ಕಾಶ್ಮೀರದ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ

ಪಾಕ್ ಪ್ರೇರಿತ ಭಯೋತ್ಪಾದಕ ಹಾಫೀಜ್ ಸಯೀದ್ ಮತ್ತು ಸೈಯದ್ ಸಲಾಹುದ್ದೀನ್ ಜೊತೆಗೆ ಸಂಪರ್ಕವಿತ್ತು

ನವದೆಹಲಿ – ಭಯೋತ್ಪಾದನೆಯ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದ ದೆಹಲಿ ನ್ಯಾಯಾಲಯವು, ಕಾಶ್ಮೀರಿ ಪ್ರತ್ಯೇಕತಾವಾದಿ ಮಹಿಳಾ ನಾಯಕಿ ಮತ್ತು ‘ದುಖ್ತರನ್-ಎ-ಮಿಲ್ಲತ್’ ಮುಖ್ಯಸ್ಥೆ ಆಸಿಯಾ ಅಂದ್ರಾಬಿಗೆ ‘ಕಾಯ್ದೆಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ’ ಅಂದರೆ ಯುಎಪಿಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದೇ ಪ್ರಕರಣದಲ್ಲಿ ನ್ಯಾಯಾಲಯವು ಆಕೆಯ ಸಹಚರರಾದ ಸೋಫಿ ಫಹಮಿದಾ ಮತ್ತು ನಹಿದಾ ನಸ್ರೀನ್ ಗೆ ೩೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ‘ಅಂದ್ರಾಬಿಯ ಕೃತ್ಯಗಳು ಭಾರತದ ವಿರುದ್ಧ ಯುದ್ಧ ಸಾರುವಂತೆಯೇ ಇವೆ’ ಎಂದು ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ನ್ಯಾಯಾಲಯ ಈ ವಾದವನ್ನು ಪುರಸ್ಕರಿಸಿದೆ. ಆಸಿಯಾ ಅವರ ಶಿಕ್ಷೆಯು ಜಿಹಾದಿ ಭಯೋತ್ಪಾದನೆಯನ್ನು ಉತ್ತೇಜಿಸುವ, ಜಿಹಾದಿ ಚಟುವಟಿಕೆಗಳಿಗೆ ಧನಸಹಾಯ ಮತ್ತು ಗಡಿಯಾಚೆಗಿನ ಸಮನ್ವಯದ ಮೂಲಕ ಭಾರತ ವಿರೋಧಿ ಕೃತ್ಯಗಳಿಗೆ ಉತ್ತೇಜನ ನೀಡಿದ ಆರೋಪ ಎದುರಿಸುತ್ತಿರುವ ಅನೇಕ ಪ್ರತ್ಯೇಕತಾವಾದಿ ಗುಂಪುಗಳ ವಿರುದ್ಧದ ಭದ್ರತಾ ಸಂಸ್ಥೆಗಳ ಸುದೀರ್ಘ ಹೋರಾಟಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

೧. ಶಿಕ್ಷೆಯ ಪ್ರಮಾಣದ ಕುರಿತು ವಿವರವಾದ ವಾದ-ಪ್ರತಿವಾದಗಳು ನಡೆದ ನಂತರ ಹೆಚ್ಚುವರಿ ಸತ್ರ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ಈ ತೀರ್ಪನ್ನು ಪ್ರಕಟಿಸಿದರು. ಈ ಮೂವರನ್ನೂ ಈ ಹಿಂದೆ ಜನವರಿ ೧೪ ರಂದು ಯುಎಪಿಎಯ ಹಲವಾರು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಸೆಕ್ಷನ್ ೨೦ (ಭಯೋತ್ಪಾದಕ ಸಂಘಟನೆಯ ಸದಸ್ಯತ್ವ), ೩೮ (ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ) ಮತ್ತು ೩೯ (ಭಯೋತ್ಪಾದಕ ಸಂಘಟನೆಗೆ ಬೆಂಬಲ) ಸೇರಿವೆ.

೨. ನ್ಯಾಯಾಲಯವು ಈಕೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ ಎ (ಗುಂಪುಗಳ ನಡುವೆ ದ್ವೇಷವನ್ನು ಹೆಚ್ಚಿಸುವುದು), ೧೫೩ ಬಿ (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಕೃತ್ಯಗಳು), ೧೨೦ ಬಿ (ಅಪರಾಧದ ಪಿತೂರಿ), ೫೦೫ (ಸಾರ್ವಜನಿಕ ಶಾಂತಿಗೆ ಭಂಗ ತರುವ ಹೇಳಿಕೆಗಳು) ಮತ್ತು ೧೨೧ ಎ (ರಾಜ್ಯದ ವಿರುದ್ಧ ಯುದ್ಧ ಸಾರುವ ಪಿತೂರಿ) ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ಬೇಡಿಕೆ

೧. ಆಸಿಯಾ ಅಂದ್ರಾಬಿಗೆ ಗರಿಷ್ಠ ಮತ್ತು ಕಠಿಣ ಶಿಕ್ಷೆ ನೀಡಬೇಕು.

೨. ದೇಶ ವಿರೋಧಿ ಪಿತೂರಿಗಳನ್ನು ತಡೆಯಲು ಮತ್ತು ದೇಶದ ಸಾರ್ವಭೌಮತ್ವವನ್ನು ಅಖಂಡವಾಗಿಡಲು ಆಕೆಗೆ ಕಠಿಣ ಶಿಕ್ಷೆಯಾಗಬೇಕು.

ಆಸಿಯಾ ಅಂದ್ರಾಬಿ ಯಾರ ಸಂಪರ್ಕದಲ್ಲಿದ್ದಳು?

೧. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಾಫೀಜ್ ಸಯೀದ್ ಮತ್ತು ‘ಹಿಜ್ಬುಲ್ ಮುಜಾಹಿದ್ದೀನ್’ ಭಯೋತ್ಪಾದಕ ಸೈಯದ್ ಸಲಾಹುದ್ದೀನ್.

೨. ಅನೇಕ ಅಂತರಾಷ್ಟ್ರೀಯ ಮತ್ತು ಗಡಿಯಾಚೆಗಿನ ಭಯೋತ್ಪಾದಕರು.

೩. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತು ಅವರ ವಿದೇಶಾಂಗ ನೀತಿ ಸಲಹೆಗಾರ ಸರ್ತಾಜ್ ಅಜೀಜ್.

೪. ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಕಚೇರಿಯ ಅಧಿಕಾರಿಗಳು.

ಸಂಪಾದಕೀಯ ನಿಲುವು

ದೇಶವಿರೋಧಿ ಕೃತ್ಯಗಳನ್ನು ಎಸಗುವಲ್ಲಿ ಮತಾಂಧ ಮುಸಲ್ಮಾನ ಪುರುಷರ ಜೊತೆಗೆ ಇಂತಹ ಮುಸಲ್ಮಾನ ಮಹಿಳೆಯರೂ ಹಿಂದೆ ಬಿದ್ದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !