ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಮಹಮ್ಮದ್ ಶಾರಿಕ್ ನಿಂದ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ !

ಬೆಂಗಳೂರು – ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ೨೦೨೨ ರಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಸಮಯದಲ್ಲಿ ಬಂಧಿತ ಆರೋಪಿ ಮಹಮ್ಮದ್ ಶಾರಿಕ್ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಘಟನೆಯಲ್ಲಿ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಮತ್ತು ಹಿಂದೂ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳೇ ಗುರಿಯಾಗಿದ್ದವು ಎಂಬುದು ಸಾಬೀತಾಗಿದೆ.
🚨 Mangaluru Blast Accused Confesses in Court
2022 cooker blast prime suspect Mohammed Shariq has admitted his crime in court.
Yet back then, Congress refused to even label it a terrorist act.
❗Pattern is clear – soft-pedalling jihadi terror for politics.
⚠️ There is no… https://t.co/o6SqH4RKEV pic.twitter.com/C7h8hmNkIZ
— Sanatan Prabhat (@SanatanPrabhat) March 31, 2026
ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ೨೦೨೨ ರಲ್ಲಿ ಅಂದಿನ ಭಾಜಪ ಸರಕಾರವು ಈ ಸ್ಫೋಟವನ್ನು ಉದ್ದೇಶಪೂರ್ವಕವಾಗಿ ಭಯೋತ್ಪಾದನಾ ಘಟನೆಯೆಂದು ಬಿಂಬಿಸಿದೆ ಎಂದು ಆರೋಪಿಸಿದ್ದರು. ಭಾಜಪ ಬಳಿ ತೋರಿಸಿಕೊಳ್ಳಲು ಯಾವುದೇ ಸಾಧನೆ ಇಲ್ಲದ ಕಾರಣ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ದೊಡ್ಡದು ಮಾಡಲಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಈ ಘಟನೆಯು ಮುಂಬಯಿ, ಪುಲವಾಮಾ ಅಥವಾ ಜಮ್ಮು-ಕಾಶ್ಮೀರದ ಘಟನೆಗಳಂತೆ ಭಯೋತ್ಪಾದನಾ ಕೃತ್ಯವೇ? ಎಂದು ಪ್ರಶ್ನಿಸಿದ್ದರು.
ಏನಿದು ಘಟನಾವಳಿ ?
ಶಿವಮೊಗ್ಗದ ಮಹಮ್ಮದ್ ಶಾರಿಕ್ ನವೆಂಬರ್ ೧೯, ೨೦೨೨ ರಂದು ರಿಕ್ಷಾವೊಂದರಲ್ಲಿ ಸುಮಾರು ೩ ಕಿಲೋ ಸ್ಫೋಟಕಗಳನ್ನು ಕುಕ್ಕರ್‍ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದನು. ‘ಟೈಮರ್’ನಲ್ಲಿನ ತಾಂತ್ರಿಕ ದೋಷದಿಂದಾಗಿ ಕುಕ್ಕರ್ ಅವನ ತೊಡೆಯ ಮೇಲೆಯೇ ಸ್ಫೋಟಗೊಂಡಿತು ಮತ್ತು ಅವನು ಗಂಭೀರವಾಗಿ ಗಾಯಗೊಂಡನು. ನಂತರ ಅವನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ರಾಷ್ಟ್ರೀಯ ತನಿಖಾ ದಳ ಅವನನ್ನು ಬಂಧಿಸಿತು. ಶಾರಿಕ್ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿಸಿದ ಶಿವಮೊಗ್ಗ ತಂಡದ ಸದಸ್ಯನಾಗಿದ್ದನು. ಅವನಿಗೆ ಅನೇಕ ಭಯೋತ್ಪಾದನಾ ಘಟನೆಗಳೊಂದಿಗೆ ಸಂಬಂಧವಿತ್ತು. ಸೆಪ್ಟೆಂಬರ್ ೨೦೨೨ ರ ಶಿವಮೊಗ್ಗ ಪ್ರಕರಣದಲ್ಲಿಯೂ ಅವನು ಆರೋಪಿಯಾಗಿದ್ದನು. ಆ ಪ್ರಕರಣದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಲಾಗಿತ್ತು. ಇದಕ್ಕೂ ಮೊದಲು ದೇಶವಿರೋಧಿ ಘೋಷಣೆಗಳನ್ನು ಬರೆದ ಪ್ರಕರಣದಲ್ಲಿಯೂ ಅವನನ್ನು ಬಂಧಿಸಲಾಗಿತ್ತು. (ಇಂತಹ ಭಯೋತ್ಪಾದಕನನ್ನು ಸಾಕುವ ಬದಲು ಅವನಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು ಎಂದು ಜನತೆಗೆ ಎನಿಸುತ್ತದೆ! ಹಾಗೆಯೇ ಅವನ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷದ ಮೇಲೆಯೂ ಭಯೋತ್ಪಾದನೆಗೆ ಬೆಂಬಲ ನೀಡುವ ಕಲಂಗಳನ್ನು ಹಾಕಿ ಅದರ ಮೇಲೆ ನಿಷೇಧ ಹೇರಬೇಕು! – ಸಂಪಾದಕರು)
ಸಂಪಾದಕೀಯ ನಿಲುವುಕಾಂಗ್ರೆಸ್ ಜಿಹಾದಿ ಭಯೋತ್ಪಾದಕರ ಬೆಂಬಲಿಗ ಆಗಿರುವುದರಿಂದಲೇ ಮೊದಲಿನಿಂದಲೂ ಹೀಗೆ ಹೇಳುತ್ತಾ ಬಂದಿದೆ ಮತ್ತು ಹೇಳುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಅದರ ಮೇಲೆ ನಿಷೇಧ ಹೇರುವುದು ಈಗ ಅನಿವಾರ್ಯವಾಗಿದೆ ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ