ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಗ್ರಾಮಸ್ಥರ ಎಚ್ಚರಿಕೆ !

ಖೋಪೋಲಿ: ವೇತಾಳ ಮೂರ್ತಿ ದೇವಸ್ಥಾನ ತೆರವು;

​ಖೋಪೋಲಿ (ರಾಯಗಡ ಜಿಲ್ಲೆ) – ಇಲ್ಲಿನ ಲವ್ಹೇಜ್ ಗ್ರಾಮದ ಸಮೀಪವಿರುವ ವೇತಾಳ ಮೂರ್ತಿ ದೇವಸ್ಥಾನವನ್ನು ಗುತ್ತಿಗೆದಾರನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದನು. ಈ ಪ್ರಕರಣದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಖೋಪೋಲಿ ನಗರಸಭೆಯ ಕಚೇರಿ ಕಡೆಗೆ ಬೃಹತ್ ಮೋರ್ಚಾ ನಡೆಸಿದರು. ‘ಸಂಬಂಧಿತ ಗುತ್ತಿಗೆದಾರನ ಕೆಲಸವನ್ನು ನಿಲ್ಲಿಸಿ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ನಗರಾಧ್ಯಕ್ಷ ಕುಲದೀಪಕ್ ಶೇಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ‘ಆಡಳಿತ ಮಂಡಳಿಯು ಈ ಪ್ರಕರಣದಲ್ಲಿ ತಕ್ಷಣವೇ ನ್ಯಾಯ ಒದಗಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಗ್ರಾಮದ ಸಮೀಪವಿರುವ ಸ್ಟೀಲ್ ಕಾರ್ಖಾನೆಯ ಹೆಚ್ಚುವರಿ ಜಾಗದ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿತ್ತು, ಅದಕ್ಕಾಗಿ ದೇವಸ್ಥಾನ ತೆರವುಗೊಳಿಸಿದ್ದಾನೆ.

​ದೇವಸ್ಥಾನಕ್ಕಾಗಿ ಕನಿಷ್ಠ ಎರಡು ಗುಂಟೆ ಭೂಮಿಯನ್ನು ಒದಗಿಸಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಗುತ್ತಿಗೆದಾರನು ನೈಸರ್ಗಿಕ ನೀರಿನ ಹರಿವಿನ ನಾಲಾ ಮತ್ತು ಕೆರೆಯನ್ನು ಮುಚ್ಚಿ ಹಾಕಿದ್ದಾನೆ ಎಂಬ ಆರೋಪ ಕೂಡ ಗ್ರಾಮಸ್ಥರು ಮಾಡಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.

ಸಂಪಾದಕೀಯ ನಿಲುವು

  • ಅನ್ಯ ಧರ್ಮೀಯರ ಶ್ರದ್ಧಾಕೇಂದ್ರಗಳನ್ನು ತೆರವುಗೊಳಿಸುವ ಇಂತಹ ಘಟನೆಗಳು ಎಂದಿಗೂ ನಡೆಯುವುದಿಲ್ಲ; ಏಕೆಂದರೆ ‘ಹಾಗೇನಾದರೂ ಆದಲ್ಲಿ ಅನ್ಯ ಧರ್ಮೀಯರು ಸಂಘಟಿತರಾಗಿ ಏನು ಮಾಡಬಹುದು?’ ಎಂಬ ಭಯ ಎಲ್ಲರಿಗೂ ಇರುತ್ತದೆ. ಆದರೆ ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರ ಶ್ರದ್ಧಾಕೇಂದ್ರಗಳ ವಿಡಂಬನೆ ಆರಾಮಾಗಿ ನಡೆಯುತ್ತಿದೆ!
  • ವಿಡಂಬನೆಯ ನಂತರ ಹಿಂದೂಗಳು ಜಾಗೃತರಾಗಿರುವುದು, ಒಳ್ಳೆಯ ವಿಷಯವೇ; ಆದರೆ ಇಂತಹ ಘಟನೆಗಳು ಮರುಕಳಿಸಬಾರದು, ಇದಕ್ಕಾಗಿ ಹಿಂದೂಗಳು ಆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವವನ್ನು ನಿರ್ಮಿಸಿಕೊಳ್ಳಬೇಕು!
  • ಮನಬಂದಂತೆ ವರ್ತಿಸಿರುವ ಗುತ್ತಿಗೆದಾರನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು!