‘ಸ್ವಾತಂತ್ರ್ಯವೀರ ಸಾವರಕರ್ ರಾಷ್ಟ್ರೀಯ ಸ್ಮಾರಕ’ದ ರಾಷ್ಟ್ರಪ್ರೇಮ ಜಾಗೃತಿಯ ಅಭಿನವ ಉಪಕ್ರಮ

ಮುಂಬಯಿ, ಏಪ್ರಿಲ್ ೪ (ಸುದ್ದಿ) – ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯವೀರ ಸಾವರಕರ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳನ್ನು ಬ್ರಿಟಿಷರು ಅಂಡಮಾನ್ ಜೈಲಿನಲ್ಲಿಟ್ಟು ಅವರ ಮೇಲೆ ಅತೀವ ದೌರ್ಜನ್ಯ ಎಸಗಿದರು. ಈ ದೌರ್ಜನ್ಯದ ಒಂದು ಭಾಗವಾಗಿ, ಎತ್ತುಗಳನ್ನು ಕಟ್ಟುವ ಗಾಣಕ್ಕೆ ಕ್ರಾಂತಿಕಾರಿಗಳನ್ನು ಕಟ್ಟಿ, ಅವರಿಂದ ಪ್ರತಿದಿನ ೩೦ ಪೌಂಡ್ ಅಂದರೆ ಸುಮಾರು ೧೪-೧೫ ಕೆಜಿ ಎಣ್ಣೆಯನ್ನು ತೆಗೆಯಲು ಹೇಳಲಾಗುತ್ತಿತ್ತು. ಕ್ರಾಂತಿಕಾರಿಗಳು ಅನುಭವಿಸಿದ ಈ ಕಠೋರ ದೌರ್ಜನ್ಯದ ಅರಿವು ಇಂದಿನ ಪೀಳಿಗೆಗೆ ಆಗಬೇಕೆಂಬ ಉದ್ದೇಶದಿಂದ ‘ಸ್ವಾತಂತ್ರ್ಯವೀರ ಸಾವರಕರ್ ರಾಷ್ಟೀಯ ಸ್ಮಾರಕ’ದ ವತಿಯಿಂದ ಏಪ್ರಿಲ್ ೪ ಮತ್ತು ೫ ರಂದು ಗಾಣ ತಿರುಗಿಸುವ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಏಪ್ರಿಲ್ ೪ ರಂದು ಬೆಳಗ್ಗೆ ೧೧ ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಲಾಯಿತು.
🇮🇳 Awakening Patriotism Through Experience
An impactful initiative by Swatantryaveer Savarkar National Memorial to highlight the brutal atrocities faced by revolutionaries in the Andamans 🌊
Live demonstration of the oil mill (Kolhu)
Participants operated it under harsh… https://t.co/G1HMA4a2Bc pic.twitter.com/JEj47eqL4V
— Sanatan Prabhat (@SanatanPrabhat) April 4, 2026
ಈ ಸಂದರ್ಭದಲ್ಲಿ ‘ಸ್ವಾತಂತ್ರ್ಯವೀರ ಸಾವರಕರ್ ರಾಷ್ಟ್ರೀಯ ಸ್ಮಾರಕ’ದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರಕರ, ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ (ಸೌ.) ಸಿದ್ದ ವಿದ್ಯಾ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ, ಸ್ಮಾರಕದ ಕಾರ್ಯದರ್ಶಿ ಶ್ರೀ. ರಾಜೇಂದ್ರ ವರಾಡಕರ, ಶಿಲ್ಪಿ ಶ್ರೀ. ನೀಲೇಶ ಧೇರೆ ಸೇರಿದಂತೆ ಇತರ ರಾಷ್ಟ್ರಪ್ರೇಮಿ ನಾಗರಿಕರು ಉಪಸ್ಥಿತರಿದ್ದರು. ಈ ವೇಳೆ ರಾಷ್ಟ್ರಪ್ರೇಮಿ ನಾಗರಿಕರು ಕಾಲು ಮತ್ತು ಕೈಗಳಿಗೆ ಬೇಡಿ ಧರಿಸಿ ಗಾಣ ತಿರುಗಿಸಿ ನೋಡಿದರು. ವಿಶೇಷವೆಂದರೆ ಮಕ್ಕಳಿಂದ ಹಿಡಿದು ಅನೇಕ ವೃದ್ಧರು ಕೂಡ ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಉಪಸ್ಥಿತರಿದ್ದು ಗಾಣ ತಿರುಗಿಸಿ ‘ವಂದೇ ಮಾತರಂ’, ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದರು.
ಈ ರೀತಿ ರಾಷ್ಟ್ರಪ್ರೇಮಿ ನಾಗರಿಕರು ಗಾಣ ತಿರುಗಿಸುವ ಅನುಭವ ಪಡೆದರು!
ಅಂಡಮಾನ್ ನಲ್ಲಿರುವ ಗಾಣದ ಮಾದರಿಯಲ್ಲೇ ಸ್ವಾತಂತ್ರ್ಯವೀರ ಸಾವರಕರ್ ಸ್ಮಾರಕದಲ್ಲಿ ಗಾಣವನ್ನು ಸಿದ್ಧಪಡಿಸಲಾಗಿದೆ. ಈ ಗಾಣದಲ್ಲಿ ಒಣ ಕೊಬ್ಬರಿ ಚೂರುಗಳನ್ನು ಹಾಕಿ ಅದನ್ನು ತಿರುಗಿಸಲು ಹೇಳಲಾಯಿತು. ಗಾಣ ತಿರುಗಿಸುವಾಗ ಕ್ರಾಂತಿಕಾರಿಗಳ ಕೈಕಾಲುಗಳಿಗೆ ಬೇಡಿಗಳನ್ನು ಹಾಕಿದಂತೆಯೇ, ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡವರ ಕೈಕಾಲುಗಳಿಗೂ ಬೇಡಿಗಳನ್ನು ಹಾಕಲಾಗಿತ್ತು. ನೋಂದಣಿ ಮಾಡಿಸಿ ಬಂದ ರಾಷ್ಟ್ರಪ್ರೇಮಿಗಳಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರ ನೀಡಲಾಯಿತು.
ಅಧಿಕಾರಕ್ಕಾಗಿ ಕ್ರಾಂತಿಕಾರಿಗಳ ತ್ಯಾಗವನ್ನು ಇರುವೆಗೆ ಹೋಲಿಸಿ, ಗಾಂಧೀಜಿಯವರ ತ್ಯಾಗವನ್ನು ಹಿಮಾಲಯದಂತೆ ಬಿಂಬಿಸಲಾಯಿತು! – ರಣಜಿತ ಸಾವರಕರ, ಕಾರ್ಯಾಧ್ಯಕ್ಷರು
ಗಾಂಧೀಜಿಯವರ ಚರಕ ತಿರುಗಿಸುವುದು ಮತ್ತು ಕ್ರಾಂತಿಕಾರಿಗಳ ಗಾಣ ತಿರುಗಿಸುವುದು ಜನರಿಗೆ ಒಂದೇ ಎನಿಸುತ್ತದೆ. ಅಂಡಮಾನ್ ನಲ್ಲಿ ಕ್ರಾಂತಿಕಾರಿಗಳು ದಿನಕ್ಕೆ ೮ ಗಂಟೆಗಳ ಕಾಲ ಗಾಣ ತಿರುಗಿಸಬೇಕಾಗಿತ್ತು. ಇದರಿಂದ ಅನೇಕರು ಆತ್ಮಹತ್ಯೆ ಮಾಡಿಕೊಂಡರು, ಕೆಲವರಿಗೆ ಹುಚ್ಚು ಹಿಡಿಯಿತು. ಕ್ರಾಂತಿಕಾರಿಗಳ ಮನೋಬಲವನ್ನು ಕುಗ್ಗಿಸಲು ಮತ್ತು ಇದನ್ನು ನೋಡಿ ಯಾರೂ ಕ್ರಾಂತಿಕಾರ್ಯದಲ್ಲಿ ಪಾಲ್ಗೊಳ್ಳಬಾರದು ಎಂಬ ಕಾರಣಕ್ಕೆ ಅವರಿಗೆ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಕ್ರಾಂತಿಕಾರಿಗಳು ಅನುಭವಿಸಿದ ಯಾತನೆಗಳ ಅನುಭವ ಪಡೆದು ‘ಸ್ವಾತಂತ್ರ್ಯ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂಬ ಅರಿವು ಮೂಡಲಿ ಎಂದು ಈ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದೇವೆ. ಜವಾಹರಲಾಲ್ ನೆಹರೂ ಅವರಿಗೆ ಜೈಲಿನಲ್ಲಿ ಪಂಚತಾರಾ ಹೋಟೆಲ್ ನಂತೆ ಸೌಲಭ್ಯವಿತ್ತು. ಅವರಿಗೆ ಮಾವಿನಹಣ್ಣು, ಜೇನುತುಪ್ಪ, ಸಿಗರೇಟ್ ಸಿಗುತ್ತಿತ್ತು. ಅವರಿಗಾಗಿ ಯುರೋಪ್ ನಿಂದ ಅಡುಗೆಯವರನ್ನು ಕರೆಸಲಾಗಿತ್ತು. ಅವರಿಗೆ ಟೆನಿಸ್ ಆಡುವ ವ್ಯವಸ್ಥೆಯೂ ಇತ್ತು. ಇದಕ್ಕೆ ವ್ಯತಿರಿಕ್ತವಾಗಿ ಅಂಡಮಾನ್ ನಲ್ಲಿ ಕಪ್ಪು ನೀರು ಶಿಕ್ಷೆ ಅನುಭವಿಸುತ್ತಿದ್ದ ಕ್ರಾಂತಿಕಾರಿಗಳಿಗೆ ಸೀದು ಹೋದ ರೊಟ್ಟಿ ಮತ್ತು ರುಚಿಯಿಲ್ಲದ ತರಕಾರಿ ನೀಡಲಾಗುತ್ತಿತ್ತು. ಭಾರತದ ಸ್ವಾತಂತ್ರ್ಯದ ನಂತರ ಕ್ರಾಂತಿಕಾರಿಗಳ ಈ ತ್ಯಾಗ ಜನರಿಗೆ ತಿಳಿದರೆ ಅಧಿಕಾರ ಸಿಗುವುದಿಲ್ಲ ಎಂಬ ಕಾರಣಕ್ಕೆ, ಅಧಿಕಾರಕ್ಕಾಗಿ ಕ್ರಾಂತಿಕಾರಿಗಳ ತ್ಯಾಗವನ್ನು ಇರುವೆಗೆ ಹೋಲಿಸಿ, ಗಾಂಧಿಯವರ ತ್ಯಾಗವನ್ನು ಹಿಮಾಲಯದಂತೆ ಬಿಂಬಿಸಲಾಯಿತು. ಅಧಿಕಾರಕ್ಕಾಗಿ ಕ್ರಾಂತಿಕಾರಿಗಳ ತ್ಯಾಗವನ್ನು ಹತ್ತಿಕ್ಕಲಾಯಿತು.
‘ನರೇಟಿವ್’ ಮೂಲಕ ಕ್ರಾಂತಿಕಾರ್ಯಕ್ಕೆ ಎರಡನೇ ಸ್ಥಾನ ನೀಡಲಾಯಿತು! – ನ್ಯಾಯವಾದಿ ಸಿದ್ದ ವಿದ್ಯಾ
ನಾನು ಇಲ್ಲಿ ಗಾಣ ಚಲಾಯಿಸಿದಾಗ ಇಲ್ಲಿ ಫ್ಯಾನ್ ಚಾಲನೆಯಲ್ಲಿತ್ತು, ಭಯದ ವಾತಾವರಣವಿರಲಿಲ್ಲ. ಆದರೆ ಕ್ರಾಂತಿಕಾರಿಗಳು ಗಾಣ ಚಲಾಯಿಸುವಾಗ ಅವರ ಕಾಲುಗಳಿಗೆ ಬೇಡಿ ಹಾಕಲಾಗಿತ್ತು. ಗಾಣದಲ್ಲಿ ಹಾಕಲಾದ ತೆಂಗಿನಕಾಯಿಯನ್ನು ಕ್ರಾಂತಿಕಾರಿಗಳೇ ಕೈಯಿಂದ ಸುಲಿಯಬೇಕಾಗಿತ್ತು. ಇದರಿಂದ ಕ್ರಾಂತಿಕಾರಿಗಳು ರಾಷ್ಟ್ರಕ್ಕಾಗಿ ಎಷ್ಟು ತ್ಯಾಗ ಮಾಡಿದ್ದಾರೆ ಎಂಬ ಅನುಭವವಾಯಿತು. ಆದರೆ ಪ್ರಸ್ತುತ ಕಾಲದಲ್ಲಿ ‘ನರೇಟಿವ್’ (ಕಥಾನಕ) ಸೃಷ್ಟಿಸಿ ಅವರ ಕ್ರಾಂತಿಕಾರ್ಯಕ್ಕೆ ಎರಡನೇ ಸ್ಥಾನ ನೀಡಲಾಗಿದೆ.
ನಮಗೆ ಚರಕ ತೋರಿಸಲಾಗುತ್ತದೆ; ಆದರೆ ಎಣ್ಣೆ ಗಾಣವನ್ನು ತೋರಿಸುವುದಿಲ್ಲ! – ನರೇಂದ್ರ ಸುರ್ವೆ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ನಾನು ಬೇಡಿಗಳನ್ನು ಧರಿಸಿ ಎಣ್ಣೆ ಗಾಣವನ್ನು ಎಳೆಯಲು ಪ್ರಯತ್ನಿಸಿದಾಗ, ನನಗೆ ೩-೪ ನಿಮಿಷಕ್ಕಿಂತ ಹೆಚ್ಚು ಕಾಲ ಅದನ್ನು ಎಳೆಯಲು ಸಾಧ್ಯವಾಗಲಿಲ್ಲ. ಅಂಡಮಾನ್ ನಲ್ಲಿ ಕ್ರಾಂತಿಕಾರಿಗಳು ೮ ಗಂಟೆಗಳ ಕಾಲ ಗಾಣ ಎಳೆಯಬೇಕಾಗಿತ್ತು. ದಿನವಿಡೀ ಅವರು ೧೫ ಕಿಲೋ ಎಣ್ಣೆ ತೆಗೆಯಬೇಕಾಗಿತ್ತು. ನಮಗೆ ಚರಕವನ್ನು ತೋರಿಸಲಾಗುತ್ತದೆ, ಆದರೆ ಎಣ್ಣೆ ಗಾಣವನ್ನು ತೋರಿಸುವುದಿಲ್ಲ. ‘ದೇ ದಿ ಆಜಾದಿ ಬಿನಾ ಖಡ್ಗ ಬಿನಾ ಢಾಲ್’ ಎಂದು ನಮಗೆ ಹೇಳಿಕೊಡಲಾಗಿದೆ. ಈ ಭ್ರಮೆಯಿಂದ ಹೊರಬಂದು ಕ್ರಾಂತಿಕಾರಿಗಳು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಯುವಕರು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಯುವಕರು ‘ಸ್ವಾತಂತ್ರ್ಯವೀರ ಸಾವರಕರ್ ರಾಷ್ಟ್ರೀಯ ಸ್ಮಾರಕ’ಕ್ಕೆ ಬಂದು ಎಣ್ಣೆ ಗಾಣ ಎಳೆದು ನೋಡಬೇಕು, ಎಂದು ಹೇಳಿದರು.
ಕ್ರಾಂತಿಕಾರಿಗಳು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಲು ಸ್ವಾತಂತ್ರ್ಯದ ಮಹತ್ವ ತಿಳಿಯುವುದು ಅಗತ್ಯ! – ಸೌ. ಮಂಜೀರಿ ಮರಾಠೆ, ಕೋಶಾಧ್ಯಕ್ಷರು, ಸ್ವಾತಂತ್ರ್‍ಯವೀರ ಸಾಮರಕರ್ ರಾಷ್ಟ್ರೀಯ ಸ್ಮಾರಕ
ಲಕ್ಷಾಂತರ ಕ್ರಾಂತಿಕಾರಿಗಳು ರಕ್ತ ಹರಿಸಿದ್ದರಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅನೇಕರಿಗೆ ಕ್ರಾಂತಿಕಾರಿಗಳ ತ್ಯಾಗದ ಬಗ್ಗೆ ಮಾಹಿತಿಯಿಲ್ಲ. ಕ್ರಾಂತಿಕಾರಿಗಳು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಲು ಸ್ವಾತಂತ್ರ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಅದಕ್ಕಾಗಿಯೇ ಈ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದೆ.
ರಾಷ್ಟ್ರಕ್ಕಾಗಿ ಅನುಭವಿಸಿದ ಯಾತನೆಗಳ ಕಲ್ಪನೆ ಬರುತ್ತದೆ! – ಶ್ರೀ. ಪ್ರದೀಪ ಕಬ್ರೆ, ಮರಾಠಿ ನಟ ಮತ್ತು ನಿರ್ದೇಶಕ
‘ನಾನು ಸಾವರಕರ್ ಪ್ರೇಮಿ ಎಂದು ಹೇಳಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಸ್ವಾತಂತ್ರ್ಯವೀರ ಸಾವರಕರ ಅವರು ರಾಷ್ಟ್ರಕ್ಕಾಗಿ ಯಾವ ತ್ಯಾಗ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಅಂಡಮಾನ್ ನಲ್ಲಿ ಎಣ್ಣೆ ಗಾಣ ತಿರುಗಿಸುವುದರಿಂದ ಅವರ ಮನಸ್ಸಿನ ದೃಢತೆ ಕಂಡುಬರುತ್ತದೆ. ಇದರಿಂದ ಅವರು ರಾಷ್ಟ್ರಕ್ಕಾಗಿ ಅನುಭವಿಸಿದ ಯಾತನೆಗಳ ಕಲ್ಪನೆ ಬರುತ್ತದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !