ವಿಶ್ವಸಂಸ್ಥೆ, ಹಾಗೂ ಮಾನವ ಹಕ್ಕುಗಳ ಸಂಘಟನೆಗಳಿಂದ ವಿರೋಧ!

ತೆಲ್ ಅವೀವ್ (ಇಸ್ರೇಲ್) – ಇಸ್ರೇಲ್‌ನ ಸಂಸತ್ತು ‘ಕೆನೆಸೆಟ್’ನಲ್ಲಿ ಮಾರ್ಚ್ 30 ರಂದು ಒಂದು ಮಹತ್ವದ ಕಾಯ್ದೆ ಅಂಗೀಕಾರವಾಯಿತು. ಇಸ್ರೇಲಿ ನಾಗರಿಕರ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಯಾವುದೇ ಪ್ಯಾಲೇಸ್ಟಿನಿಯನ್ ವ್ಯಕ್ತಿ ಮಿಲಿಟರಿ ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾದರೆ, ಆತನಿಗೆ ಗಲ್ಲು ಶಿಕ್ಷೆಯೇ ಸಾಮಾನ್ಯ ಶಿಕ್ಷೆಯಾಗಿರಲಿದೆ. ಈ ಮಸೂದೆಯನ್ನು ಮೂರನೇ ಬಾರಿಗೆ ಮಂಡಿಸಲಾಗಿದ್ದು, 62 ವಿರುದ್ಧ 48 ಮತಗಳ ಅಂತರದಿಂದ ಅಂಗೀಕರಿಸಲ್ಪಟ್ಟಿದೆ. ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕೂಡ ಈ ಕಾಯ್ದೆಯ ಪರವಾಗಿ ಮತ ಚಲಾಯಿಸಿದ್ದಾರೆ.
ಕಾಯ್ದೆಯಲ್ಲಿನ ಮಹತ್ವದ ಅಂಶಗಳು ಹೀಗಿವೆ!
1. ದೋಷಿ ಎಂದು ಸಾಬೀತಾದ ವ್ಯಕ್ತಿಗೆ 90 ದಿನಗಳ ಒಳಗೆ ಗಲ್ಲು ಶಿಕ್ಷೆ ವಿಧಿಸಬಹುದು.
2. ಅಪರಾಧದ ಉದ್ದೇಶವು ‘ಇಸ್ರೇಲ್ ದೇಶದ ಅಸ್ತಿತ್ವವನ್ನು ಕೊನೆಗೊಳಿಸುವುದು’ ಎಂದಾಗಿದ್ದಾಗ ಮಾತ್ರ ಗಲ್ಲು ಶಿಕ್ಷೆ ನೀಡಲಾಗುತ್ತದೆ.
3. ಈ ಕಾಯ್ದೆಯು ವಿಶೇಷವಾಗಿ ಇಸ್ರೇಲಿ ನಾಗರಿಕರ ಹತ್ಯೆಯ ಪ್ರಕರಣದಲ್ಲಿ ಮಿಲಿಟರಿ ನ್ಯಾಯಾಲಯಗಳಲ್ಲಿ ದೋಷಿ ಎಂದು ಸಾಬೀತಾಗುವ ಪ್ಯಾಲೇಸ್ಟಿನಿಯನ್ನರಿಗೆ ಅನ್ವಯಿಸುತ್ತದೆ. ಇದು ಪ್ರಮುಖವಾಗಿ ಪ್ಯಾಲೇಸ್ಟಿನಿಯನ್ನರ ಪ್ರಕರಣಗಳು ನಡೆಯುವ ಇಸ್ರೇಲ್‌ನ ಮಿಲಿಟರಿ ನ್ಯಾಯಾಲಯಗಳಿಗಾಗಿ ತಂದ ಕಾಯ್ದೆಯಾಗಿದೆ; ಸಾಮಾನ್ಯ ಇಸ್ರೇಲಿ ನಾಗರಿಕರಿಗೆ ಇದು ಅನ್ವಯಿಸುವುದಿಲ್ಲ.
4. ಈ ಕಾಯ್ದೆಯನ್ನು 30 ದಿನಗಳ ಒಳಗೆ ಜಾರಿಗೆ ತರಲಾಗುವುದು.
ಕಾಯ್ದೆಗೆ ವ್ಯಕ್ತವಾಗುತ್ತಿರುವ ವಿರೋಧ!
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಅವರು ಇಸ್ರೇಲ್‌ನ ಈ ಹೊಸ ಕಾಯ್ದೆಯನ್ನು ವಿರೋಧಿಸಿದ್ದಾರೆ. “ಈ ಕಾಯ್ದೆಯನ್ನು ವಿಶೇಷವಾಗಿ ಪ್ಯಾಲೇಸ್ಟಿನಿಯನ್ ಪ್ರದೇಶಗಳಲ್ಲಿ ಜಾರಿಗೆ ತಂದರೆ ಅದು ಯುದ್ಧಾಪರಾಧವಾಗಬಹುದು. ಇದು ಮನುಷ್ಯನ ಬದುಕುವ ಹಕ್ಕು ಮತ್ತು ನ್ಯಾಯಸಮ್ಮತ ವಿಚಾರಣಾ ಪ್ರಕ್ರಿಯೆಯನ್ನು ಉಲ್ಲಂಘಿಸುತ್ತದೆ,” ಎಂದು ಅವರು ಹೇಳಿದ್ದಾರೆ. ಮಾನವ ಹಕ್ಕುಗಳ ಸಂಘಟನೆಯಾದ ‘ಹ್ಯೂಮನ್ ರೈಟ್ಸ್ ವಾಚ್’ ಈ ಕಾಯ್ದೆಯನ್ನು ‘ಅಪಾರ್ಥೈಡ್’ಗೆ (ದಕ್ಷಿಣ ಆಫ್ರಿಕಾದಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ಸರಕಾರದಿಂದ ನಡೆಯುತ್ತಿದ್ದ ತಾರತಮ್ಯದ ವರ್ಣಭೇದ ನೀತಿ) ಹೋಲಿಸಿದೆ.
ಸಂಪಾದಕೀಯ ನಿಲುವುಇಸ್ರೇಲ್ ಮತ್ತು ಭಾರತ ಜಿಹಾದಿ ಭಯೋತ್ಪಾದನೆಗೆ ಅತಿ ಹೆಚ್ಚು ಬಲಿಯಾಗುತ್ತಿರುವ ರಾಷ್ಟ್ರಗಳಾಗಿವೆ. ಇಸ್ರೇಲ್ ಇಂತಹ ಕಾಯ್ದೆಯನ್ನು ಜಾರಿಗೆ ತರಲು ಸಾಧ್ಯವಾದರೆ, ಭಾರತಕ್ಕೆ ಏಕೆ ಸಾಧ್ಯವಿಲ್ಲ? |
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers