
ಕಲಬುರಗಿ – ‘ಕುಂಭಕರ್ಣ ಆರು ತಿಂಗಳು ನಿದ್ರಿಸುತ್ತಿದ್ದರೂ ಉಳಿದ ಆರು ತಿಂಗಳು ಎಚ್ಚರವಿರುತ್ತಿದ್ದ. ಆದರೆ ಹಿಂದೂಗಳ ಮೇಲೆ ಸತತ ಆಘಾತಗಳಾಗುತ್ತಿದ್ದರೂ ಅವರು ನಿದ್ರೆಯಲ್ಲೇ ಇದ್ದಾರೆ, ಅವರು ಎಚ್ಚರಗೊಳ್ಳುತ್ತಿಲ್ಲ’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದ ಕಡಗಂಚಿ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀರಾಮ ಸೇನೆಯ ಜಿಲ್ಲಾ ಸಮಿತಿಯ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಶ್ರೀ ಮುತಾಲಿಕ್ ಅವರು ಮಾತು ಮುಂದುವರೆಸಿ,
೧. ಇರಾನ್ ಅಧ್ಯಕ್ಷರ ನಿಧನದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರದ ಮುಸ್ಲಿಮರು ಪ್ರತಿಭಟನೆ ನಡೆಸಿದ್ದು ದೇಶದ್ರೋಹಿ ಕೃತ್ಯವಾಗಿದೆ. ಭಾರತ-ಇರಾನ್ ನಡುವೆ ಯುದ್ಧ ನಡೆದರೆ ಈ ದೇಶದ ಮುಸ್ಲಿಮರು ಯಾರ ಪರ ಇರುತ್ತಾರೆ ಎಂಬುದರ ಸಂಕೇತವನ್ನು ಅವರು ಈಗಲೇ ಬಹಿರಂಗವಾಗಿ ನೀಡಿದ್ದಾರೆ.
೨. ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ, ಶ್ರೀ ಗಣೇಶ ಮೆರವಣಿಗೆಯಂತಹ ಹಿಂದೂಗಳ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆತಗಳು ನಡೆದಿವೆ. ಪಹಲ್ಗಾಮ್ ದಾಳಿಯಲ್ಲಿ ೨೬ ಹಿಂದೂಗಳ ಹತ್ಯೆಯಾಗಿದೆ, ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ ಮೂಲಕ ಗುರಿ ಮಾಡಲಾಗುತ್ತಿದೆ. ಆದರೂ ಹಿಂದೂಗಳು ಇನ್ನೂ ನಿದ್ರೆಯಲ್ಲಿದ್ದಾರೆ.
೩. ಶ್ರೀರಾಮ ಸೇನೆಯು ಕಳೆದ ೨೧ ವರ್ಷಗಳಿಂದ ಹಿಂದೂ ಸಮಾಜವನ್ನು ಸಂಘಟಿಸುವ ಮತ್ತು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.
೪. ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಘಟನೆಯನ್ನು ಉಲ್ಲೇಖಿಸಿ, “ನಿಮ್ಮ ಕ್ಷೇತ್ರದಲ್ಲಿ ಜೂಜು, ಕೊಲೆ, ಸುಲಿಗೆ ಮತ್ತು ದರೋಡೆಗಳು ನಡೆಯುತ್ತಿದ್ದರೂ ನಿಮಗೆ ಕಾಣಿಸುತ್ತಿಲ್ಲ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರೆತ್ತದೆ ಮುತಾಲಿಕ್ ಟೀಕಿಸಿದರು.
೫. ‘ನನ್ನ ಮೇಲೆ ೧೨೧ ಪ್ರಕರಣಗಳು ದಾಖಲಾಗಿವೆ. ಸಾವಿರ ಪ್ರಕರಣಗಳು ದಾಖಲಾದರೂ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಮ್ಮ ಧರ್ಮದ ಶಸ್ತ್ರಪೂಜೆಯ ಸಂಪ್ರದಾಯವು ಅಳಿವಿನ ಅಂಚಿನಲ್ಲಿರುವುದು ದುರದೃಷ್ಟಕರ’ ಎಂದರು.
ಹಿಂದೂ ಯುವಕರು ದೇಶದ ರಕ್ಷಣೆಗಾಗಿ ಸಂಘಟಿತರಾಗಬೇಕು! – ಭಾಗ್ಯ ಗೌಡ
‘ಹಿಂದೂ ಯುವಕರು ದೇಶದ ರಕ್ಷಣೆಗಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವನ್ನು ತಾಯಿ ಮಾಡುತ್ತಾಳೆ. ಆದ್ದರಿಂದ ಧರ್ಮ ರಕ್ಷಣೆಯ ಜವಾಬ್ದಾರಿ ಪುರುಷರಿಗಿಂತ ಹತ್ತು ಪಟ್ಟು ಹೆಚ್ಚು ಮಹಿಳೆಯರ ಮೇಲಿದೆ’ ಎಂದು ಭಾಗ್ಯ ಗೌಡ ತಿಳಿಸಿದರು.
ಶ್ರೀರಾಮ ಸೇನೆಯ ಕಾನೂನು ಸಲಹೆಗಾರ ಮತ್ತು ನ್ಯಾಯವಾದಿ ಶಿವಕುಮಾರ್ ಸಿರಿ ಅವರು ಮಾತನಾಡಿ, “ಹಿಂದೂತ್ವ ಮತ್ತು ಧರ್ಮ ರಕ್ಷಣೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ದಾಖಲಾದರೆ ನಾನು ಉಚಿತವಾಗಿ ಕಾನೂನು ಸೇವೆ ನೀಡುತ್ತೇನೆ” ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಕ್ತಂಪುರದ ಚರಲಿಂಗ ಶಿವಾಚಾರ್ಯರು, ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು, ದತ್ತ ಮಂದಿರದ ದೀಪಕ್ ಘನಾತೆ, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ, ಎಂ ಎಸ್ ಪಾಟೀಲ್ ನರಿಬೋಳ, ಚೆನ್ನಯ್ಯ ವಸ್ತ್ರದ ಜೇರಟಗಿ, ಆನಂದ ದೇಸಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”