ಆರೋಪಿ ಶ್ರೀನಿವಾಸ ಲೂಯಿಸ್ ಮಾನಸಿಕವಾಗಿ ಅಸ್ವಸ್ಥನಿರಬಹುದೆಂದು ಪೊಲೀಸರ ಶಂಕೆ

ನವ ದೆಹಲಿ – ದೇಶಾದ್ಯಂತದ ಶಾಲೆಗಳು, ನ್ಯಾಯಾಲಯಗಳು ಮತ್ತು ಸರಕಾರಿ ಕಚೇರಿಗಳನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಕಳೆದ ಕೆಲವು ತಿಂಗಳುಗಳಿಂದ ಬೆದರಿಕೆಗಳು ಬರುತ್ತಿದ್ದವು. ಪೊಲೀಸರ ತನಿಖೆಯ ಕಾರ್ಯಾಚರಣೆಯ ನಂತರ ಈ ಬೆದರಿಕೆಗಳು ಕೇವಲ ವದಂತಿ ಎಂದು ತಿಳಿದುಬರುತ್ತಿತ್ತು. ಈಗ ದೆಹಲಿ ಪೊಲೀಸರು ಈ ಬೆದರಿಕೆಗಳನ್ನು ಹಾಕುತ್ತಿದ್ದ ಆರೋಪಿಯನ್ನು ಕರ್ನಾಟಕದ ಮೈಸೂರಿನಿಂದ ಬಂಧಿಸಿದ್ದಾರೆ. ದೇಶಾದ್ಯಂತ ಸಾವಿರಾರು ಸ್ಥಳಗಳಲ್ಲಿ ಬೆದರಿಕೆ ಹಾಕಿ ದಿಗಿಲು ಹುಟ್ಟಿಸಿದ ಆರೋಪ ಇವನ ಮೇಲಿದ್ದು, ಇವನ ಹೆಸರು ಶ್ರೀನಿವಾಸ ಲೂಯಿಸ್ ಎಂದು ತಿಳಿದುಬಂದಿದೆ.
೧. ಶ್ರೀನಿವಾಸ ಲೂಯಿಸ್ ಮೈಸೂರಿನ ಬೃಂದಾವನ ಲೇಔಟ್, ಸೆಕೆಂಡ್ ಫೇಸ್, ಸಿಕ್ಸ್ತ್ ಕ್ರಾಸ್ ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದನು. ಇವನು ಬೆದರಿಕೆಯ ಇ-ಮೇಲ್ ಗಳನ್ನು ಕಳುಹಿಸುತ್ತಿದ್ದನು. ಪೊಲೀಸರು ಆರೋಪಿ ಶ್ರೀನಿವಾಸನ ಮನೆಯ ಮೇಲೆ ದಾಳಿ ಮಾಡಿದಾಗ ಅವನಿಂದ ಹಲವಾರು ಸಿಮ್ ಕಾರ್ಡ ಗಳು ಮತ್ತು ಒಂದು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.
೨. ಪೊಲೀಸರ ಪ್ರಕಾರ, ಶ್ರೀನಿವಾಸನು ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು. ಇವನು ಅವಿವಾಹಿತನಾಗಿದ್ದು, ಮೈಸೂರಿನ ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಇವನು ಸ್ನಾತಕೋತ್ತರ ಪದವೀಧರನಾಗಿದ್ದರೂ ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ. ಇವನ ತಾಯಿ ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದು, ಅವರ ನಿವೃತ್ತಿ ವೇತನದಿಂದಲೇ ಇವರ ಜೀವನ ನಡೆಯುತ್ತಿದೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ