ಭ.ಪ. ಮಾರುತಿ ಮಹಾರಾಜ್ ತುಂತುನೆ-ಶಾಸ್ತ್ರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
೧. ಪುಣೆಯಲ್ಲಿ ನಡೆದ ನಾಸ್ತಿಕವಾದಿ ಸಮಾವೇಶದಲ್ಲಿ ಡಾ. ಮುಗ್ಧಾ ಕರ್ಣಿಕ್ ಅವರು ‘ವಾರಕರಿ ಮತ್ತು ವಿಠ್ಠಲ ಕಾಲಬಾಹಿರವಾಗಿದೆ’ ಎಂದು ಅಸಂಬದ್ಧವಾಗಿ ಮಾತನಾಡಿದಾಗ, ಪವಾರ್ ಅವರು ಮೌನವಾಗಿದ್ದು ಏಕೆ? ಛಗನ್ ಭುಜಬಲ್ ಅವರು ಹಿಂದೂ ಹೃದಯ ಸಾಮ್ರಾಟ್ ಶಿವಸೇನಾ ಪ್ರಮುಖ ಬಾಳಾಸಾಹೇಬ್ ಠಾಕ್ರೆ ಅವರ ಸಂಪರ್ಕದಲ್ಲಿದ್ದಾಗ ಹಿಂದೂತ್ವನಿಷ್ಠರಾಗಿದ್ದರು; ಆದರೆ ಪವಾರ್ ಅವರ ಜೊತೆ ಸೇರಿದ ಮೇಲೆ ಅವರು ‘ಶಾಲೆಯಿಂದ ಶ್ರೀ ಸರಸ್ವತಿ ದೇವಿಯ ಫೋಟೋಗಳನ್ನು ತೆಗೆಯಿರಿ’ ಎಂಬಂತಹ ಹಿಂದೂ ಧರ್ಮ ವಿರೋಧಿ ಹೇಳಿಕೆಗಳನ್ನು ನೀಡಲಾರಂಭಿಸಿದರು.
೨. ವಾರಕರಿ ಸಂಪ್ರದಾಯದ ವೇದಾಂತಾಚಾರ್ಯ ವೈಕುಂಠವಾಸಿ ಗುರುವರ್ಯ ನಿವೃತ್ತಿ ಮಹಾರಾಜ್ ವಕ್ತೆ ಬಾಬಾ ಅವರು ಯಾವಾಗಲೂ, “ವಾರಕರಿಯು ಮೊದಲು ಹಿಂದೂ, ನಂತರ ಅವನು ವಾರಕರಿ” ಎಂದು ಹೇಳುತ್ತಿದ್ದರು.
೩. ಸಾವಿರಾರು ವರ್ಷಗಳಿಂದ ಹಿಂದೂಗಳ ಮೇಲೆ ಅನೇಕರು ದಾಳಿ ಮಾಡಿದರು. ಡಚ್ಚರು, ಪೋರ್ಚುಗೀಸರು, ಇಂಗ್ಲಿಷರು, ಮುಸ್ಲಿಮರು, ನಾಸ್ತಿಕವಾದಿಗಳು ಹೀಗೆ ಎಲ್ಲರನ್ನೂ ಎದುರಿಸಿ ಧರ್ಮವನ್ನು ಉಳಿಸುವ ಕಾರ್ಯವನ್ನು ವಾರಕರಿ ಸಂಪ್ರದಾಯದ ಸಂತರು ಮಾಡಿದರು. ವಿವಿಧ ಜಾತಿಗಳಲ್ಲಿ ಜನಿಸಿದ ವಾರಕರಿ ಸಂತರು ಹಿಂದೂ ಧರ್ಮದ ಮಹತ್ವ ಹೆಚ್ಚಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ.
೪. ಪವಾರ್ ಅವರು ತಮ್ಮ ಅಧಿಕಾರ ಅವಧಿಯಲ್ಲಿ ವಾರಕರಿ ಸಂಪ್ರದಾಯದೊಳಗೆ ‘ಪುರೋಗಾಮಿ’ (ಪ್ರಗತಿಪರ) ವಾರಕರಿಗಳನ್ನು ಸೇರಿಸುವ ಪಿತೂರಿಯನ್ನು ಬಹಳಷ್ಟು ಮಾಡಿದ್ದರು; ಆದರೆ ವೈಕುಂಠವಾಸಿ ಗುರುವರ್ಯ ನಿವೃತ್ತಿ ಮಹಾರಾಜ್ ವಕ್ತೆ ಬಾಬಾ ಮತ್ತು ವಾರಕರಿಗಳು ಪವಾರ್ ಅವರ ಈ ಕುತಂತ್ರವನ್ನು ವಿಫಲಗೊಳಿಸಿದರು. ಪವಾರ್ ಸಾಹೇಬರೇ, ನಾವು ನಿಮ್ಮನ್ನು ಬಹಿರಂಗವಾಗಿ ನಿಷೇಧಿಸುತ್ತೇವೆ ಮತ್ತು ಎಚ್ಚರಿಸುತ್ತಿದ್ದೇವೆ, ವಾರಕರಿಗಳ ಬಗ್ಗೆ ಮಾತನಾಡುವ ಹಕ್ಕನ್ನು ನೀವು ಎಂದೋ ಕಳೆದುಕೊಂಡಿದ್ದೀರಿ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ