ಓರ್ವ ಯುವಕನ ಬಂಧನ, ಇನ್ನೊಬ್ಬನಿಗಾಗಿ ಹುಡುಕಾಟ ಮುಂದುವರಿಕೆ !

ವಾರಣಾಸಿಯಲ್ಲಿ ಗಂಗಾ ನದಿಯ ದೋಣಿಯಲ್ಲಿ ಕುಳಿತು ಮದ್ಯಪಾನ ಮಾಡಿದ ಪ್ರಕರಣ

ವಾರಣಾಸಿ (ಉತ್ತರ ಪ್ರದೇಶ) – ವಾರಣಾಸಿಯಲ್ಲಿ ಗಂಗಾ ನದಿಯ ದೋಣಿಯಲ್ಲಿ ಕುಳಿತು ಇಬ್ಬರು ಮದ್ಯಪಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡು ಓರ್ವ ಯುವಕನನ್ನು ಬಂಧಿಸಿದ್ದಾರೆ, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯನ್ನು ಅರ್ಜುನ ರಾಜಭರ ಎಂದು ಗುರುತಿಸಲಾಗಿದ್ದು, ಈತ ದೋಣಿ ಅಲಂಕರಿಸುವ ಕೆಲಸ ಮಾಡುತ್ತಿದ್ದನು. ಸದ್ಯ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. (ಗಂಗಾ ನದಿಯು ಎಲ್ಲರಿಗೂ ಪೂಜನೀಯವಾಗಿದೆ. ಗಂಗಾ ನದಿಯ ಪವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪವಿತ್ರ ನದಿಯ ಪಾತ್ರದಲ್ಲಿ ಮದ್ಯಪಾನ ಮಾಡುವುದು ಗಂಗೆಯ ವಿಡಂಬನೆಯೇ ಆಗಿದೆ. ಗಂಗೆಯ ಪವಿತ್ರತೆಯನ್ನು ಕಾಪಾಡಲು ದೋಷಿಗಳ ಮೇಲೆ ಕಠಿಣ ಶಿಕ್ಷೆಯಾಗುವುದು ಅಪೇಕ್ಷಿತವಾಗಿದೆ ! – ಸಂಪಾದಕರು)

ಈ ಹಿಂದೆಯೂ ಗಂಗಾ ನದಿಯ ದೋಣಿಯಲ್ಲಿ ಇಫ್ತಾರ್ ಪಾರ್ಟಿ ಮಾಡಿದ ಮತ್ತು ಬಿರಿಯಾನಿ ತಿಂದು ಮಾಂಸವನ್ನು ನೀರಿಗೆ ಎಸೆದ ವಿಡಿಯೋ ಪ್ರಸಾರವಾದ ನಂತರ ಅನೇಕರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.

ಸಂಪಾದಕೀಯ ನಿಲುವು

ಗಂಗಾ ನದಿಯು ಎಲ್ಲರಿಗೂ ಪೂಜನೀಯವಾಗಿದೆ. ಗಂಗಾ ನದಿಯ ಪವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪವಿತ್ರ ನದಿಯ ಪಾತ್ರದಲ್ಲಿ ಮದ್ಯಪಾನ ಮಾಡುವುದು ಗಂಗೆಯ ವಿಡಂಬನೆಯೇ ಆಗಿದೆ. ಗಂಗೆಯ ಪವಿತ್ರತೆಯನ್ನು ಕಾಪಾಡಲು ದೋಷಿಗಳ ಮೇಲೆ ಕಠಿಣ ಶಿಕ್ಷೆಯಾಗುವುದು ಅಪೇಕ್ಷಿತವಾಗಿದೆ ! - ಸಂಪಾದಕರು