ಡಿಜಿಟಲ್ ವಂಚನೆಗೆ ತಡೆ ಹಾಕಲು ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ದ ಪ್ರಸ್ತಾವನೆಯ ಚಿಂತನೆ
ಮೇ ೮ ರವರೆಗೆ ಸೂಚನೆಗಳನ್ನು ಆಹ್ವಾನಿಸಲಾಗಿದೆ; ನಂತರ ಕ್ರಮ ಕೈಗೊಳ್ಳುವ ಸಾಧ್ಯತೆ !

ಮುಂಬಯಿ – ೧೦,೦೦೦ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಆನ್ ಲೈನ್ ವ್ಯವಹಾರಗಳು ತಕ್ಷಣವೇ ಪೂರ್ಣಗೊಳ್ಳದೆ ೧ ಗಂಟೆಯ ವಿಳಂಬವಾಗಬಹುದು. ಇದರಿಂದ ಗ್ರಾಹಕರಿಗೆ ತಪ್ಪು ವ್ಯವಹಾರಗಳನ್ನು ತಡೆಯಲು ಅಥವಾ ರದ್ದುಗೊಳಿಸಲು ಅವಕಾಶ ಸಿಗಬಹುದು. ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗೆ ತಡೆ ಹಾಕಲು ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಈ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಬಗ್ಗೆ ಚರ್ಚಿಸಿ ಮುಂದಿನ ಕೆಲವು ತಿಂಗಳುಗಳಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು. ಈ ಹೊಸ ನಿಯಮವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು.
೧. ವಂಚನೆ ಮಾಡುವವರು ಅನೇಕ ಬಾರಿ ಮಾನಸಿಕ ಒತ್ತಡ ಹೇರಿ ಅವಸರದಲ್ಲಿ ಹಣ ವರ್ಗಾವಣೆ ಮಾಡಿಸುತ್ತಾರೆ. ಈ ಹೊಸ ಪದ್ಧತಿಯಿಂದ ಬಳಕೆದಾರರಿಗೆ ಹಣ ವರ್ಗಾವಣೆ ಮಾಡುವ ಮುನ್ನ ಯೋಚಿಸಲು ಅಥವಾ ತಪ್ಪು ತಿದ್ದಿಕೊಳ್ಳಲು ಅವಕಾಶ ಸಿಗಲಿದೆ.
೨. ೭೦ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗಾಗಿ ಸುರಕ್ಷತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ೫೦,೦೦೦ ರೂಪಾಯಿಗಳಿಗಿಂತ ಹೆಚ್ಚಿನ ವ್ಯವಹಾರಗಳಿಗಾಗಿ ಒಬ್ಬ ವಿಶ್ವಾಸಾರ್ಹ ವ್ಯಕ್ತಿಯ ಅನುಮತಿ ಅಗತ್ಯವಿರುತ್ತದೆ.
೩. ಯಾವುದೇ ವ್ಯಕ್ತಿಗೆ ಅಥವಾ ವ್ಯಾಪಾರಿಗೆ ಹಣ ಕಳುಹಿಸಿದಾಗ ಮತ್ತು ಅವರು ನಮಗೆ ಪರಿಚಿತರಾಗಿದ್ದರೆ, ಅವರನ್ನು ನಿಮ್ಮ ‘ವೈಟ್ ಲಿಸ್ಟ್’ನಲ್ಲಿ (ಅನುಮತಿ ಇರುವ ಪಟ್ಟಿಯಲ್ಲಿ) ಸೇರಿಸಬಹುದು. ಈ ಪಟ್ಟಿಯಲ್ಲಿರುವ ಜನರಿಗೆ ಹಣ ಕಳುಹಿಸುವಾಗ ೧ ಗಂಟೆಯ ವಿಳಂಬವಾಗುವುದಿಲ್ಲ. ಇದರಿಂದ ನಿಯಮಿತ ವ್ಯವಹಾರಗಳಿಗೆ ತೊಂದರೆಯಾಗುವುದಿಲ್ಲ.
೪. ಬ್ಯಾಂಕ್ ‘ಕಿಲ್ ಸ್ವಿಚ್’ಗೆ ಶಿಫಾರಸು ಮಾಡಿದೆ. ಇದರಲ್ಲಿ ಯಾವುದೇ ಗ್ರಾಹಕನಿಗೆ ತನ್ನ ಖಾತೆ ಹ್ಯಾಕ್ ಆಗಿದೆ ಅಥವಾ ಯಾವುದೇ ತಪ್ಪು ವ್ಯವಹಾರ ನಡೆಯುತ್ತಿದೆ ಎಂದು ಅನಿಸಿದರೆ, ಅವನು ಒಂದು ‘ಕ್ಲಿಕ್’ ಮೂಲಕ ತನ್ನೆಲ್ಲಾ ಡಿಜಿಟಲ್ ಪಾವತಿ ಸೇವೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬಹುದು.
೨೦೨೫ ರಲ್ಲಿ ದೇಶದಲ್ಲಿ ಡಿಜಿಟಲ್ ವಂಚನೆಯಿಂದ ೨೨,೦೦೦ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಾನಿಯಾಗಿತ್ತು. ಬ್ಯಾಂಕ್ ಈ ಬಗ್ಗೆ ಮೇ ೮ ರವರೆಗೆ ಸಾರ್ವಜನಿಕರು ಮತ್ತು ಪಾಲುದಾರರಿಂದ ಸೂಚನೆಗಳನ್ನು ಆಹ್ವಾನಿಸಿದೆ. ಆ ನಂತರ ಮುಂದಿನ ಪ್ರಕ್ರಿಯೆಗಳನ್ನು ಜಾರಿಗೆ ತರಲಾಗುವುದು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ