೩೮ ಸಾವಿರ ಮೆಟ್ರಿಕ್ ಟನ್ ತೈಲ ಪೂರೈಕೆ!

ನವದೆಹಲಿ – ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿರುವುದರಿಂದ ಇಡೀ ಜಗತ್ತು ಇಂಧನ ಸಂಕಟವನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ, ಭಾರತವು ಬಾಂಗ್ಲಾದೇಶದ ಬೆನ್ನಲ್ಲೇ ಈಗ ಶ್ರೀಲಂಕಾಗೂ ತೈಲವನ್ನು ಪೂರೈಸಿದೆ. ಭಾರತವು ಶ್ರೀಲಂಕಾಗೆ ಒಟ್ಟು ೩೮ ಸಾವಿರ ಮೆಟ್ರಿಕ್ ಟನ್ ತೈಲವನ್ನು ನೀಡಿದ್ದು, ಇದರಲ್ಲಿ ೨೦ ಸಾವಿರ ಮೆಟ್ರಿಕ್ ಟನ್ ಡೀಸೆಲ್ ಮತ್ತು ೧೮ ಸಾವಿರ ಮೆಟ್ರಿಕ್ ಟನ್ ಪೆಟ್ರೋಲ್ ಸೇರಿದೆ. ಭಾರತದ ಈ ಸಹಾಯಕ್ಕಾಗಿ ಶ್ರೀಲಂಕಾ ಕೃತಜ್ಞತೆ ಸಲ್ಲಿಸಿದೆ.
After Bangladesh, India steps up for Sri Lanka with 38k metric tons of oil! ⛽
Generosity is good, but is it time for "reciprocal diplomacy"?
Many argue that aid should ensure the protection of Hindu minorities and heritage abroad.
Meanwhile, China’s silence during the crisis… pic.twitter.com/BGXOOn9bWS
— Sanatan Prabhat (@SanatanPrabhat) March 29, 2026
ಸಂಕಷ್ಟದ ಸಮಯದಲ್ಲಿ ಚೀನಾ ಶ್ರೀಲಂಕಾಗೆ ಯಾವುದೇ ಸಹಾಯ ಮಾಡಲಿಲ್ಲ! – ವಿರೋಧ ಪಕ್ಷದ ನಾಯಕ ಪ್ರೇಮದಾಸಾ
ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸಾರವರು ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. “ನಿಜವಾದ ಸಂಬಂಧದ ಗುರುತು ಸಂಕಷ್ಟದ ಕಾಲದಲ್ಲೇ ಆಗುತ್ತದೆ ಮತ್ತು ಈ ಕಠಿಣ ಸಮಯದಲ್ಲಿ ಭಾರತವು ಶ್ರೀಲಂಕಾವನ್ನುಅ ಬೆಂಬಲಿಸುವ ಮೂಲಕ ಅದನ್ನು ಸಾಬೀತುಪಡಿಸಿದೆ” ಎಂದು ಅವರು ಹೇಳಿದರು. ವಿಶೇಷವೆಂದರೆ, ಇದೇ ವರ್ಷದ ಜನವರಿಯಲ್ಲಿ ಶ್ರೀಲಂಕಾವು ಚೀನಾದ ನಿಯಂತ್ರಣದಲ್ಲಿರುವ ಹಂಬಂತೋಟ ಬಂದರಿನ ಬಳಿ ೨ ಲಕ್ಷ ಬ್ಯಾರೆಲ್ ಸಾಮರ್ಥ್ಯದ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಚೀನಾದ ಸರಕಾರಿ ಇಂಧನ ಸಂಸ್ಥೆ ‘ಸಿನೋಪೆಕ್’ ಜೊತೆಗೆ ೩.೭ ಶತಕೋಟಿ ಡಾಲರ್ (೩೪ ಸಾವಿರದ ೭೮೦ ಕೋಟಿ ರೂಪಾಯಿಗಳ) ಒಪ್ಪಂದ ಮಾಡಿಕೊಂಡಿತ್ತು. ಹೀಗಿದ್ದೂ, ಈ ಸಂಕಷ್ಟದ ಸಮಯದಲ್ಲಿ ಚೀನಾದಿಂದ ಶ್ರೀಲಂಕಾಗೆ ಯಾವುದೇ ಸಹಾಯ ಲಭಿಸಲಿಲ್ಲ. (ಪ್ರೇಮದಾಸಾರವರು ಈಗ ತಮ್ಮ ದೇಶವು ಚೀನಾದಿಂದ ದೂರವಿದ್ದು, ಭಾರತವನ್ನು ‘ದೊಡ್ಡಣ್ಣ’ ಎಂದು ಪರಿಗಣಿಸಿ, ಭಾರತದ ಭದ್ರತೆಗೆ ಯಾವುದೇ ಧಕ್ಕೆ ಬರದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ !- ಸಂಪಾದಕರು)
We thank India for the emergency fuel support, a reminder that relationships are tested in crisis, not comfort. Let us not forget those who stood by us when it mattered. https://t.co/zXWIPwbw0G
— Sajith Premadasa (@sajithpremadasa) March 28, 2026
ಪ್ರೇಮದಾಸಾರವರ ಈ ‘ಎಕ್ಸ್’ (X) ಪೋಸ್ಟ್ ಚೀನಾದ ಮೇಲಿನ ಪರೋಕ್ಷ ಟೀಕೆ ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಇಂತಹ ಉದಾರತೆಯನ್ನು ತೋರಿಸುವುದರಲ್ಲಿ ತಪ್ಪೇನಿಲ್ಲ; ಆದರೆ ಪ್ರತಿಯಾಗಿ ಆ ದೇಶಗಳಲ್ಲಿನ ಹಿಂದೂಗಳು ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಯದಂತೆ ಭಾರತವು ಖಾತರಿಪಡಿಸಿಕೊಳ್ಳಬೇಕು ಎಂಬುದು ಹಿಂದೂಗಳ ಆಶಯವಾಗಿದೆ! |
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ