ಹಿಂದೂ ಯುವತಿಯ ಲೈಂಗಿಕ ಶೋಷಣೆ ಮಾಡುತ್ತಿದ್ದ ಮೂವರು ಮುಸಲ್ಮಾನರ ಷಡ್ಯಂತ್ರ ಬಯಲು !

ನಾಶಿಕ: ಐಟಿ ಕ್ಷೇತ್ರದಲ್ಲಿ ‘ಕಾರ್ಪೊರೇಟ್ ಜಿಹಾದ್’ !

ಸಾಂದರ್ಭಿಕ ಚಿತ್ರ

ನಾಶಿಕ – ಐಟಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ನಡೆದ ವೃತ್ತಿಪರ ಜಿಹಾದ್ ಪ್ರಕರಣದ ಪೀಡಿತ ಹಿಂದೂ ಯುವತಿಯೊಬ್ಬಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ೨೦೨೨ ರಲ್ಲಿ ತಾನಿಶ್ ಶೇಖ್ ಎಂಬಾತನು ದೊಡ್ಡ ಸಂಸ್ಥೆಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ತನ್ನ ಬಲೆಗೆ ಸಿಲುಕಿಸಿದ್ದನು. ಮದುವೆಯ ಕನಸು ತೋರಿಸಿ ಅವಳೊಂದಿಗೆ ಸ್ನೇಹ ಬೆಳೆಸಿದ ಅವನು, ಆಗಸ್ಟ್ ೨೦೨೪ ರಲ್ಲಿ ಹೋಟೆಲ್‌ ವೊಂದರಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದನು. ಈ ಷಡ್ಯಂತ್ರದಲ್ಲಿ ತಾನಿಶ್ ಜೊತೆಗೆ ತೌಸಿಫ್ ಅಖ್ತರ್ ಮತ್ತು ನಿದಾ ಖಾನ್ ಎಂಬುವವರೂ ಭಾಗಿಯಾಗಿದ್ದರು. ‘ನಿನ್ನ ಧರ್ಮ ತಪ್ಪು’ ಎಂದು ಹೇಳುವ ಮೂಲಕ ಈ ಮೂವರು ಯುವತಿಯ ವಿಚಾರಧಾರೆಯನ್ನು ಬದಲಿಸಲು ಪ್ರಯತ್ನಿಸಿದರು. ತೌಸಿಫ್ ಸಂತ್ರಸ್ತೆಯ ಛಾಯಾಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಆಕೆಯ ಲೈಂಗಿಕ ಶೋಷಣೆ ಮಾಡಿದನು. ಫೆಬ್ರವರಿ ೨೦೨೬ ರಲ್ಲಿ ತಾನಿಶ್ ವಿವಾಹಿತನಾಗಿದ್ದು, ಅವನಿಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಸತ್ಯ ಸಂತ್ರಸ್ತೆಗೆ ತಿಳಿಯಿತು.

ಐಟಿ ಕ್ಷೇತ್ರದಲ್ಲಿ ನಿರ್ದಿಷ್ಟ ವಿಚಾರಧಾರೆಯ ಜನರಿಂದಲೇ ಹಿಂದೂಗಳ ಶೋಷಣೆ!

ಐಟಿ ಕ್ಷೇತ್ರದ ದೊಡ್ಡ ಸಂಸ್ಥೆಗಳಲ್ಲಿ ನಿರ್ದಿಷ್ಟ ಸಮುದಾಯದ ಜನರು ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮಾಧ್ಯಮದಿಂದ ಹಿಂದೂ ಯುವಕ-ಯುವತಿಯರ ಶೋಷಣೆ ಮತ್ತು ಮತಾಂತರ ಮಾಡಲಾಗುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ. ಅರ್ಹತೆಯನ್ನು ಬದಿಗೊತ್ತಿ ಕೇವಲ ಪರಿಚಯದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯದ ಜನರನ್ನು ನೇಮಿಸಿಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿದೆ.
ನಾಶಿಕ ‘ಡಿಫೆನ್ಸ್ ಹಬ್’ (ರಕ್ಷಣಾ ಕೇಂದ್ರ) ಆಗಿರುವುದರಿಂದ ಈ ‘ಕಾರ್ಪೊರೇಟ್ ಜಿಹಾದ್’ಗೆ ವಿದೇಶಿ ಹಣದ ನೆರವು ಸಿಗುತ್ತಿರುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಹಸ್ಯವಾಗಿ ದೇಶದ ಪ್ರಮುಖ ನಗರಗಳಲ್ಲಿನ ಸಂಸ್ಥೆಗಳ ದಾಖಲೆಗಳ ಪರಿಶೀಲನೆ ಆರಂಭಿಸಿವೆ.

ಸಂಪಾದಕೀಯ ನಿಲುವು

  • ಇದು ಕೇವಲ ಲೈಂಗಿಕ ಶೋಷಣೆಯ ಅಪರಾಧವಲ್ಲ, ಹಿಂದೂ ಧರ್ಮ ಮತ್ತು ದೇಶದ ಆರ್ಥಿಕತೆಯ ಮೇಲೆ ಮಾಡಲಾದ ಸುನಿಯೋಜಿತ ಆಘಾತವಾಗಿದೆ. ‘ವೃತ್ತಿಪರ ಜಿಹಾದ್’ನ ಮಾಧ್ಯಮದಿಂದ ಐಟಿ ಸಂಸ್ಥೆಗಳಲ್ಲಿ ನುಸುಳುತ್ತಿರುವ ಜಿಹಾದಿಗಳನ್ನು ಮಟ್ಟಹಾಕುವುದು ಅತ್ಯಂತ ಅವಶ್ಯಕವಾಗಿದೆ.
  • ಹಿಂದೂ ಯುವತಿಯರು ಕೂಡ ಇಂತಹ ಜನರಿಂದ ಎಚ್ಚರದಿಂದಿರುವುದು ಈಗಿನ ಕಾಲದ ಅವಶ್ಯಕತೆಯಾಗಿದೆ !