ಪ್ರಧಾನಮಂತ್ರಿ ಮೋದಿ ಅವರ ‘ಮನ್ ಕಿ ಬಾತ್’ ಮೂಲಕ ಭಾರತೀಯರಿಗೆ ಕರೆ

ನವದೆಹಲಿ – ವಿಶ್ವದಲ್ಲಿ ಯುದ್ಧ ನಡೆಯುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಿಕ್ಕಟ್ಟು ಎದುರಾಗಿದೆ; ಆದರೆ ಭಾರತವು ಈ ಸವಾಲನ್ನು ಸಮರ್ಥವಾಗಿ ಎದುರಿಸುತ್ತಿದೆ. ಯಾವುದೇ ವದಂತಿಗಳನ್ನು ನಂಬಬೇಡಿ, ಬದಲಾಗಿ ಸರಕಾರದಿಂದ ಸಿಗುವ ಮಾಹಿತಿಯನ್ನಷ್ಟೇ ನಂಬಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಕಾಶವಾಣಿಯ ತಮ್ಮ ಮಾಸಿಕ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾರ್ಚ್ 29 ರಂದು ಕರೆ ನೀಡಿದರು. ಕೆಲವರು ವಾತಾವರಣವನ್ನು ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಮೂಲಕ ಅವರು ದೇಶಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು.
ಪ್ರಧಾನ ಮಂತ್ರಿ ಮೋದಿ ಮಂಡಿಸಿದ ಪ್ರಮುಖ ಅಂಶಗಳು
1. ಪ್ರಸ್ತುತ ಯಾವ ಪ್ರದೇಶದಲ್ಲಿ ಯುದ್ಧ ನಡೆಯುತ್ತಿದೆಯೋ, ಆ ಪ್ರದೇಶವು ನಮ್ಮ ಇಂಧನ ಅಗತ್ಯತೆಗಳ ದೊಡ್ಡ ಕೇಂದ್ರವಾಗಿದೆ. ಇದರಿಂದಾಗಿ ವಿಶ್ವದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಮ್ಮ ಜಾಗತಿಕ ಸಂಬಂಧಗಳು, ವಿವಿಧ ದೇಶಗಳಿಂದ ದೊರೆಯುತ್ತಿರುವ ಸಹಕಾರ ಮತ್ತು ಕಳೆದ ಒಂದು ದಶಕದಲ್ಲಿ ದೇಶವು ಗಳಿಸಿರುವ ಸಾಮರ್ಥ್ಯದಿಂದಾಗಿ, ಭಾರತವು ಈ ಪರಿಸ್ಥಿತಿಯನ್ನು ದೃಢವಾಗಿ ಎದುರಿಸುತ್ತಿದೆ.
2. ದೇಶದ 140 ಕೋಟಿ ಜನರ ಶಕ್ತಿಯಿಂದ ನಾವು ಈ ಹಿಂದಿನ ಸಂಕಷ್ಟಗಳನ್ನು ಹೇಗೆ ಜಯಿಸಿದ್ದೇವೆಯೋ, ಅದೇ ರೀತಿ ಈ ಬಾರಿಯೂ ನಾವೆಲ್ಲರೂ ಸೇರಿ ಈ ಕಠಿಣ ಪರಿಸ್ಥಿತಿಯಿಂದ ಯಶಸ್ವಿಯಾಗಿ ಹೊರಬರುತ್ತೇವೆ ಎಂಬ ವಿಶ್ವಾಸ ನನಗಿದೆ.
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!