
ನವದೆಹಲಿ – ಯುರೋಪಿನಲ್ಲಿ ಅತ್ಯಂತ ವಿಚಿತ್ರವಾದ ಮತ್ತು ದೊಡ್ಡ ಮಟ್ಟದ ಕಳ್ಳತನದ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಸಿದ್ಧ ಬ್ರ್ಯಾಂಡ್ ‘ನೆಸ್ಲೆ’ಯ ‘ಕಿಟ್‌ಕ್ಯಾಟ್’ ಚಾಕೊಲೇಟ್‌ಗಳಿಂದ ತುಂಬಿದ್ದ ಇಡೀ ಟ್ರಕ್ ಅನ್ನೇ ಕದಿಯಲಾಗಿದೆ. ಈ ಟ್ರಕ್‌ನಲ್ಲಿ ಸುಮಾರು 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳಿದ್ದವು.
ಈ ಟ್ರಕ್ ಇಟಲಿಯಿಂದ ಪೋಲೆಂಡ್ ದೇಶಕ್ಕೆ ತೆರಳುತ್ತಿತ್ತು. ಹಾದಿ ಮಧ್ಯೆಯೇ ಅದರಲ್ಲಿದ್ದ ಚಾಕೊಲೇಟ್‌ಗಳು ರಹಸ್ಯವಾಗಿ ಮಾಯವಾಗಿವೆ. ಈ ಟ್ರಕ್ ಹಲವಾರು ದೇಶಗಳಿಗೆ ವಿತರಣೆ ಮಾಡಬೇಕಿತ್ತು; ಆದರೆ ಅದು ನಿಗದಿತ ಸ್ಥಳವನ್ನು ತಲುಪಲೇ ಇಲ್ಲ. ಸದ್ಯಕ್ಕೆ ಟ್ರಕ್ ಮತ್ತು ಚಾಕೊಲೇಟ್ ಎರಡರ ಬಗ್ಗೆಯೂ ಯಾವುದೇ ಸುಳಿವು ಸಿಕ್ಕಿಲ್ಲ.
‘ನೆಸ್ಲೆ’ ಕಂಪನಿಯ ವಕ್ತಾರರು ಮಾತನಾಡಿ, “ಈಸ್ಟರ್ ಹಬ್ಬದ ಸಮಯದಲ್ಲಿ ಯುರೋಪಿನಲ್ಲಿ ಚಾಕೊಲೇಟ್ ಬೇಡಿಕೆ ಹೆಚ್ಚಾಗಿರುತ್ತದೆ. ಈ ಕಳ್ಳತನದಿಂದಾಗಿ ಸರಬರಾಜು ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಕಳುವಾದ ಚಾಕೊಲೇಟ್‌ಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಅಥವಾ ಅನಧಿಕೃತವಾಗಿ ಮಾರಾಟ ಮಾಡುವ ಸಾಧ್ಯತೆಯಿದೆ,” ಎಂದು ತಿಳಿಸಿದ್ದಾರೆ. ಪ್ರತಿ ಚಾಕೊಲೇಟ್ ಬಾರ್ ಮೇಲೆ ಪ್ರತ್ಯೇಕವಾದ ‘ಬ್ಯಾಚ್ ಕೋಡ್’ ಇರುತ್ತದೆ. ಆ ಕೋಡ್ ಸಹಾಯದಿಂದ ಸದರಿ ಉತ್ಪನ್ನವು ಕಳುವಾದ ಮಾಲಿಗೆ ಸೇರಿದ್ದೇ ಅಥವಾ ಅಲ್ಲವೇ ಎಂಬುದನ್ನು ಗುರುತಿಸಬಹುದಾಗಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !