ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ವಿಚಿತ್ರ ಶೋಧ !

ಬೆಂಗಳೂರು – ಹಿಂದೆ ರಾ.ಸ್ವ. ಸಂಘದವರು ಬ್ರಿಟಿಷರ ಮಾತು ಕೇಳುತ್ತಿದ್ದರು; ಈಗ ಭಾಜಪದವರು ಅಮೆರಿಕದ ಗುಲಾಮರಾಗಿದ್ದಾರೆ. ಇದು ಹಾಸ್ಯಾಸ್ಪದ, ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಅವರು, ಕಾಂಗ್ರೆಸ್ ಸರಕಾರವಿದ್ದಾಗ ಸುಷ್ಮಾ ಸ್ವರಾಜ್ ಮತ್ತು ಸ್ಮೃತಿ ಇರಾನಿ ಅವರು ಬೆಂಡೆಕಾಯಿ ಮತ್ತು ತೊಂಡೆಕಾಯಿ ಹಾರಗಳನ್ನು ಹಾಕಿಕೊಂಡು ಮ. ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು; ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅವರು ಚರಂಡಿಯಿಂದ ಗ್ಯಾಸ್ ಕಂಡುಹಿಡಿದಿದ್ದಾರೆ. ಆ ಗ್ಯಾಸ್ ಎಲ್ಲಿ ಹೋಯಿತು ?, ಎಂಬುದನ್ನು ನೋಡಬೇಕಾಗಿದೆ. ಭಾಜಪ ಅಧಿಕಾರಕ್ಕೆ ಬಂದ ನಂತರ ಗ್ಯಾಸ್ ಬೆಲೆ ೧ ಸಾವಿರ ರೂಪಾಯಿ ದಾಟಿದೆ, ಹಾಗೂ ಪೆಟ್ರೋಲ್ ೧೦೦ ರೂಪಾಯಿ ಗಡಿ ದಾಟಿದೆ. ಪೆಟ್ರೋಲ್-ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡುವುದರಿಂದ ಜನಸಾಮಾನ್ಯರಿಗೆ ಯಾವುದೇ ಲಾಭವಾಗುತ್ತಿಲ್ಲ, ಬದಲಾಗಿ ಇದರ ಲಾಭ ಅದಾನಿ ಸಂಸ್ಥೆಗಳಿಗೆ ಹೆಚ್ಚು ಆಗುತ್ತಿದೆ.
ಹರಿಪ್ರಸಾದ್ ಮಾತು ಮುಂದುವರೆಸಿ, ನೆಹರು ಅವರು ೧೯೫೭ ರಲ್ಲಿ ವಿದೇಶಾಂಗ ನೀತಿಯನ್ನು ಸಿದ್ಧಪಡಿಸಿದಾಗ, ನಾವು ಯಾರ ಪರವಾಗಿಯೂ ಇರಲಿಲ್ಲ. ಯಾವ ರಾಷ್ಟ್ರ ನಮಗೆ ಲಾಭದಾಯಕವಾಗಿರುತ್ತಿತ್ತೋ, ಅವರೊಂದಿಗೆ ನಾವು ನಿಲ್ಲುತ್ತಿದ್ದೆವು. ಇಂದು ಈ ನೀತಿಯಲ್ಲಿ ಬದಲಾವಣೆಯಾಗಿದೆ. ಹಿಂದೆ ನಾವು ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸಿಕೊಳ್ಳುತ್ತಿದ್ದೆವು; ಆದರೆ ಅಮೆರಿಕ ಹೇಳಿದ ನಂತರ ತೈಲ ಖರೀದಿಯನ್ನು ನಿಲ್ಲಿಸಲಾಯಿತು. ಈಗ ಮತ್ತೆ ಅಮೆರಿಕ ಅನುಮತಿ ನೀಡಿದ ಮೇಲೆ ರಷ್ಯಾದಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಿಂದೆ ರಾ.ಸ್ವ. ಸಂಘದ ಜನರು ಬ್ರಿಟಿಷರ ಮಾತು ಕೇಳುತ್ತಿದ್ದರು, ಈಗ ಭಾಜಪದವರು ಅಮೆರಿಕದ ಗುಲಾಮರಾಗಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!