ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ವಿಭಜನೆಯ ಸಮಯದಲ್ಲಿ ನಮ್ಮ ಪೂರ್ವಜರಿಂದ ತಪ್ಪು ಆಗಿರದಿದ್ದರೆ, ಎಲ್ಲಾ ಮುಸಲ್ಮಾನರು ಪಾಕಿಸ್ತಾನದಲ್ಲಿರುತ್ತಿದ್ದರು ! – Giriraj Singh
ವಿಭಜನೆಯ ಸಮಯದಲ್ಲಿ ನಮ್ಮ ಪೂರ್ವಜರಿಂದ ತಪ್ಪು ಆಗಿರದಿದ್ದರೆ, ಎಲ್ಲಾ ಮುಸಲ್ಮಾನರು ಪಾಕಿಸ್ತಾನದಲ್ಲಿರುತ್ತಿದ್ದರು ! – Giriraj Singh
ಪೂರ್ಣಿಯಾ (ಬಿಹಾರ) – ವಿಭಜನೆಯ ಸಮಯದಲ್ಲಿ ನಮ್ಮ ಪೂರ್ವಜರಿಂದ ದೊಡ್ಡ ತಪ್ಪಾಗಿದೆ ಮತ್ತು ಅದರ ಬೆಲೆಯನ್ನು ಇಂದು ದೇಶವು ತೆರಬೇಕಾಗಿದೆ. 1947ರ ವಿಭಜನೆಯ ಸಮಯದಲ್ಲಿ ಎಲ್ಲಾ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಿದ್ದರೆ ಮತ್ತು ಹಿಂದೂಗಳನ್ನು ಭಾರತಕ್ಕೆ ಕರೆತರಲಾಗಿದ್ದರೆ, ಇಂದಿನ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಂದು ಅಸಾದುದ್ದೀನ್ ಓವೈಸಿಯಂತಹ ರಾಜಕೀಯ ನಾಯಕರು ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಇಲ್ಲಿ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಪೌರತ್ವ ತಿದ್ದುಪಡಿ ಕಾಯ್ದೆಗೆ (CAA) ಸಂಬಂಧಿಸಿದ ಚರ್ಚೆಯ ಹಿನ್ನೆಲೆಯಲ್ಲಿ ನೀಡಲಾಗಿದೆ. ಈ ಕಾಯ್ದೆಯ ಪರವಾಗಿ ಮಾತನಾಡುವಾಗ, ಸಚಿವ ಸಿಂಗ್ ಅವರು ಭಾರತದಲ್ಲಿ ವಾಸಿಸುವ ಜನರ ಪೌರತ್ವದ ಪ್ರಶ್ನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ವಿಭಜನೆಯ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ.
ಸಂಪಾದಕೀಯ ನಿಲುವು
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸತ್ಯವನ್ನೇ ಹೇಳಿದ್ದಾರೆ. ಭಾರತದ ವಿಭಜನೆಯು ಧರ್ಮದ ಆಧಾರದ ಮೇಲೆ ನಡೆದಿತ್ತು ಮತ್ತು ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಲಾಗಿತ್ತು. ಯಾರು ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿಯೇ ಉಳಿದುಕೊಂಡರೋ, ಅವರಿಂದಾಗಿಯೇ ದೇಶದಲ್ಲಿ ದೊಡ್ಡ ಸಮಸ್ಯೆ ನಿರ್ಮಾಣವಾಗಿದೆ !
ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಿದ್ದರೆ, ‘ಪ್ಲೇಸಸ್ ಆಫ್ ವರ್ಶಿಪ್’ ಕಾಯ್ದೆ, ‘ವಕ್ಫ್ ಬೋರ್ಡ್’ ಕಾಯ್ದೆಗಳು ಜಾರಿಗೆ ಬರುತ್ತಿರಲಿಲ್ಲ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಥೂಕ್ ಜಿಹಾದ್‌ನಂತಹ ಜಿಹಾದ್‌ಗಳು ನಡೆಯುತ್ತಿರಲಿಲ್ಲ. ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿಗಳು ನಡೆಯುತ್ತಿರಲಿಲ್ಲ, ದೇಶದಲ್ಲಿ ಗಲಭೆಗಳು ಆಗುತ್ತಿರಲಿಲ್ಲ, ಹಿಂದೂಗಳ ತೆರಿಗೆಯ ಹಣ ಮುಸಲ್ಮಾನರ ಮೇಲೆ ಪೋಲಾಗುತ್ತಿರಲಿಲ್ಲ. ದಿನಕ್ಕೆ 5 ಬಾರಿ ಮಸೀದಿಗಳಿಂದ ಅಜಾನ್ ಕೇಳಿಸುತ್ತಿರಲಿಲ್ಲ, ಜನಸಂಖ್ಯೆಯ ಹೊರೆ ಹೆಚ್ಚಾಗುತ್ತಿರಲಿಲ್ಲ, ಇಂತಹ ಅನೇಕ ಸಮಸ್ಯೆಗಳು ನಿರ್ಮಾಣವಾಗುತ್ತಿರಲಿಲ್ಲ !