ಮಹಾರಾಷ್ಟ್ರ: ಒಂದೇ ವರ್ಷದಲ್ಲಿ ೪೮,೨೭೮ ಮಹಿಳೆಯರು-ಹುಡುಗಿಯರು ನಾಪತ್ತೆ!

೩೮,೫೮೧ ಮಹಿಳೆಯರು ಪತ್ತೆ; ಆದರೆ ಉಳಿದ ಮಹಿಳೆಯರು ಇನ್ನೂ ನಾಪತ್ತೆ

ನಾಗಪುರ – ೨೦೨೪-೨೫ ನೇ ಸಾಲಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ೪೮,೨೭೮ ಮಹಿಳೆಯರು ಮತ್ತು ಹುಡುಗಿಯರು ನಾಪತ್ತೆಯಾಗಿದ್ದು, ೩೮,೫೮೧ ಮಹಿಳೆಯರು ಇಲ್ಲಿಯವರೆಗೆ ಪತ್ತೆಯಾಗಿದ್ದಾರೆ; ಆದರೆ ಉಳಿದ ಮಹಿಳೆಯರ ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಒಂದು ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ರಾಜ್ಯದಲ್ಲಿ ನಾಪತ್ತೆಯಾದ ಮಹಿಳೆಯರು ಮತ್ತು ಹುಡುಗಿಯರ ಮಾಹಿತಿಯನ್ನು ಸಂಗ್ರಹಿಸುವಾಗ ಈ ಅಂಕಿ-ಅಂಶಗಳು ಬೆಳಕಿಗೆ ಬಂದಿವೆ.

ಮಾರ್ಚ್ ೧ ರಿಂದ ೧೯ ರ ಅವಧಿಯಲ್ಲಿ ಜಿಲ್ಲೆಯ ೩೧ ಪೊಲೀಸ್ ಠಾಣೆಗಳಲ್ಲಿನ ಅಪಹರಣ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಯಿತು. ಮಹಿಳೆಯರು ನಾಪತ್ತೆಯಾದ ಬಗ್ಗೆ ೮೪ ದೂರುಗಳು ಬಂದಿದ್ದವು, ಅವುಗಳಲ್ಲಿ ೬೦ ಮಂದಿ ಪತ್ತೆಯಾಗಿದ್ದಾರೆ. ವಿಶೇಷವೆಂದರೆ, ಬಹುತೇಕ ಪೋಷಕರಿಗೆ ತಮ್ಮ ಮಗಳು ಎಲ್ಲಿರಬಹುದು ಎಂಬ ಅಂದಾಜು ಇತ್ತು. ಗ್ರಾಮೀಣ ಭಾಗದ ಕೆಲವು ಪೋಷಕರು ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹಣವನ್ನು ಪಡೆದು ತಮ್ಮ ಮಗಳ ಮದುವೆ ಮಾಡುತ್ತಿರುವುದು ಕೂಡ ತನಿಖೆಯ ವೇಳೆ ಬಹಿರಂಗವಾಗಿದೆ.