ಅಮೃತಸರದಲ್ಲಿ ೨.೫ ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳ ವಶ

ಅಮೃತಸರ (ಪಂಜಾಬ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಯಾವಾಗಲೂ ಭಾರತೀಯ ಗಡಿಯೊಳಗೆ ಆರ್.ಡಿ.ಎಕ್ಸ್., ಗ್ರೆನೇಡ್, ಪಿಸ್ತೂಲು, ಗುಂಡುಗಳು ಮತ್ತು ಹೆರಾಯಿನ್ ನಂತಹ ದೊಡ್ಡ ದಾಸ್ತಾನುಗಳನ್ನು ಕಳುಹಿಸುತ್ತಲೇ ಇರುತ್ತದೆ. ಇದೀಗ ಪಾಕಿಸ್ತಾನವು ಡ್ರೋನ್ ಮೂಲಕ ಪಂಜಾಬ್ ನಲ್ಲಿ ನಕಲಿ ನೋಟುಗಳನ್ನು ರವಾನಿಸಿರುವುದು ಬೆಳಕಿಗೆ ಬಂದಿದೆ. ಗಡಿ ಭದ್ರತಾ ಪಡೆಯು ಪಂಜಾಬ್ ನ ಘರಿಂದಾ ಎಂಬಲ್ಲಿ ೨.೫ ಲಕ್ಷ ರೂಪಾಯಿ ಮೌಲ್ಯದ ನಕಲಿ ಭಾರತೀಯ ನೋಟುಗಳನ್ನು ವಶಪಡಿಸಿಕೊಂಡಿದೆ. ನವೆಂಬರ್ ೨೦೧೬ ರಲ್ಲಿ ಭಾರತದಲ್ಲಿ ನೋಟು ಅಮಾನ್ಯೀಕರಣ ಜಾರಿಗೆ ಬಂದ ಬಳಿಕ, ಪಾಕಿಸ್ತಾನವು ಭಾರತೀಯ ಗಡಿಯೊಳಗೆ ಇಂತಹ ನಕಲಿ ನೋಟುಗಳನ್ನು ರವಾನಿಸಿರುವುದು ಇದೇ ಮೊದಲು.
ಭಾರತೀಯ ಅರ್ಥವ್ಯವಸ್ಥೆಗೆ ಹಾನಿ ಮಾಡುವ ಉದ್ದೇಶದಿಂದ ಐ.ಎಸ್.ಐ. ಪಾಕಿಸ್ತಾನದ ಗಡಿ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಭಾರತೀಯ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಕಲಿ ನೋಟುಗಳನ್ನು ಭಾರತದಲ್ಲಿ ಅಸಲಿ ನೋಟುಗಳೊಂದಿಗೆ ಚಲಾವಣೆಗೆ ತರುವುದು ಐ.ಎಸ್.ಐ ಸಂಚಾಗಿದೆ. ಈ ಸಂಬಂಧ ಭದ್ರತಾ ಸಂಸ್ಥೆಯು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಕುತಂತ್ರಗಳನ್ನು ಶಾಶ್ವತವಾಗಿ ತಡೆಯಲು ಅದನ್ನು ನಾಶಪಡಿಸುವುದೇ ಅನಿವಾರ್ಯ ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !