ದೆಹಲಿ ವಿಧಾನಸಭೆಯ ಪ್ರವೇಶದ್ವಾರದ ಬಳಿಯಿದ್ದ ತಡೆಗೋಡೆಗಳನ್ನು ಮುರಿದು ಒಳನುಗ್ಗಿದ ಕಾರು !

ವಿಧಾನಸಭಾಧ್ಯಕ್ಷರ ಕಚೇರಿಯ ಹೊರಗೆ ಹೂಗುಚ್ಛವನ್ನಿಟ್ಟು ಕಾರಿನೊಂದಿಗೆ ಪರಾರಿಯಾದ ಚಾಲಕ!

ನವದೆಹಲಿ – ದೆಹಲಿ ವಿಧಾನಸಭೆಯ ಅತಿ ಗಣ್ಯ ವ್ಯಕ್ತಿಗಳ (ವಿಐಪಿ) ಪ್ರವೇಶದ್ವಾರ 2ರ ಬಳಿಯಿದ್ದ ತಡೆಗೋಡೆಗಳನ್ನು (ಬ್ಯಾರಿಕೇಡ್) ಮುರಿದು ಕಾರೊಂದು ಒಳನುಗ್ಗಿದೆ. ವಾಹನದ ಚಾಲಕ ಮುಖವಾಡವನ್ನು ಧರಿಸಿದ್ದನು. ಚಾಲಕ ನೇರವಾಗಿ ವಿಧಾನಸಭಾಧ್ಯಕ್ಷರಾದ ವಿಜೇಂದ್ರ ಗುಪ್ತ ಅವರ ಕಚೇರಿಯತ್ತ ತೆರಳಿ, ಕಚೇರಿಯ ಹೊರಗಿನ ಜಾಗದಲ್ಲಿ ಹೂಗುಚ್ಛವನ್ನಿಟ್ಟು ವಾಹನದೊಂದಿಗೆ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಪೊಲೀಸರು ಈ ವಾಹನ ಮತ್ತು ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಧಾನಸಭೆಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಬೆದರಿಕೆಗಳು ಬಂದಿದ್ದವು.

ಸಂಪಾದಕೀಯ ನಿಲುವು

ದೇಶದ ರಾಜಧಾನಿಯಲ್ಲಿನ ವಿಧಾನಸಭೆಯ ಭದ್ರತೆಯ ವೈಫಲ್ಯವನ್ನು ಬಯಲು ಮಾಡಿದ ಘಟನೆ! ಇದರಿಂದ ‘ದೆಹಲಿ ಜನಪ್ರತಿನಿಧಿಗಳಿಗೇ ಇಷ್ಟು ಅಸುರಕ್ಷಿತವಾಗಿದ್ದರೆ, ಜನಸಾಮಾನ್ಯರಿಗೆ ಇನ್ನೆಷ್ಟು ಸುರಕ್ಷಿತವಾಗಿರಬಹುದು?’, ಎಂಬುದು ಸ್ಪಷ್ಟವಾಗುತ್ತದೆ!