ಲವ್ ಜಿಹಾದ್‌ನಲ್ಲಿ ಸಿಲುಕಿದ ಹಿಂದೂ ಯುವತಿಯಿಂದ ೧ ತಿಂಗಳು ರಂಜಾನ್ ಉಪವಾಸ!

  • ಮೂಡಿಗೆರೆಯಲ್ಲಿ ನಡೆದ ಘಟನೆ

  • ದೇವಾಲಯಕ್ಕೆ ಹೋಗುವ ಬದಲು ನಮಾಜ್

ಚಿಕ್ಕಮಗಳೂರು – ಜಿಲ್ಲೆಯ ಮೂಡಿಗೆರೆಯಲ್ಲಿ ಲವ್ ಜಿಹಾದ್ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದರಲ್ಲಿನ ಹಿಂದೂ ಸಂತ್ರಸ್ತೆಯು ಹನ್ನೆರಡನೇ ತರಗತಿಯಲ್ಲಿ ಓದುತ್ತಿದ್ದು, ಕಾಲೇಜಿನಲ್ಲಿ ಓದುತ್ತಿರುವ ಲವ್ ಜಿಹಾದಿಯೊಬ್ಬನ ಪ್ರೇಮಪಾಶಕ್ಕೆ ಸಿಲುಕಿದ್ದಾಳೆ. ಈ ಬಗ್ಗೆ ಕಳೆದ ವಾರ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ದಾಖಲಾಗಿತ್ತು. ಹಿಂದುತ್ವವಾದಿ ಸಂಘಟನೆಗಳು ತನ್ನ ಮೇಲೆ ಹಲ್ಲೆ ನಡೆಸಿವೆ ಎಂದು ಮುಸ್ಲಿಂ ಯುವಕ ದೂರು ನೀಡಿದ್ದರೆ, ಹಿಂದೂಗಳು ಆತನ ವಿರುದ್ಧ ‘ಪೋಕ್ಸೋ’ (POCSO) ಕಾಯ್ದೆಯಡಿ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ಹೊಸ ಮಾಹಿತಿಯನ್ನು ನೀಡಿದ್ದಾರೆ. ಅದರಂತೆ ಸಂತ್ರಸ್ತೆಯು ತನ್ನ ಪ್ರಿಯಕರನ ಮಾತಿನಂತೆ ರಂಜಾನ್ ತಿಂಗಳಲ್ಲಿ ಮನೆಯಲ್ಲಿಯೇ ಒಂದು ತಿಂಗಳ ಕಾಲ ಉಪವಾಸ (ರೋಜಾ) ಆಚರಿಸಿದ್ದಾಳೆ. ಅಲ್ಲದೆ, ಅವಳು ದೇವಸ್ಥಾನಕ್ಕೆ ಹೋಗುವ ಬದಲು ಪ್ರತಿದಿನ ನಮಾಜ್ ಮಾಡುತ್ತಿದ್ದಳು. ಮದುವೆಗೂ ಮುನ್ನವೇ ಮತಾಂತರವಾಗುವಂತೆ ಆತ ಒತ್ತಾಯಿಸಿದ್ದಾನೆ ಎಂಬ ಆರೋಪವೂ ಕೇಳಿಬರುತ್ತಿದೆ. ‘ನನ್ನ ಮಾತು ಕೇಳದಿದ್ದರೆ ನಿನ್ನ ತಂದೆ-ತಾಯಿಯನ್ನು ಸಾಯಿಸುತ್ತೇನೆ’ ಎಂದು ಆತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯರಲ್ಲಿನ ಧರ್ಮಾಭಿಮಾನದ ಕೊರತೆಯಿಂದಾಗಿ ಅವರು ಇಂತಹ ಕೃತ್ಯಗಳನ್ನು ಮಾಡುತ್ತಾರೆ. ಹಿಂದೂ ಹುಡುಗನನ್ನು ಪ್ರೀತಿಸುವ ಮುಸ್ಲಿಂ ಹುಡುಗಿ ಎಂದಿಗೂ ಹಿಂದೂ ಧರ್ಮದ ಆಚರಣೆಗಳನ್ನು ಪಾಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ. ಈ ಸ್ಥಿತಿಯು ಬೃಹತ್ ಹಿಂದೂ ಸಮಾಜಕ್ಕೆ ನಾಚಿಕೆಗೇಡು!