
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ರಂಗಪುರದ ದಾಸಪಾಡಾ ಮಾರುಕಟ್ಟೆ ಪ್ರದೇಶದಲ್ಲಿ ಏಪ್ರಿಲ್ 11 ರಂದು ರಕೀಬ್ ಹಸನ್ ಎಂಬ ಯುವಕನ ಕೊಲೆಯಾದ ನಂತರ, ಮುಸ್ಲಿಂ ಗುಂಪೊಂದು ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ದಾರಿ ತಪ್ಪಿಸುವ ಉದ್ದೇಶದಿಂದ ಈ ಕೃತ್ಯವನ್ನು ಮೂರನೇ ವ್ಯಕ್ತಿಗಳು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಕೀಬ್ ಹಸನ್ ಅವರ ತಾಯಿ ಸ್ಪಷ್ಟಪಡಿಸಿರುವಂತೆ, ಈ ಕೊಲೆಗೂ ಹಿಂದೂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಮಾದಕ ವಸ್ತುಗಳ ಸಾಗಾಟಗಾರ ಮೊಹಮ್ಮದ್ ಮೊಮಿನ್ ಎಂಬಾತ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರಕೀಬ್ನನ್ನು ಹತ್ಯೆ ಮಾಡಿದ್ದನು.
ಇಸ್ಲಾಂಅನ್ನು ಅವಮಾನಿಸಿದ ಆರೋಪ: ಮೌಲ್ವಿ ಹತ್ಯೆ, ಹಿಂದೂಗಳ ಮನೆಗಳ ಮೇಲೂ ದಾಳಿ
ಕುಷ್ಟಿಯಾದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ, ಮುಸ್ಲಿಂ ಗುಂಪೊಂದು ಶಾಲಾ ಶಿಕ್ಷಕ ಮೌಲ್ವಿ ಶಮೀಮ್ ರಜಾ ಜಹಾಂಗೀರ್ ಅವರನ್ನು ಹತ್ಯೆ ಮಾಡಿದೆ. ದಾಳಿಕೋರರು ಅವರ ದರ್ಬಾರ್ಗೆ ಬೆಂಕಿ ಹಚ್ಚಿದ್ದಲ್ಲದೆ, ಅವರ ಏಳು ಅನುಯಾಯಿಗಳನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಇಲ್ಲಿಯೂ ಸಹ ಕೆಲವು ಹಿಂದೂಗಳ ಮನೆಗಳನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ.
ಈ ವರ್ಷದ ಮೊದಲ 3 ತಿಂಗಳಲ್ಲಿ ಅಲ್ಪಸಂಖ್ಯಾತರ ಮೇಲೆ 133 ದಾಳಿಗಳು
ಬಾಂಗ್ಲಾದೇಶದ *’ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಮಂಡಳಿ’*ಯ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೊದಲ 3 ತಿಂಗಳಲ್ಲೇ 133 ಧಾರ್ಮಿಕ ಹಿಂಸಾಚಾರದ ಘಟನೆಗಳು ದಾಖಲಾಗಿವೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಾಧಿತ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯಪಡೆಯನ್ನು (Rapid Action Battalion) ನಿಯೋಜಿಸಲಾಗಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid