ಭಾರತೀಯರು ತಕ್ಷಣವೇ ಇರಾನನ್ನು ತೊರೆಯಬೇಕು !

ಯುದ್ಧವಿರಾಮದ ನಂತರ ಭಾರತದ ಸೂಚನೆ

ನವ ದೆಹಲಿ – ಯುದ್ಧವಿರಾಮದ ನಂತರ ಇರಾನಿನ ರಾಜಧಾನಿಯಾದ ತೆಹರಾನನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಏಪ್ರಿಲ್ 8 ರಂದು ‘ಪರಿಸ್ಥಿತಿಯನ್ನು ಪರಿಗಣಿಸಿ ಅಲ್ಲಿನ ಭಾರತೀಯ ನಾಗರಿಕರು ತಕ್ಷಣವೇ ದೇಶವನ್ನು ತೊರೆಯಬೇಕು’ ಎಂದು ಸೂಚನೆ ನೀಡಿದೆ.

ರಾಯಭಾರ ಕಚೇರಿಯು, ಭಾರತೀಯ ನಾಗರಿಕರು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಅವರು ಸೂಚಿಸಿದ ಸುರಕ್ಷಿತ ಮಾರ್ಗಗಳ ಮೂಲಕವೇ ಇರಾನಿನಿಂದ ಹೊರಬರಬೇಕು. ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಅಂತರಾಷ್ಟ್ರೀಯ ಗಡಿಯತ್ತ ಹೋಗಲು ಪ್ರಯತ್ನಿಸಬಾರದು. ಯಾವುದೇ ಗಡಿಯತ್ತ ಹೋಗುವ ಮೊದಲು ರಾಯಭಾರಿ ಕಚೇರಿಯೊಂದಿಗೆ ಸಮನ್ವಯ ಸಾಧಿಸುವುದು ಅವಶ್ಯಕವಾಗಿದೆ. ಇರಾನಿನಲ್ಲಿನ ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಎಲ್ಲಾ ಭಾರತೀಯ ನಾಗರಿಕರು ಸುರಕ್ಷಿತವಾಗಿ ಮಾತೃಭೂಮಿಗೆ ಮರಳಬೇಕು, ಎಂದು ತಿಳಿಸಿದೆ.