
ಭೋಪಾಲ್ (ಮಧ್ಯಪ್ರದೇಶ) – ದತಿಯಾದ ಕಾಂಗ್ರೆಸ್ಸಿನ ಶಾಸಕ ರಾಜೇಂದ್ರ ಭಾರತಿ ಅವರಿಗೆ ದೆಹಲಿಯ ಸಂಸದ-ಶಾಸಕರ ನ್ಯಾಯಾಲಯವು ೩ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಹಾಗೆಯೆ ಅವರಿಗೆ ೧ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ. ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯನ್ನು ತಪ್ಪು ರೀತಿಯಲ್ಲಿ ಹೆಚ್ಚಿಸಿಕೊಂಡ ಆರೋಪ ಅವರ ಮೇಲಿತ್ತು.
೧. ರಾಜೇಂದ್ರ ಭಾರತಿ ಅವರ ತಾಯಿಯ ಹೆಸರಿನಲ್ಲಿ ೧೦ ಲಕ್ಷ ೫೦ ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ ದತಿಯಾ ಜಿಲ್ಲಾ ಸಹಕಾರಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿತ್ತು. ಈ ಠೇವಣಿಯ ಮೇಲೆ ೧೩.೫೦ ಪ್ರತಿಶತ ಬಡ್ಡಿದರ ಸಿಗುತ್ತಿತ್ತು.
೨. ಈ ಠೇವಣಿಯನ್ನು ೩ ವರ್ಷಗಳಿಂದ ೧೫ ವರ್ಷಗಳವರೆಗೆ ಹೆಚ್ಚಿಸಲಾಗಿತ್ತು. ಈ ಪ್ರಕರಣದಲ್ಲಿ ಬ್ಯಾಂಕ್ ಉದ್ಯೋಗಿ ನರೇಂದ್ರ ಸಿಂಗ್ ದೂರನ್ನು ನೊಂದಾಯಿಸಿದ್ದರು. ಆ ನಂತರ ನಡೆದ ವಿಚಾರಣೆಯಲ್ಲಿ ಸಂಸದ-ಶಾಸಕರ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
೩. ದತಿಯಾದ ಶಾಸಕ ರಾಜೇಂದ್ರ ಭಾರತಿ ಅವರನ್ನು ಕಾಂಗ್ರೆಸ್‌ನ ಪ್ರಭಾವಿ ನಾಯಕ ಎಂದು ಪರಿಗಣಿಸಲಾಗಿದೆ. ಅವರು ಕಳೆದ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾಜಪದ ಹಿರಿಯ ನಾಯಕ ಮತ್ತು ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರನ್ನು ಸೋಲಿಸಿದ್ದರು. ಅವರು ೩ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಸಂಪಾದಕೀಯ ನಿಲುವುಭ್ರಷ್ಟರು, ಲೂಟಿಕೋರರು, ಇತ್ಯಾದಿಗಳಿಂದ ತುಂಬಿರುವ ಕಾಂಗ್ರೆಸ್ ಜನರಿಗೆ ಏನು ಒಳ್ಳೆಯದನ್ನು ಮಾಡಲಿದೆ? ಇಂತಹ ಕಾಂಗ್ರೆಸ್ ಅನ್ನು ಈಗ ನಿಷೇಧಿಸಬೇಕು! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !