ಭಾರತದ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆಯೊಂದಿಗೆ ಹಿಮಪಾತ! – Heavy Rainfall with Possible Hailstorm

ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ!

ನವ ದೆಹಲಿ – ಮುಂದಿನ ಕೆಲವು ದಿನಗಳಲ್ಲಿ ದೇಶದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ವಿವಿಧೆಡೆ ಉಂಟಾಗಿರುವ ಚಂಡಮಾರುತದ ಪರಿಣಾಮವು ವಾಯುವ್ಯ ರಾಜಸ್ಥಾನ, ಉತ್ತರ ಒಡಿಶಾ, ಈಶಾನ್ಯ ಬಾಂಗ್ಲಾದೇಶ, ಈಶಾನ್ಯ ಆಸ್ಸಾಂ, ರಾಯಲಸೀಮಾ, ಕರ್ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಬೀರಲಿದೆ. ಇದರಿಂದ ತಾಪಮಾನದಲ್ಲಿಯೂ ಕೆಲವು ಡಿಗ್ರಿಗಳಷ್ಟು ಕುಸಿತವಾಗಲಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಹವಾಮಾನ ಬದಲಾವಣೆಯಿಂದಾಗಿ ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ವಿದರ್ಭದ ಅನೇಕ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಹಾಗೂ ಆಲಿಕಲ್ಲು ಮಳೆಯಾಗುವ ದಟ್ಟ ಸಾಧ್ಯತೆಯಿದೆ. ಮಾರ್ಚ್ ೩೦ ರ ಮಧ್ಯಾಹ್ನ ಪುಣೆ ನಗರ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಧಾರಾಕಾರ ಮಳೆಯಾಗಿದೆ.

ಉತ್ತರ ಭಾರತ: ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಧಾರಾಕಾರ ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ.

ಈಶಾನ್ಯ ಭಾರತ: ಆಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಮಾರ್ಚ್ ೨೯ ರಿಂದ ಏಪ್ರಿಲ್ ೨ ರ ಅವಧಿಯಲ್ಲಿ ಸಾಧಾರಣ ಮಳೆ, ಗುಡುಗು ಸಹಿತ ಬಿರುಗಾಳಿ ಬೀಸಲಿದೆ.

ದಕ್ಷಿಣ ಭಾರತ: ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಹವಾಮಾನ ಬದಲಾವಣೆಗೆ ಇದೇ ಕಾರಣ!

ಏಪ್ರಿಲ್ ೨ ರಿಂದ ಒಂದು ಹೊಸ ಪಶ್ಚಿಮದ ಮಾರುತಗಳ ವ್ಯವಸ್ಥೆಯು (Western disturbance) ವಾಯುವ್ಯ ಭಾರತದ ಮೇಲೆ ಪರಿಣಾಮ ಬೀರಲಿದೆ. ಈ ಎಲ್ಲಾ ವ್ಯವಸ್ಥೆಗಳ ಪ್ರಭಾವದಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಸತತವಾಗಿ ಮಳೆ, ಗುಡುಗು ಮತ್ತು ಮಿಂಚಿನ ಅಬ್ಬರ ಕಂಡುಬರುವ ಸಾಧ್ಯತೆಯಿದೆ.