
ನವ ದೆಹಲಿ – ಭಾರತವನ್ನು ನಕ್ಸಲವಾದದಿಂದ ಮುಕ್ತಗೊಳಿಸುವ ಉದ್ದೇಶದ ಕುರಿತು ಮಾರ್ಚ್ 30 ರಂದು ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಯಲಿದೆ. ಕೇಂದ್ರ ಸರಕಾರವು 31 ಮಾರ್ಚ್ 2026 ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸಲು ಸಮಯ ಮಿತಿಯನ್ನು ನಿಗದಿಪಡಿಸಿದ್ದು, ಈ ಗುರಿಯ ಸಮೀಪಕ್ಕೆ ತಲುಪಿರುವುದಾಗಿ ಕೇಂದ್ರ ಸರಕಾರವು ಹೇಳಿದೆ.
೧. ಕಳೆದ ಒಂದು ವರ್ಷದಲ್ಲಿ ಅನೇಕ ಪ್ರಮುಖ ಮಾವೋವಾದಿ ನಾಯಕರು ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಇತ್ತೀಚೆಗಷ್ಟೇ ಮಾರ್ಚ್ 25 ರಂದು ಒಡಿಶಾದಲ್ಲಿ ಬೇಕಾಗಿದ್ದ ಕುಖ್ಯಾತ ಮಾವೋವಾದಿ ನಾಯಕ ಸುಕ್ರು ಸೇರಿದಂತೆ 4 ಜನರು ಪೊಲೀಸರ ಎದುರು ಶರಣಾಗಿದ್ದಾರೆ. ಈ ನಾಲ್ವರ ಮೇಲೆ ಒಟ್ಟು 66 ಲಕ್ಷ ರೂಪಾಯಿಗಳ ಬಹುಮಾನವಿತ್ತು.
೨. ಒಡಿಶಾ ಪೊಲೀಸರ ಹೆಚ್ಚುವರಿ ಮಹಾನಿರ್ದೇಶಕ ಸಂಜೀವ ಪಾಂಡಾ ಅವರ ಮಾಹಿತಿಯ ಪ್ರಕಾರ, ಕಂಧಮಾಲ್ ಜಿಲ್ಲೆಯಲ್ಲಿ ಈಗ ಕೇವಲ 8 ರಿಂದ 9 ನಕ್ಸಲೀಯರು ಮಾತ್ರ ಉಳಿದಿದ್ದಾರೆ. ‘ಉಳಿದ ನಕ್ಸಲೀಯರೂ ಕೂಡ ಶರಣಾಗಬೇಕು’ ಎಂದು ಕರೆ ನೀಡಿದ ಅವರು, ‘ಸರಕಾರದ ಪುನರ್ವಸತಿ ನೀತಿಯ ಪೂರ್ಣ ಪ್ರಯೋಜನ ನೀಡಲಾಗುವುದು’ ಎಂದು ಭರವಸೆ ನೀಡಿದರು. ಮೊದಲ ಬಾರಿಗೆ ಛತ್ತೀಸಗಢದ ದಂಡಕಾರಣ್ಯದಲ್ಲೂ ನಕ್ಸಲ್ ಸಂಘಟನೆಯ ಬಹುತೇಕ ನಾಯಕತ್ವವಿಲ್ಲದಂತಾಗಿದೆ. ಇದನ್ನು ಸರಕಾರದ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !