
ಬೆಂಗಳೂರು – ಇತಿಹಾಸದಲ್ಲಿ ಆಳವಾಗಿ ಇಳಿದರೆ ನೀವು ಸಿಲುಕಿಕೊಳ್ಳುತ್ತೀರಿ. ಮಸೀದಿ ಕೆಡವಿದಾಗ ಹೇಗೆ ದೇಗುಲಗಳು ಸಿಗುತ್ತವೆಯೋ, ಅದೇ ರೀತಿ ದೇಗುಲಗಳನ್ನು ಕೆಡವಿದರೆ ಸ್ತೂಪಗಳು ಸಿಗುತ್ತವೆ. ಸ್ತೂಪಗಳನ್ನು ಕೆಡವಿದರೆ ಏನು ಸಿಗುತ್ತದೆ ಎಂಬುದು ನನಗೆ ತಿಳಿದಿಲ್ಲ. ೩ ಸಾವಿರದ ೫೦೦ ವರ್ಷಗಳ ಇತಿಹಾಸದ ಆಧಾರದ ಮೇಲೆ ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಲೇಖಕ ನವೀನ ಸೂರಿಂಜೆ ಅವರ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದರು.
೧. ಬೆಂಗಳೂರು ದಕ್ಷಿಣದ ಭಾಜಪ ಸಂಸದ ತೇಜಸ್ವಿ ಸೂರ್ಯ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಟೀಕಿಸಿದ ಖರ್ಗೆ ಅವರು, ಬ್ರಿಟಿಷರ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಸಣ್ಣ ಧ್ವನಿಯನ್ನೂ ಎತ್ತಿರಲಿಲ್ಲ ಎಂದು ಹೇಳಿದರು. (ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಏನೇನು ಮಾಡಿದೆ ಎಂಬುದು ಜನರಿಗೆ ತಿಳಿದಿದೆ! ಕಾಂಗ್ರೆಸ್ ನಿಂದಲೇ ಭಾರತದ ವಿಭಜನೆಯಾಯಿತು ಮತ್ತು ೧೦ ಲಕ್ಷ ಹಿಂದೂಗಳ ಹತ್ಯೆಯಾಯಿತು! – ಸಂಪಾದಕರು) ‘ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ’ ಎಂದು ಭಾಜಪ ಮತ್ತು ಸಂಘದ ಜನರು ವಾದಿಸುತ್ತಾರೆ; ಆದರೆ ಟಿಪ್ಪು ಬ್ರಿಟಿಷರ ವಿರುದ್ಧ ೪ ಯುದ್ಧಗಳನ್ನು ಮಾಡಿದ್ದು ನಿಜವೋ ಸುಳ್ಳೋ? ಬ್ರಿಟಿಷರ ವಿರುದ್ಧ ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರಲ್ಲವೇ? ಎಂದು ಅವರು ಪ್ರಶ್ನಿಸಿದರು. (ಇದು ನಿಜವಾಗಿದ್ದರೂ, ಅದು ತನ್ನ ರಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಇತ್ತೇ ಹೊರತು ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲ! ಟಿಪ್ಪು ಲಕ್ಷಾಂತರ ಹಿಂದೂಗಳ ಹತ್ಯೆ ಮಾಡಿದ ಮತ್ತು ಮತಾಂತರ ಮಾಡಿದ ವಿಷಯ ನಿಜವೋ ಸುಳ್ಳೋ? ಇದನ್ನು ಖರ್ಗೆ ಅವರು ಹೇಳಲಿ! – ಸಂಪಾದಕರು)
೨. ಖರ್ಗೆ ಅವರು ಮಾತನಾಡುತ್ತಾ, ಟಿಪ್ಪು ಸುಲ್ತಾನ್ ಉದ್ಯಾನವನದ ಪಿತಾಮಹ. ಇದರ ಬಗ್ಗೆ ಪುರಾವೆಗಳು ಲಭ್ಯವಿವೆ. ಬೆಂಗಳೂರಿನ ‘ಲಾಲ್ಬಾಗ್’ ಅನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ನಿರ್ಮಿಸಿದ್ದಾರೆ; ಆದರೆ ಆ ಕ್ಷೇತ್ರದ ಸಂಸದರು ಟಿಪ್ಪು ವಿರೋಧಿಯಾಗಿದ್ದಾರೆ; ಹಾಗಾದರೆ ಅವರು ‘ಲಾಲ್ ಬಾಗ್’ ಅನ್ನು ಸುಟ್ಟು ಹಾಕುತ್ತಾರೆಯೇ? ಎಂದು ಕೇಳಿದರು.
೩. ನಾನು ಇಂಗ್ಲೆಂಡ್ ಗೆ ಭೇಟಿ ನೀಡಿದಾಗ ಒಬ್ಬ ಬ್ರಿಟಿಷ್ ಇತಿಹಾಸಕಾರರು ಹೇಳಿದ್ದರು, ಬ್ರಿಟಿಷ್ ಇತಿಹಾಸದ ಪುಸ್ತಕಗಳಲ್ಲಿ ಭಾರತದ ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಿವೆ ಮತ್ತು ಅದರಲ್ಲಿ ಟಿಪ್ಪುವಿನ ಹೆಸರು ಪ್ರಮುಖವಾಗಿದೆ ಎಂದು. (ಬ್ರಿಟಿಷರು ಭಾರತದ ಇತಿಹಾಸವನ್ನು ತಮಗೆ ಬೇಕಾದಂತೆ ಬರೆದಿರುವುದರಿಂದ, ಅದು ಖರ್ಗೆ ಬಯಸಿದಂತೆಯೇ ಇರುತ್ತದೆ! – ಸಂಪಾದಕರು)
ಸಂಪಾದಕೀಯ ನಿಲುವು
|
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !